»   » ಬಿಗ್ ಬಿ ಅಮಿತಾಬ್ ಬಚ್ಚನ್ ಕಾಲಿಗೆ ಬಿದ್ದ ರಜನಿ

ಬಿಗ್ ಬಿ ಅಮಿತಾಬ್ ಬಚ್ಚನ್ ಕಾಲಿಗೆ ಬಿದ್ದ ರಜನಿ

Posted By:
Subscribe to Filmibeat Kannada

2014ನೇ ಸಾಲಿನ ಭಾರತದ 45ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಗೋವಾದಲ್ಲಿ ಅದ್ದೂರಿ ಚಾಲನೆ ಸಿಕ್ಕಿದೆ. ಭಾರತೀಯ ಚಿತ್ರರಂಗದ ಇಬ್ಬರು ಘಟಾನುಘಟಿಗಳು ಒಂದೇ ವೇದಿಕೆಯಲ್ಲಿ ಸಾಕ್ಷಿಯಾಗಿದ್ದು ಈ ಚಲನಚಿತ್ರೋತ್ಸವದ ವಿಶೇಷ.

ಬಾಲಿವುಡ್ ನ ಬಿಗ್ ಬಿ ಅಮಿತಾಬ್ ಬಚ್ಚನ್ ಮತ್ತು ಕಾಲಿವುಡ್ ನ ಸೂಪರ್ ಸ್ಟಾರ್ ರಜನಿಕಾಂತ್ ಕಾರ್ಯಕ್ರಮದ ಉದ್ಘಾಟನೆಯಲ್ಲಿ ಪಾಲ್ಗೊಂಡು, ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಮೆರುಗು ನೀಡಿದರು.

ಇದೇ ಕಾರ್ಯಕ್ರಮದಲ್ಲಿ ಮತ್ತೊಂದು ಅಚ್ಚರಿ ನಡೆಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅಮಿತಾಬ್ ಬಚ್ಚನ್ ಪಾಲ್ಗೊಂಡಿದ್ದರೆ, ಸೆಂಟಿನರಿ ಅವಾರ್ಡ್ ಮುಡಿಗೇರಿಸಿಕೊಳ್ಳುವುದಕ್ಕೆ ರಜನಿ ಹಾಜರಾಗಿದ್ದರು. ಪ್ರಶಸ್ತಿ ಪಡೆಯುವ ಸಂದರ್ಭದಲ್ಲಿ ರಜನಿ ಕೊಂಚವೂ ಹಿಂಜರಿಯದೆ, ಅಮಿತಾಬ್ ಕಾಲಿಗೆ ಬಿದ್ದು ಆಶೀರ್ವಾದ ಪಡೆಯೋಕೆ ಮುಂದಾದರು.

Rajnikanth bows his head to Amitabh Bachchan at IFFI

ಅಮಿತಾಬ್ ರವರನ್ನ ತಮ್ಮ ಸಹೋದರ ಅಂತಲೇ ಪರಿಗಣಿಸಿರುವ ರಜನಿಕಾಂತ್, ಅಣ್ಣನ ಆಶೀರ್ವಾದದೊಂದಿಗೆ ಪ್ರಶಸ್ತಿಯನ್ನು ಸ್ವೀಕರಸಿ, ''ಇಂತ ಅತ್ತ್ಯುನ್ನತ ಪ್ರಶಸ್ತಿಯನ್ನು ಪಡೆಯುತ್ತಿರುವುದು ತುಂಬ ಹೆಮ್ಮೆಯ ವಿಷಯ. ಭಾರತೀಯ ಸರ್ಕಾರಕ್ಕೆ ಮತ್ತು ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ನನ್ನ ಕೃತಜ್ಞತೆಗಳು. [ಗೋವಾಕ್ಕೆ ಹಾರಲಿರುವ ಅಮಿತಾಬ್ -ರಜನಿಕಾಂತ್]

ಈ ಪ್ರಶಸ್ತಿಯನ್ನು ನನ್ನೆಲ್ಲಾ ನಿರ್ಮಾಪಕರಿಗೆ, ನಿರ್ದೇಶಕರಿಗೆ ಮತ್ತು ನನ್ನ ಅಭಿಮಾನಿಗಳಿಗೆ ಅರ್ಪಿಸುತ್ತೇನೆ. ಅಮಿತಾಬ್ ಜಿ ಮಾಡಿರುವ ಅದ್ಭುತ ಭಾಷಣವನ್ನು ಕೇಳಿ ನನಗೆ ಮಾತುಗಳೇ ಹೊರಡುತ್ತಿಲ್ಲ'' ಎಂದರು.

ತಮಗಿಂತಲೂ ಸೀನಿಯರ್ ಆಗಿರುವ ಅಮಿತಾಬ್ ಬಗ್ಗೆ ರಜನಿಕಾಂತ್ ಗೆ ಅಪಾರ ಗೌರವ. ''ಇಬ್ಬರನ್ನೂ ಒಂದೇ ತಕ್ಕಡಿಯಲ್ಲಿ ತೂಗುವುದು ಸರಿಯಲ್ಲ, ಅಮಿತಾಬ್ ಭಾರತೀಯ ಚಿತ್ರರಂಗಕ್ಕೆ ಸಾಮ್ರಾಟನಾಗಿದ್ದರೆ, ನಾನು ಕೇವಲ ರಾಜನಷ್ಟೇ'' ಅಂತ ಹಲವಾರು ವರ್ಷಗಳ ಹಿಂದೆ ಹೇಳಿಕೆ ನೀಡಿದ್ದ ರಜನಿ, ಇಂದು ಅವರಿಂದಲೇ ಅಶೀರ್ವಾದ ಪಡೆದು ಪ್ರಶಸ್ತಿ ಸ್ವೀಕರಿಸಿದ್ದು ತುಂಬಾನೇ ಸ್ಪೆಷಲ್. [ರಾಜ್ ಸ್ಮಾರಕ ಲೋಕಾರ್ಪಣೆಗೆ ಬಿಗ್ ಬಿ, ರಜನಿ, ಚಿರು]

ಯಶಸ್ಸಿನ ಉತ್ತುಂಗಕ್ಕೆ ಏರ್ತಿದ್ದ ಹಾಗೆ, ಅಹಂ ಬೆಳೆಸಿಕೊಳ್ಳುವ ಅನೇಕ ನಟರ ಮಧ್ಯೆ ರಜನಿಕಾಂತ್ ಅಪೂರ್ವ ರತ್ನ. ಅದಕ್ಕೆ ಈ ಘಟನೆಯೇ ಉತ್ತಮ ಉದಾಹರಣೆ. (ಏಜೆನ್ಸೀಸ್)

English summary
Rajnikanth's simplicity is known to all. Super star, who received the Centenary Award in IFFI, bowed his head to touch the feet of Amitabh Bachchan for his blessings.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada