ಆಸ್ಕರ್ ರೇಸ್ ನಿಂದ ಹೊರಬಿದ್ದ ರಾಜಕುಮಾರ್ ರಾವ್ ಸಿನಿಮಾ
90ನೇ ಆಸ್ಕರ್ ಪ್ರಶಸ್ತಿ ಸ್ಪರ್ಧೆಯಿಂದ ಭಾರತದ 'ನ್ಯೂಟನ್' ಸಿನಿಮಾ ಹೊರಬಿದ್ದಿದೆ. ಅತ್ಯುತ್ತಮ ವಿದೇಶಿ ಚಿತ್ರ ವಿಭಾಗದಲ್ಲಿ ಭಾರತದಿಂದ ಅಧಿಕೃತವಾಗಿ ಆಯ್ಕೆಯಾಗಿದ್ದ 'ನ್ಯೂಟನ್' ಸಿನಿಮಾದ ಮೇಲೆ ದೊಡ್ಡ ಭರವಸೆ ಮೂಡಿತ್ತು. ಆದ್ರೀಗ, ಸ್ಪರ್ಧೆಯಿಂದ ಹೊರಬೀಳುವ ಮೂಲಕ ನಿರಾಸೆ ಉಂಟಾಗಿದೆ.
ಈ ಬಗ್ಗೆ ಆಸ್ಕರ್ ಆಯ್ಕೆ ಸಮಿತಿ ಸ್ಪಷ್ಟಪಡಿಸಿದ್ದು, ಆಸ್ಕರ್ ಪ್ರಶಸ್ತಿ ರೇಸ್ ನಲ್ಲಿರುವ ಒಂಭತ್ತು ಚಿತ್ರಗಳ ಪೈಕಿ ಭಾರತದ 'ನ್ಯೂಟನ್' ಇಲ್ಲ ಎಂದು ಖಚಿತಪಡಿಸಿದ್ದಾರೆ.

ಇನ್ನುಳಿದಂತೆ ಚಿಲಿ ಮೂಲದ 'ಫೆಂಟಾಸ್ಟಿಕ್ ವುಮನ್', ಜರ್ಮನಿಯ 'ಇನ್ ದಿ ಫೇಡ್', ಹಗೇರಿಯ 'ಆನ್ ಬಾಡಿ ಅಂಡ್ ಸೋಲ್', ಇಸ್ರೇಲ್ ನ 'ಫಾಕ್ಸ್ ಟ್ರಾಟ್', ಲೆಬೆನಾನ್ ನ 'ದಿ ಇನ್ಸಲ್ಟ್', ಸ್ವೀಡನ್ ನ 'ದಿ ಸ್ಕ್ವಯರ್', ಸೆನೆಗಲ್ ನ 'ಫೆಲಿಸಿಟ್', ರಷ್ಯಾದ 'ಲವ್ ಲೆಸ್' ಮತ್ತು ದಕ್ಷಿಣ ಆಫ್ರಿಕಾದ 'ದಿ ವೌಂಡ್' ಚಿತ್ರಗಳು ಮುಂದಿನ ಸುತ್ತಿಗೆ ಆಯ್ಕೆಯಾಗಿದೆ. ಜನವರಿ 23 ರಂದು 90ನೇ ಆಸ್ಕರ್ ಪ್ರಶಸ್ತಿ ಫಲಿತಾಂಶ ಪ್ರಕಟವಾಗಲಿದೆ.

ಇದುವರೆಗೂ ಭಾರತದ ಚಿತ್ರ ಆಸ್ಕರ್ ಪ್ರಶಸ್ತಿ ಗೆದ್ದಿಲ್ಲ. ಕೊನೆಯದಾಗಿ 2001ರಲ್ಲಿ 'ಲಗಾನ್' ಸಿನಿಮಾ ಅತ್ಯುತ್ತಮ ವಿದೇಶಿ ವಿಭಾಗದಲ್ಲಿ ಟಾಪ್ 5ನೇ ಸ್ಥಾನಕ್ಕೆ ಹೋಗಿತ್ತು ಎನ್ನುವುದಷ್ಟೇ ಸಾಧನೆ. ಅದಕ್ಕು ಮುಂಚೆ 'ಮದರ್ ಇಂಡಿಯಾ' (1958), ಹಾಗೂ 'ಸಲಾಂ ಬಾಂಬೆ' (1989) ಚಿತ್ರಗಳು ಟಾಪ್ 5ನೇ ಸ್ಥಾನಕ್ಕೆ ಹೋಗಿದ್ದವು.


Click it and Unblock the Notifications











