»   » ಕಿಚ್ಚನಿಗೆ ಮೆಚ್ಚುಗೆ ಚೂರಿಕಟ್ಟೆಗೆ ಹೊಗಳಿಕೆ

ಕಿಚ್ಚನಿಗೆ ಮೆಚ್ಚುಗೆ ಚೂರಿಕಟ್ಟೆಗೆ ಹೊಗಳಿಕೆ

Posted By:
Subscribe to Filmibeat Kannada

ಕಮರ್ಷಿಯಲ್ ಸಿನಿಮಾಗಳ ಮಧ್ಯೆ ಆಗಾಗ ಪ್ರಯೋಗಾತ್ಮಕ ಚಿತ್ರಗಳು ತೆರೆಗೆ ಬರುತ್ತಲೇ ಇರುತ್ತವೆ. ವಿಭಿನ್ನತೆ ಬೇಕು ಎಂದು ಬಯಸುವ ಪ್ರೇಕ್ಷಕರಿಗೆ ಇಂತಹ ಚಿತ್ರಗಳು ತುಂಬಾನೇ ಮೆಚ್ಚುಗೆ ಆಗುತ್ತವೆ. ಕಳೆದ ಒಂದು ವಾರದ ಹಿಂದೆ ಚಂದನವನದಲ್ಲಿ ಎರಡು ಸಿನಿಮಾಗಳು ತೆರೆ ಕಂಡಿದ್ದು. ಎರಡು ಚಿತ್ರಕ್ಕೆ ಭರ್ಜರಿ ಮೆಚ್ಚುಗೆ ವ್ಯಕ್ತವಾಗಿದೆ.

'ರಾಜು ಕನ್ನಡ ಮೀಡಿಯಂ' ಹಾಗೂ 'ಚೂರಿಕಟ್ಟೆ' ಚಿತ್ರಗಳು ಪ್ರೇಕ್ಷಕರ ಮನಸ್ಸನ್ನು ಗೆಲ್ಲುವುದರಲ್ಲಿ ಯಶಸ್ವಿ ಆಗಿವೆ. ಪರ ಭಾಷೆಯ ಸಿನಿಮಾಗಳನ್ನ ಹಿಂದಿಕ್ಕೆ ಬಿಡುಗಡೆಯಾದ ಮೊದಲ ವಾರವೇ ಮತ್ತಷ್ಟು ಚಿತ್ರ ಮಂದಿರಗಳಲ್ಲಿ ಸಿನಿಮಾಗಳು ಬಿಡುಗಡೆ ಆಗಿವೆ.

ಚೂರಿಕಟ್ಟೆ ವಿಮರ್ಶೆ: ಟೀಂಬರ್ ಮಾಫಿಯಾದಲ್ಲಿ ಪ್ರೀತಿಯ ಹೋರಾಟ

ರಾಜು ಕನ್ನಡ ಮೀಡಿಯಂ ಸಿನಿಮಾತಂಡವನ್ನ ಭೇಟಿ ಮಾಡಿರುವ ಕಿಚ್ಚ ಸುದೀಪ್ ಚಿತ್ರದ ಯಶಸ್ಸಿಗೆ ಸಂತಸವನ್ನ ವ್ಯಕ್ತ ಪಡಿಸಿದ್ದಾರೆ. ಅದರ ಜೊತೆಯಲ್ಲಿ ಸಿನಿಮಾ ನಾಯಕ ಹಾಗೂ ನಿರ್ಮಾಪಕರಿಗೆ ಸಿನಿಮಾದ ಮೇಲಿರುವ ಅಪಾರವಾದ ಶ್ರದ್ಧೆಯನ್ನ ಮೆಚ್ಚಿಕೊಂಡಿದ್ದಾರೆ.

Raju Kannada Madium and churi katte received a good response

ಕಳೆದವಾರ ಅನುಷ್ಕಾ ಶೆಟ್ಟಿ ಅಭಿನಯದ 'ಭಾಗಮತಿ' ಚಿತ್ರ ಬಿಡುಗಡೆ ಆಗಿದ್ದರೂ ಕೂಡ ಕನ್ನಡದ ಚಿತ್ರಗಳಿಗೆ ಯಾವುದೇ ತೊಂದರೆ ಆಗಿಲ್ಲ. ಕಳೆದವಾರಕ್ಕಿಂತಲೂ ಈ ವಾರ ಮತ್ತಷ್ಟು ಸ್ಕ್ರೀನ್ ಹೆಚ್ಚಾಗಿದ್ದು ಪ್ರೇಕ್ಷಕರು ಕೂಡ ಸಿನಿಮಾ ನೋಡಿ ಇಷ್ಟ ಪಟ್ಟಿದ್ದಾರೆ.

English summary
Raju Kannada Madium and Chori Katte movie has received a good response from audience. Among the other languages movies Kannada films have been well received by the audience.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada