'ಫಸ್ಟ್ rank ರಾಜು' ಖ್ಯಾತಿಯ ಗುರುನಂದನ್ ಅಭಿನಯದ 'ರಾಜು ಕನ್ನಡ ಮೀಡಿಯಂ' ಚಿತ್ರ ಯಾವಾಗ ಬರುತ್ತೆ, ಯಾವಾಗ ನೋಡಬಹುದು ಅಂತ ಚಿತ್ರಪ್ರೇಮಿಗಳು ಕಾದುಕುಂತಿದ್ದಾರೆ. ಅದರಲ್ಲೂ ಸುದೀಪ್ ಅಭಿಮಾನಿ ಬಳಗ ಈ ಚಿತ್ರಕ್ಕಾಗಿ ಎದುರು ನೋಡುತ್ತಿದೆ. ಕೊನೆಗೂ ರಾಜು ಯಾವಾಗ ಚಿತ್ರಮಂದಿರಕ್ಕೆ ಬರ್ತಾರೆ ಎನ್ನುವುದು ಬಹಿರಂಗವಾಗಿದೆ.
ಎಲ್ಲ ಅಂದುಕೊಂಡಂತೆ ಆಗಿದ್ದರೇ, ಇಷ್ಟೊತ್ತಿಗಾಗಲೇ 'ರಾಜು ಕನ್ನಡ ಮೀಡಿಯಂ' ಸಿನಿಮಾ ತೆರೆಮೇಲೆ ಬರಬೇಕಿತ್ತು. ಆದ್ರೆ, ಬೇರೆ ಬೇರೆ ಕಾರಣಗಳಿಂದ ಬಿಡುಗಡೆ ದಿನಾಂಕವನ್ನ ಮುಂದೂಡತ್ತಾ ಬಂದಿತ್ತು. ಇದೀಗ, ಎಲ್ಲ ವಿಘ್ನಗಳನ್ನ ದಾಟಿ ಜನವರಿ 19 ರಂದು ಎಲ್ಲರನ್ನ ರಂಜಿಸಲು ರಾಜು ಅಂಡ್ ಟೀಮ್ ಬರ್ತಿದ್ದಾರೆ.
ಸುದೀಪ್ ಕಾಲ್ಗುಣದಿಂದ 'ರಾಜು ಕನ್ನಡ ಮೀಡಿಯಂ'ಗೆ ವಿದೇಶದಲ್ಲಿ ಹೆಚ್ಚಿದ ಬೇಡಿಕೆ.!
ಈಗಾಗಲೇ ಟೀಸರ್ ಗಳು ಮೂಲಕ ಕುತೂಹಲ ಮೂಡಿಸಿರುವ ಈ ಚಿತ್ರದಲ್ಲಿ ಸುದೀಪ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆಗರ್ಭ ಶ್ರೀಮಂತ ವ್ಯಕ್ತಿಯ ಪಾತ್ರದಲ್ಲಿ ಕಿಚ್ಚನ ಗೆಟಪ್ ಮೋಡಿ ಮಾಡಿದೆ. ಹೀಗಾಗಿ, ಸುದೀಪ್ ಫ್ಯಾನ್ಸ್ ಈ ಸಿನಿಮಾದ ಮೇಲೆ ಎಕ್ಸ್ ಪೆಕ್ಟೆಶನ್ ಹೆಚ್ಚು ಇಟ್ಟಿಕೊಂಡಿದ್ದಾರೆ.
ಇನ್ನುಳಿದಂತೆ 'ಫಸ್ಟ್ Rank ರಾಜು' ಖ್ಯಾತಿಯ ಗುರುನಂದನ್ ಈ ಚಿತ್ರದಲ್ಲಿ ನಾಯಕ. 'ರಂಗಿತರಂಗ' ಖ್ಯಾತಿಯ ಆವಂತಿಕ ಶೆಟ್ಟಿ ನಾಯಕಿಯಾಗಿದ್ದು, ಆಶಿಕಾ ರಂಗನಾಥ್ ಹಾಗೂ ಆಂಜೇಲಿನ ಕೂಡ ಅಭಿನಯಿಸಿದ್ದಾರೆ. 'ಫಸ್ಟ್ Rank ರಾಜು' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ನರೇಶ್ ಕುಮಾರ್ ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ಕೆಎ ಸುರೇಶ್ ನಿರ್ಮಾಣ ಮಾಡಿದ್ದಾರೆ.
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ | Subscribe to Kannada Filmibeat.