50 ದಿನ ಪೂರೈಸಿದ 'ರಾಜು ಕನ್ನಡ ಮೀಡಿಯಂ' ಸಿನಿಮಾ
'ರಾಜು ಕನ್ನಡ ಮೀಡಿಯಂ' ಸಿನಿಮಾ ಈ ವರ್ಷದ ಹಿಟ್ ಸಿನಿಮಾದಲ್ಲಿ ಒಂದಾಗಿದೆ. ಇದರಿಂದ ಚಿತ್ರತಂಡ ಸಿಕ್ಕಾಪಟ್ಟೆ ಖುಷಿಯಲ್ಲಿದೆ. ಸಿನಿಮಾ ಈಗ 50 ದಿನಗಳನ್ನು ಪೂರೈಸದೆ. ಜನವರಿ 19ಕ್ಕೆ ರಿಲೀಸ್ ಆಗಿದ್ದ ಈ ಸಿನಿಮಾ ಆಫ್ ಸೆಂಚುರಿ ಬಾರಿಸಿದೆ.
'ರಾಜು ಕನ್ನಡ ಮೀಡಿಯಂ' ನಟ ಗುರುನಂದನ್ ಅಭಿನಯದ ಸಿನಿಮಾವಾಗಿತ್ತು. ನಟ ಕಿಚ್ಚ ಸುದೀಪ್ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು, ಅವಂತಿಕಾ ಶೆಟ್ಟಿ ಮತ್ತು ಆಶಿಕಾ ರಂಗನಾಥ್ ಕಾಣಿಸಿಕೊಂಡಿದ್ದಾರೆ. ಕೆ.ಎ.ಸುರೇಶ್ ಬಂಡವಾಳ ಹಾಕಿದ್ದು, ನರೇಶ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು.
'ರಾಜು ಕನ್ನಡ ಮೀಡಿಯಂ' ಒಬ್ಬ ಹಳ್ಳಿ ಹುಡುಗನ ಕಥೆಯಾಗಿತ್ತು. ಹಳ್ಳಿಯಲ್ಲಿ ಬೆಳೆದ ರಾಜು ಸಿಟಿಗೆ ಬಂದು ಎದುರಿಸುವ ಕಷ್ಟಗಳನ್ನು ಸಿನಿಮಾದಲ್ಲಿ ತೊರಿಸಲಾಗಿತ್ತು. ಪ್ರಮುಖವಾಗಿ ಜೀವನಲ್ಲಿ ಏನು ಮುಖ್ಯ ಎಂಬ ಒಂದು ಅಂಶದ ಮೇಲೆ ಸಿನಿಮಾದ ಕಥೆ ಇತ್ತು.

ಒಂದು ಕಡೆ ಜನರು ಈ ಸಿನಿಮಾ ನೋಡಿ ಖುಷಿ ಪಟ್ಟಿದ್ದಾರೆ. ಇತ್ತ ಚಿತ್ರರಂಗದ ಗಣ್ಯರು ಸಹ 'ರಾಜು ಕನ್ನಡ ಮೀಡಿಯಂ' ನೋಡಿ ಶುಭ ಹಾರೈಸಿದ್ದಾರೆ. ನಟ ಅಂಬರೀಶ್, ಸಾ.ರಾ.ಗೋವಿಂದು, ಸಿಟಿ.ರವಿ, ಕೃಷಿ ತಾಪಂಡ, ಅನೀಶ್ ಸೇರಿದಂತೆ ಅನೇಕರು ಈ ಹಿಂದೆಯೇ ಸಿನಿಮಾವನ್ನು ವೀಕ್ಷಿಸಿ ಖುಷಿಪಟ್ಟಿದ್ದರು. ಅಂದಹಾಗೆ, 'ರಾಜು ಕನ್ನಡ ಮೀಡಿಯಂ' ಸಿನಿಮಾದ ಬಳಿಕ ನಿರ್ದೇಶಕ ನರೇಶ್ 'ಫಸ್ಟ್ ರಾಂಕ್ ರಾಜು' ಸಿನಿಮಾವನ್ನು ತೆಲುಗಿನಲ್ಲಿ ರಿಮೇಕ್ ಮಾಡುತ್ತಿದ್ದಾರೆ.


Click it and Unblock the Notifications











