»   » ಡಿ ಬಾಸ್ ದರ್ಶನ್, ಕಿಚ್ಚ ಸುದೀಪ್ ಇಬ್ಬರ ದರ್ಬಾರ್ ಮತ್ತೆ ಶುರುವಾಯ್ತು!

ಡಿ ಬಾಸ್ ದರ್ಶನ್, ಕಿಚ್ಚ ಸುದೀಪ್ ಇಬ್ಬರ ದರ್ಬಾರ್ ಮತ್ತೆ ಶುರುವಾಯ್ತು!

Posted By:
Subscribe to Filmibeat Kannada
Sudeep's 'Raju Kannada Medium' And Darshan's 'Tarak' Movie Teaser Is Ruling Social Media

ಸ್ಯಾಂಡಲ್ ವುಡ್ ನಲ್ಲಿ ಈಗ ನಟ ಕಿಚ್ಚ ಸುದೀಪ್ ಮತ್ತು ದರ್ಶನ್ ಇಬ್ಬರ ದರ್ಬಾರ್ ಮತ್ತೆ ಶುರುವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈಗ ಈ ಇಬ್ಬರು ನಟರ ಹವಾ ಸಿಕ್ಕಾಪಟ್ಟೆ ಜೋರಾಗಿದೆ.

ಒಂದು ಕಡೆ 'ತಾರಕ್' ಗೆಟಪ್ ನಲ್ಲಿ ದರ್ಶನ್ ಮಿಂಚುತ್ತಿದ್ದರೆ, ಇನ್ನೊಂದು ಕಡೆ 'ರಾಜು ಕನ್ನಡ ಮೀಡಿಯಂ' ಚಿತ್ರದ ಆಗರ್ಭ ಶ್ರೀಮಂತನಾಗಿ ಕಿಚ್ಚ ಕಂಗೊಳಿಸಿದ್ದಾರೆ. ದರ್ಶನ್ ನಟನೆಯ 'ತಾರಕ್' ಚಿತ್ರದ ಟೀಸರ್ ಹಾಗೂ 'ರಾಜು ಕನ್ನಡ ಮೀಡಿಯಂ' ಚಿತ್ರದ ಸುದೀಪ್ ಟೀಸರ್ ಈಗ ಯೂಟ್ಯೂಬ್ ನಲ್ಲಿ ದೊಡ್ಡ ದಾಖಲೆ ಮಾಡುತ್ತಿದೆ.

ಸುದೀಪ್ ಹುಟ್ಟುಹಬ್ಬದ ವಿಶೇಷವಾಗಿ ರಿಲೀಸ್ ಆಗಿದ್ದ 'ರಾಜು ಕನ್ನಡ ಮೀಡಿಯಂ' ಟೀಸರ್ ಹಾಗೂ ಇತ್ತೀಚಿಗಷ್ಟೆ ಬಿಡುಗಡೆಯಾದ ದರ್ಶನ್ 'ತಾರಕ್' ಟೀಸರ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಟ್ರೆಂಡ್ ಸೃಷ್ಟಿ ಮಾಡುತ್ತಿವೆ. ಮುಂದೆ ಓದಿ...

ಸುದೀಪ್ ಟೀಸರ್

'ರಾಜು ಕನ್ನಡ ಮೀಡಿಯಂ' ಚಿತ್ರತಂಡ ಸುದೀಪ್ ಹುಟ್ಟುಹಬ್ಬಕ್ಕೆ ಟೀಸರ್ ವೊಂದನ್ನು ಉಡುಗೊರೆಯಾಗಿ ನೀಡಿತ್ತು. ಇದೀಗ ಸುದೀಪ್ ಅವರ ಈ ಟೀಸರ್ ದೊಡ್ಡ ಮಟ್ಟದ ರೆಸ್ಪಾನ್ಸ್ ಪಡೆದುಕೊಂಡಿದೆ.

1 ಮಿಲಿಯನ್ ಹಿಟ್ಸ್

'ರಾಜು ಕನ್ನಡ ಮೀಡಿಯಂ' ಚಿತ್ರದ ಸುದೀಪ್ ಟೀಸರ್ ಬಿಡುಗಡೆಯಾದ 8 ದಿನಗಳಲ್ಲಿ ಯೂಟ್ಯೂಬ್ ನಲ್ಲಿ 1 ಮಿಲಿಯನ್ ಹಿಟ್ಸ್ ಪಡೆದಿದೆ. ಈ ಮೂಲಕ ಅತಿ ಹೆಚ್ಚು ವೀಕ್ಷಿಸಿದ ಕನ್ನಡದ ಸಿನಿಮಾಗಳ ಟೀಸರ್ ಗಳ ಸಾಲಿಗೆ ಈ ಟೀಸರ್ ಕೂಡ ಸೇರಿಕೊಂಡಿದೆ.

ಸುದೀಪ್ ಪಾತ್ರ ಏನು..?

ಸುದೀಪ್ 'ರಾಜು ಕನ್ನಡ ಮೀಡಿಯಂ' ಚಿತ್ರದಲ್ಲಿ ಬಿಸಿನೆಸ್ ಮ್ಯಾನ್ ಪಾತ್ರವನ್ನು ಮಾಡಿದ್ದಾರೆ. ಈಗಾಗಲೇ ಚಿತ್ರದಲ್ಲಿನ ಅವರ ಪಾತ್ರದ ಸ್ಟೈಲಿಶ್ ಲುಕ್ ಎಲ್ಲರಿಗೂ ಬಹಳ ಇಷ್ಟ ಆಗಿತ್ತು.

8 ದಿನದಲ್ಲಿ 1 ಮಿಲಿಯನ್ ವೀಕ್ಷಕರು ನೋಡಿದ ಸುದೀಪ್ ಟೀಸರ್ ಯಾವುದು?

'ತಾರಕ್' ಟೀಸರ್

ಸುದೀಪ್ ಜೊತೆಗೆ ದರ್ಶನ್ ಅವರ 'ತಾರಕ್' ಚಿತ್ರದ ಮೊದಲ ಟೀಸರ್ ಕೂಡ ಈಗ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಬಿಡುಗಡೆಯಾದ ಮೂರೇ ದಿನಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಜನ ಈ ಟೀಸರ್ ವೀಕ್ಷಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಹವಾ ಎಬ್ಬಿಸಿದ ದರ್ಶನ್ 'ತಾರಕ್' ಟೀಸರ್

ದರ್ಶನ್ ಧಮಾಕಾ

'ತಾರಕ್' ಚಿತ್ರದ ಟೀಸರ್ ಸದ್ಯ ಯೂಟ್ಯೂಬ್ ನಲ್ಲಿ ನಂ 2 ಟ್ರೆಂಡಿಂಗ್ ನಲ್ಲಿದೆ. ಟೀಸರ್ ನಲ್ಲಿ ರಗ್ಬಿ ಪ್ಲೇಯರ್ ಆಗಿ ದರ್ಶನ್ ಕಂಗೊಳಿಸಲಿದ್ದಾರೆ. ಜೊತೆಗೆ ದರ್ಶನ್ ಲುಕ್ ಮತ್ತು ಆಕ್ಷನ್ ಟೀಸರ್ ನಲ್ಲಿ ಗಮನ ಸೆಳೆಯುತ್ತದೆ. ಚಿತ್ರವನ್ನು ಮಿಲನ ಪ್ರಕಾಶ್ ನಿರ್ದೇಶನ ಮಾಡಿದ್ದಾರೆ.

ಮೊದಲ ದಿನವೇ ದಾಖಲೆಗಳನ್ನ ಚಿಂದಿ ಉಡಾಯಿಸಿದ 'ತಾರಕ್' ಟೀಸರ್

'ಭರ್ಜರಿ' ಹಾಡು

ಈ ಚಿತ್ರಗಳ ಹಿಂದೆ ರಿಲೀಸ್ ಆಗಿದ್ದ 'ಭರ್ಜರಿ' ಸಿನಿಮಾದ ಹಾಡು ಕೂಡ ಸೆನ್ಸೇಷನ್ ಹುಟ್ಟಿಸಿತ್ತು. ಸದ್ಯ 'ಭರ್ಜರಿ' ಸಿನಿಮಾದ ಟೈಟಲ್ ಹಾಡನ್ನು ಬರೋಬ್ಬರಿ 2 ಮಿಲಿಯನ್ ಗೂ ಅಧಿಕ ಜನ ಕಣ್ತುಂಬಿಕೊಂಡಿದ್ದಾರೆ.

English summary
Kannada Actor Sudeep's 'Raju Kannada Medium' and Darshan's 'Tarak' movie teaser trending in YouTube. 'Raju Kannada Medium' Movie Teaser got 1 million viewers in 8 days on YouTube.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada