»   » ನೆಲಕಚ್ಚುತ್ತಿರುವ ರಜನಿ ಚಿತ್ರಗಳು: ಕಂಗಾಲಾದ ಡಿಸ್ಟ್ರಿಬ್ಯೂಟರ್ಸ್

ನೆಲಕಚ್ಚುತ್ತಿರುವ ರಜನಿ ಚಿತ್ರಗಳು: ಕಂಗಾಲಾದ ಡಿಸ್ಟ್ರಿಬ್ಯೂಟರ್ಸ್

Posted By:
Subscribe to Filmibeat Kannada

ಸೂಪರ್ ಸ್ಟಾರ್ ರಜನಿಕಾಂತ್ ಅವರ ಹೊಸ ಚಿತ್ರ ಬಿಡುಗಡೆಯೆಂದರೆ ಅವರ ಕೋಟ್ಯಾಂತರ ಅಭಿಮಾನಿಗಳಿಗೆ ಹೆಚ್ಚುವರಿ ಪೊಂಗಲ್ ಹಬ್ಬ ಬಂದಂತೆ.

ಕ್ಲಾಸ್ ಮತ್ತು ಮಾಸ್ ಪ್ರೇಕ್ಷಕರನ್ನು ಲಕಲಕಲಕಾ.. ಎಂದು ಚಿತ್ರಮಂದಿರದತ್ತ ಸೆಳೆಯುವ ಅಸಾಧಾರಣ ತಾಕತ್ ರಜನಿಕಾಂತ್ ಅವರ ಚಿತ್ರದಲ್ಲಿತ್ತು.

ಮನೆಮಠ ಅಡವಿಟ್ಟು ರಜನಿಕಾಂತ್ ಚಿತ್ರದ ಡಿಸ್ಟ್ರಿಬ್ಯೂಟರ್ಸ್ ರೈಟ್ಸ್ ಪಡೆಡು ಕೋಟಿ ಕೋಟಿ ಲೆಕ್ಕದಲ್ಲಿ ಲಾಭ ಬಾಚಿ ಕೊಳ್ಳುತ್ತಿದ್ದ ಕಾಲವಿತ್ತು. (ಬಾಕ್ಸಾಫೀಸಿನಲ್ಲಿ ಲಿಂಗಾ ಥಂಡಾ)

ರೈಟ್ಸ್ ಗಾಗಿ ಚೆನ್ನೈನಲ್ಲಿ ಹಂಚಿಕೆದಾರರ ನಡುವೆ ಹೊಡೆದಾಟವೇ ನಡೆಯುತ್ತಿತ್ತಂತೆ.ರೈಟ್ಸ್ ಗಾಗಿ ರಾಜಕೀಯ ಮಟ್ಟದಲ್ಲೂ ಲಾಭಿ ನಡೆಯುತ್ತಿತ್ತು ಎನ್ನುವುದು ವಾಸ್ತವತೆ. ಆದರೆ ಇದು ಸದ್ಯದ ಮಟ್ಟಿಗೆ ಇತಿಹಾಸ ಎನ್ನುವತ್ತ ಸಾಗುತ್ತಿದೆ ರಜನಿ ಚಿತ್ರಗಳು.

ಅದ್ಯಾಕೋ, ರಜನಿಕಾಂತ್ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಇನ್ನಿಲ್ಲದಂತೇ ಮುಗ್ಗರಿಸುತ್ತಿವೆ. ರೈಟ್ಸ್ ಪಡೆದವರು ಮನೆಮಠ ಮಾರಿಕೊಳ್ಳುವಂತಹ ಪರಿಸ್ಥಿತಿ ಬಂದಿದೆ ಎನ್ನುವುದು ಪಕ್ಕದ ತಮಿಳುನಾಡಿನಿಂದ ಬರುತ್ತಿರುವ ಕಹಿಸುದ್ದಿ.

ಕೊಚಾಡಿಯನ್ ಚಿತ್ರ ನೆಲಕಚ್ಚಿದಾಗ ಬ್ಯಾಂಕ್ ಗ್ಯಾರಂಟಿಯಾಗಿ ಇಟ್ಟಿದ್ದ ರಜನಿ ಪತ್ನಿಯ ಹೆಸರಿನಲ್ಲಿದ್ದ ಕಾಂಚೀಪುರಂ ಬಳಿಯ ಜಮೀನನ್ನು EXIM ಬ್ಯಾಂಕ್ ಹರಾಜಿಗೆ ಇಟ್ಟ ಸುದ್ದಿಯನ್ನು ಈಗಾಗಲೇ ನಮ್ಮ ಅಂತರ್ಜಾಲದಲ್ಲಿ ಓದಿರುತ್ತೀರಿ. (ರಜನಿಕಾಂತ್ ಪತ್ನಿ ಜಮೀನು ಹರಾಜು)

ಲಿಂಗಾ ಚಿತ್ರದ ಹಂಚಿಕೆದಾರರಿಂದ ಧರಣಿ ಬೆದರಿಕೆ..

ಮೊದಲ 2-3 ದಿನ ಮಾತ್ರ ಹೌಸ್ ಫುಲ್ ಬೋರ್ಡ್

ರಜನಿಕಾಂತ್ ಅಭಿನಯದ ಇತ್ತೀಚಿನ ಚಿತ್ರಗಳು ಮೊದಲೆರಡು ದಿನ ಮಾತ್ರ ಹೌಸ್ ಫುಲ್ ಬೋರ್ಡ್ ಕಾಣುತ್ತಿದೆ. ನಂತರ ಅರ್ಧ, ಅದಾದ ನಂತರ ಕಾಲು, ಆಮೇಲೆ ಚಿತ್ರಮಂದಿರ ಬಿಕೋ..ಅದಕ್ಕೆ ಇತ್ತೀಚಿನ ತಾಜಾ ಉದಾಹರಣೆಯೆಂದರೆ ಲಿಂಗಾ ಚಿತ್ರ. ವಿಶ್ವಾದ್ಯಂತ ಬಿಡುಗಡೆಯಾಗಿದ್ದ ಲಿಂಗಾ ಚಿತ್ರವನ್ನು ಮೊದಲ 2-3 ದಿನ ಅಭಿಮಾನಿಗಳು ಅದ್ದೂರಿಯಿಂದ ಸ್ವಾಗತಿಸಿದ್ದರು.

ಲಿಂಗಾ ಚಿತ್ರದ ಕಥೆ ಕೂಡಾ ಹಾಗೇ..

ಟ್ವಿಟರ್ ಟ್ರೆಂಡಿಂಗ್ ನಲ್ಲೂ ಟಾಪ್ ಟೆನ್ ಸ್ಥಾನ ಪಡೆದಿದ್ದ ಲಿಂಗಾ ಚಿತ್ರ ಮೊದಲೆರಡು ದಿನ ಭರ್ಜರಿ ಫಸಲನ್ನೇ ನೀಡಿತ್ತು. ಆದರೆ, ಚಿತ್ರದ ಗೆಲುವಿನ ಅಭಿಯಾನ ಮುಂದಿನ ದಿನಗಳಲ್ಲಿ ಮುಂದುವರಿಯಲೇ ಇಲ್ಲ. ಜೊತೆಗೆ ಅಮೀರ್ ಖಾನ್ ಅವರ ಪಿಕೆ ಚಿತ್ರ ಕೂಡಾ ರಾಷ್ಟೀಯ ಮಟ್ಟದಲ್ಲಿ ಈ ಚಿತ್ರಕ್ಕೆ ಭಾರೀ ಹೊಡೆತ ನೀಡಿತು.

ಲಿಂಗಾ ಚಿತ್ರದ ಕರ್ನಾಟಕದ ಕಥೆ

ಕನ್ನಡದವರೇ ಆದ ರಾಕ್ಲೈನ್ ವೆಂಕಟೇಶ್ ಲಿಂಗಾ ಚಿತ್ರದ ನಿರ್ಮಾಪಕರಾಗಿದ್ದರಿಂದ ರಾಜ್ಯದಲ್ಲಿ ಹೆಚ್ಚಿನ ಚಿತ್ರಮಂದಿರ ಪಡೆಯುವಲ್ಲಿ ಶಕ್ತವಾಗಿದ್ದರು. ಅದಕ್ಕಿಂತ ಹೆಚ್ಚಾಗಿ ರಜನಿ ಚಿತ್ರಗಳಿಗೆ ಕರ್ನಾಟಕ ವಲಯ ಇನ್ನೊಂದು ಭರ್ಜರಿ ಆದಾಯ ತರುವ ಮಾರುಕಟ್ಟೆ. ಯಾವಾಗ ರಾಮಾಚಾರಿ ಅಬ್ಬರ ಶುರುವಾಯಿತೋ, ಲಿಂಗಾ ಚಿತ್ರಕ್ಕೆ ಇಲ್ಲೂ ಹೊಡೆತಬಿತ್ತು.

ರಜನಿಯ ಈ ಹಿಂದಿನ ಚಿತ್ರಗಳು ಸೋತಾಗ

ಹಿಂದಿನ ಕುಚೇಲನ್, ಬಾಬಾ, ಕೊಚಾಡಿಯನ್ ಚಿತ್ರ ಮುಗ್ಗರಿಸಿದಾಗಲೂ ಇಂತಹ ಪರಿಸ್ಥಿತಿಯನ್ನು ರಜನಿ ಎದುರಿಸ ಬೇಕಾಗಿತ್ತು. ಹಂಚಿಕೆದಾರರು ಸೋತು ಹೈರಾಣವಾಗಿದ್ದಾಗ ರಜನಿ ಅವರ ಸಹಾಯಕ್ಕೆ ನಿಂತಿದ್ದರು. ಅವರ ಈ ಒಳ್ಳೆ ಗುಣವೇ ಅವರನ್ನು ಇಂದು ತಲೈವಾರ್ ಸ್ಥಾನದಲ್ಲಿ ನಿಲ್ಲಿಸಿರುವುದು.

ಧರಣಿ ಮಾಡ್ತಾರಂತೆ ಲಿಂಗಾ ಹಂಚಿಕೆದಾರರು

ನೂರು ಕೋಟಿ ವೆಚ್ಚದಲ್ಲಿ ತಯಾರಾದ ಲಿಂಗಾ ಚಿತ್ರ ನೂರ ಎಂಬತ್ತು ಕೋಟಿ ರೂಪಾಯಿಗೆ ರಾಜ್ಯ ಮತ್ತು ಜಿಲ್ಲಾವಾರು ಹಂಚಿಕೆದಾರರಿಗೆ ಮಾರಿ ನಿರ್ಮಪಕ ರಾಕ್ಲೈನ್ ವೆಂಕಟೇಶ್ ಕೈತೊಳೆದು ಕೊಂಡಿದ್ದರಂತೆ. ಆದರೆ ಹಂಚಿಕೆದಾರರು ಮಾತ್ರ ಭಾರೀ ನಷ್ಟ ಅನುಭವಿಸುತ್ತಿದ್ದಾರೆ ಎನ್ನುವುದು ಸುದ್ದಿ.

ಜನವರಿ ಹತ್ತರಂದು ಧರಣಿ

ಲಿಂಗಾ ಸಿನಿಮಾದ ರೈಟ್ಸ್ ಪಡೆದಿದ್ದ ಡಿಸ್ಟ್ರಿಬ್ಯೂಟರ್ಸ್ ಸುಮಾರು 40 ಕೋಟಿಯಷ್ಟು ನಷ್ಟ ಮಾಡಿಕೊಂಡಿದ್ದು, ಆಗಿರುವ ನಷ್ಟ ತುಂಬಿಕೊಡುವಂತೆ ರಜಿನಿ ಅವರನ್ನು ಮನವಿ ಮಾಡಿದ್ದಾರೆ. ನಾವು ರಜನಿ ಸರ್ ಅವರನ್ನು ಪೂಜಿಸುತ್ತೇವೆ. ಅವರ ಮೇಲೆ ನಮಗೆ ಅಪಾರ ಗೌರವವಿದೆ. ನಮಾಗಾಗಿರುವ ನಷ್ಟಕ್ಕೆ ರಜನಿ ಸರ್ ಪರಿಹಾರ ಕೊಡಿಸಬೇಕು. ಇಲ್ಲದಿದ್ದಲ್ಲಿ ಶನಿವಾರ (ಜ 10) ರಜನಿ ಸರ್ ಮನೆ ಮುಂದೆ ಧರಣಿ ನಡೆಸುತ್ತೇವೆಂದು ವಿತರಕರು ತಿಳಿಸಿದ್ದಾರೆ.

ಶಿವಾಜಿ, ಚಂದ್ರಮುಖಿ ನಂತರ ಫ್ಲಾಪ್ ಸಿನಿಮಾಗಳು

ಶಿವಾಜಿ ಮತ್ತು ಚಂದ್ರಮುಖಿ ಚಿತ್ರದ ಯಶಸ್ಸಿನ ಹಾಗೇ ನಂತರದ ಸಿನಿಮಾಗಳು ರಜನಿಗೆ ಹೆಸರು ತಂದುಕೊಡಲಿಲ್ಲ. 2008ರಲ್ಲಿ ಬಂದ ಕುಚೇಲನ್ ನೆಲಕಚ್ಚಿತ್ತು. ನಂತರದ ಎಂದಿರನ್ ಚಿತ್ರ ಕೂಡ ನಿರೀಕ್ಷಿತ ಲಾಭ ತಂದುಕೊಡಲಿಲ್ಲ. ಇನ್ನು ಹೋದ ವರ್ಷದ ಕೊಚಾಡಿಯನ್ ಚಿತ್ರ ಸೋಲುಂಡಿತ್ತು ಮತ್ತು ಲೇಟೆಸ್ಟ್ ಲಿಂಗಾ ಚಿತ್ರ ಕೂಡಾ ಈಗ ಅದೇ ದಾರಿಗೆ ಸಾಗುತ್ತಿದೆ.

English summary
Rajnikanth's Lingaa movie fails in Box Office, reportedly caused huge losses to Distributors. Now distributors wants Rajniikanth to compensate, if not they are planning to sit Dharna in front of Rajni house in Chennai.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada