twitter
    For Quick Alerts
    ALLOW NOTIFICATIONS  
    For Daily Alerts

    ಆಸ್ಕರ್ ರೇಸ್ ನಿಂದ ಹೊರಬಿದ್ದ ರಾಜಕುಮಾರ್ ರಾವ್ ಸಿನಿಮಾ

    By Bharath Kumar
    |

    90ನೇ ಆಸ್ಕರ್ ಪ್ರಶಸ್ತಿ ಸ್ಪರ್ಧೆಯಿಂದ ಭಾರತದ 'ನ್ಯೂಟನ್' ಸಿನಿಮಾ ಹೊರಬಿದ್ದಿದೆ. ಅತ್ಯುತ್ತಮ ವಿದೇಶಿ ಚಿತ್ರ ವಿಭಾಗದಲ್ಲಿ ಭಾರತದಿಂದ ಅಧಿಕೃತವಾಗಿ ಆಯ್ಕೆಯಾಗಿದ್ದ 'ನ್ಯೂಟನ್' ಸಿನಿಮಾದ ಮೇಲೆ ದೊಡ್ಡ ಭರವಸೆ ಮೂಡಿತ್ತು. ಆದ್ರೀಗ, ಸ್ಪರ್ಧೆಯಿಂದ ಹೊರಬೀಳುವ ಮೂಲಕ ನಿರಾಸೆ ಉಂಟಾಗಿದೆ.

    ಈ ಬಗ್ಗೆ ಆಸ್ಕರ್ ಆಯ್ಕೆ ಸಮಿತಿ ಸ್ಪಷ್ಟಪಡಿಸಿದ್ದು, ಆಸ್ಕರ್ ಪ್ರಶಸ್ತಿ ರೇಸ್ ನಲ್ಲಿರುವ ಒಂಭತ್ತು ಚಿತ್ರಗಳ ಪೈಕಿ ಭಾರತದ 'ನ್ಯೂಟನ್' ಇಲ್ಲ ಎಂದು ಖಚಿತಪಡಿಸಿದ್ದಾರೆ.

    Rajkummar Rao's Newton Out of Oscar race

    ಇನ್ನುಳಿದಂತೆ ಚಿಲಿ ಮೂಲದ 'ಫೆಂಟಾಸ್ಟಿಕ್ ವುಮನ್', ಜರ್ಮನಿಯ 'ಇನ್ ದಿ ಫೇಡ್', ಹಗೇರಿಯ 'ಆನ್ ಬಾಡಿ ಅಂಡ್ ಸೋಲ್', ಇಸ್ರೇಲ್ ನ 'ಫಾಕ್ಸ್ ಟ್ರಾಟ್', ಲೆಬೆನಾನ್ ನ 'ದಿ ಇನ್ಸಲ್ಟ್', ಸ್ವೀಡನ್ ನ 'ದಿ ಸ್ಕ್ವಯರ್', ಸೆನೆಗಲ್ ನ 'ಫೆಲಿಸಿಟ್', ರಷ್ಯಾದ 'ಲವ್ ಲೆಸ್' ಮತ್ತು ದಕ್ಷಿಣ ಆಫ್ರಿಕಾದ 'ದಿ ವೌಂಡ್' ಚಿತ್ರಗಳು ಮುಂದಿನ ಸುತ್ತಿಗೆ ಆಯ್ಕೆಯಾಗಿದೆ. ಜನವರಿ 23 ರಂದು 90ನೇ ಆಸ್ಕರ್ ಪ್ರಶಸ್ತಿ ಫಲಿತಾಂಶ ಪ್ರಕಟವಾಗಲಿದೆ.

    ರಾಜ್ ಕುಮಾರ್ ರಾವ್ ಅಭಿನಯದ ಚಿತ್ರ ಆಸ್ಕರ್ ಸ್ಪರ್ಧೆಗೆ ಎಂಟ್ರಿರಾಜ್ ಕುಮಾರ್ ರಾವ್ ಅಭಿನಯದ ಚಿತ್ರ ಆಸ್ಕರ್ ಸ್ಪರ್ಧೆಗೆ ಎಂಟ್ರಿ

    Rajkummar Rao's Newton Out of Oscar race

    ಇದುವರೆಗೂ ಭಾರತದ ಚಿತ್ರ ಆಸ್ಕರ್ ಪ್ರಶಸ್ತಿ ಗೆದ್ದಿಲ್ಲ. ಕೊನೆಯದಾಗಿ 2001ರಲ್ಲಿ 'ಲಗಾನ್' ಸಿನಿಮಾ ಅತ್ಯುತ್ತಮ ವಿದೇಶಿ ವಿಭಾಗದಲ್ಲಿ ಟಾಪ್ 5ನೇ ಸ್ಥಾನಕ್ಕೆ ಹೋಗಿತ್ತು ಎನ್ನುವುದಷ್ಟೇ ಸಾಧನೆ. ಅದಕ್ಕು ಮುಂಚೆ 'ಮದರ್ ಇಂಡಿಯಾ' (1958), ಹಾಗೂ 'ಸಲಾಂ ಬಾಂಬೆ' (1989) ಚಿತ್ರಗಳು ಟಾಪ್ 5ನೇ ಸ್ಥಾನಕ್ಕೆ ಹೋಗಿದ್ದವು.

    ಆಸ್ಕರ್ ಗೆ ಆಯ್ಕೆಯಾದ 'ನ್ಯೂಟನ್' ಚಿತ್ರದಲ್ಲಿ ಅಂತಹದ್ದೇನಿದೆ? ಆಸ್ಕರ್ ಗೆ ಆಯ್ಕೆಯಾದ 'ನ್ಯೂಟನ್' ಚಿತ್ರದಲ್ಲಿ ಅಂತಹದ್ದೇನಿದೆ?

    English summary
    Rajkummar Rao's Newton Out of Oscar race. Newton India’s official entry in the Best Foreign Language category at the 90th Academy Awards, now is out of the Oscars race.
    Friday, December 15, 2017, 18:55
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X