25 ದಿನಗಳ ಸಂಭ್ರಮದಲ್ಲಿ 'ರಾಜು ಕನ್ನಡ ಮೀಡಿಯಂ'
'ರಾಜು ಕನ್ನಡ ಮೀಡಿಯಂ' ಚಿತ್ರತಂಡ ಈಗ ಸಿಕ್ಕಾಪಟ್ಟೆ ಖುಷಿಯಲ್ಲಿದೆ. ಸಿನಿಮಾ ಈಗ 25 ದಿನದತ್ತ ಮುನ್ನುಗ್ಗುತ್ತಿದೆ. ಜನವರಿ 19ಕ್ಕೆ ರಿಲೀಸ್ ಆಗಿದ್ದ ಈ ಸಿನಿಮಾ ನಾಳೆಗೆ ಸರಿಯಾಗಿ 25 ದಿನಗಳನ್ನು ಪೂರೈಸಲಿದೆ.
ಒಂದು ಕಡೆ ಜನರು ಸಿನಿಮಾ ನೋಡಿ ಖುಷಿ ಪಡುತ್ತಿದ್ದಾರೆ. ಇತ್ತ ಚಿತ್ರರಂಗದ ಗಣ್ಯರು ಸಹ 'ರಾಜು ಕನ್ನಡ ಮೀಡಿಯಂ' ನೋಡಿ ಶುಭ ಹಾರೈಸಿದ್ದಾರೆ. ಇತ್ತೀಚಿಗಷ್ಟೆ ಚಿತ್ರದ ಸೆಲಿಬ್ರಿಟಿ ಶೋ ಏರ್ಪಡಿಸಿದ್ದು, ನಟ ಅಂಬರೀಶ್, ಸಾ.ರಾ.ಗೋವಿಂದು, ಸಿಟಿ.ರವಿ, ಕೃಷಿ ತಾಪಂಡ, ಅನೀಶ್ ಸೇರಿದಂತೆ ಅನೇಕರು ಸಿನಿಮಾವನ್ನು ವೀಕ್ಷಿಸಿದರು.

'ರಾಜು ಕನ್ನಡ ಮೀಡಿಯಂ' ನಟ ಗುರುನಂದನ್ ಅಭಿನಯದ ಸಿನಿಮಾವಾಗಿತ್ತು. ನಟ ಕಿಚ್ಚ ಸುದೀಪ್ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು, ಅವಂತಿಕಾ ಶೆಟ್ಟಿ ಮತ್ತು ಆಶಿಕಾ ರಂಗನಾಥ್ ಕಾಣಿಸಿಕೊಂಡಿದ್ದಾರೆ. ಕೆ.ಎ.ಸುರೇಶ್ ಬಂಡವಾಳ ಹಾಕಿದ್ದು, ನರೇಶ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು.
More from Filmibeat
English summary
Ashika ranganath and Gurunandan starring 'Raju Kannada Medium' movie is completes 25 days. The movie was released in January 19th.


Click it and Unblock the Notifications











