»   » 8 ದಿನದಲ್ಲಿ 1 ಮಿಲಿಯನ್ ವೀಕ್ಷಕರು ನೋಡಿದ ಸುದೀಪ್ ಟೀಸರ್ ಯಾವುದು?

8 ದಿನದಲ್ಲಿ 1 ಮಿಲಿಯನ್ ವೀಕ್ಷಕರು ನೋಡಿದ ಸುದೀಪ್ ಟೀಸರ್ ಯಾವುದು?

Posted By:
Subscribe to Filmibeat Kannada

ಸುದೀಪ್ ಹುಟ್ಟುಹಬ್ಬದ ವಿಶೇಷವಾಗಿ 'ದಿ ವಿಲನ್' ಚಿತ್ರತಂಡ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿತ್ತು. ಹೆಬ್ಬುಲಿ ಕೃಷ್ಣ ನಿರ್ದೇಶನ ಮಾಡಲಿರುವ 'ಪೈಲ್ವಾನ್' ಚಿತ್ರದ ಪೋಸ್ಟರ್ ರಿಲೀಸ್ ಆಗಿತ್ತು. ಇವರೆಡು ಚಿತ್ರಗಳ ಜೊತೆ 'ರಾಜು ಕನ್ನಡ ಮೀಡಿಯಂ' ಚಿತ್ರದ ಟೀಸರ್ ಕೂಡ ತೆರೆಕಂಡಿತ್ತು.

ಕಿಚ್ಚ ಸುದೀಪ್ ಹುಟ್ಟುಹಬ್ಬಕ್ಕೆ ರಿಲೀಸ್ ಆದ 'ದಿ ವಿಲನ್' ಮೋಷನ್ ಪೋಸ್ಟರ್ ನೋಡಿ!

ಈ ಮೂರು ಟೀಸರ್, ಪೋಸ್ಟರ್ ಗಳ ಪೈಕಿ ಒಂದು ಟೀಸರ್ ಹೊಸ ದಾಖಲೆ ಬರೆದಿದೆ. ಕೇವಲ 8 ದಿನದಲ್ಲಿ 1 ಮಿಲಿಯನ್ (10) ಲಕ್ಷ ವೀಕ್ಷಕರು ಈ ಟೀಸರ್ ನೋಡಿದ್ದಾರೆ. ಯಾವುದು ಅದು? ಮುಂದೆ ಓದಿ.....

Raju Kannada Medium Movie Teaser got 1 million viewers

'ಶ್ರೀಮಂತ ಸುದೀಪ'ನ ಸ್ಟೈಲಿಶ್ ಟೀಸರ್ ರಿಲೀಸ್

8 ದಿನದಲ್ಲಿ 1 ಮಿಲಿಯನ್ ವೀಕ್ಷಕರನ್ನ ಪಡೆದಿರುವ ಟೀಸರ್ 'ರಾಜು ಕನ್ನಡ ಮೀಡಿಯಂ'. ಹೌದು, ಸುದೀಪ್ ಅವರ ಹುಟ್ಟುಹಬ್ಬದ ವಿಶೇಷವಾಗಿ, ಕಿಚ್ಚನ ಪಾತ್ರವನ್ನ ತೋರಿಸುವ ದೃಶ್ಯಗಳನ್ನ ಒಳಗೊಂಡ 1 ನಿಮಿಷದ ಟೀಸರ್ ಉಡುಗೊಡೆಯಾಗಿ ನೀಡಲಾಗಿತ್ತು.

'ಪೈಲ್ವಾನ್' ಆದ ಕಿಚ್ಚ ಸುದೀಪ್ ಪರಾಕ್ರಮಕ್ಕೆ ತಲೆ ಬಾಗಿದ ಅಭಿಮಾನಿಗಳು!

'ಫಸ್ಟ್ Rank ರಾಜು' ಖ್ಯಾತಿಯ ಗುರುನಂದನ್ ಹಾಗೂ ಅವಂತಿಕಾ ಶೆಟ್ಟಿ ಅಭಿನಯದ 'ರಾಜು ಕನ್ನಡ ಮೀಡಿಯಂ' ಚಿತ್ರ ಆದಷ್ಟೂ ಬೇಗ ತೆರೆ ಕಾಣಲಿದೆ. ಸುರೇಶ್ ಈ ಚಿತ್ರವನ್ನ ನಿರ್ಮಾಣ ಮಾಡಿದ್ದು, ನರೇಶ್ ಕುಮಾರ್ ನಿರ್ದೇಶನ ಮಾಡಿದ್ದಾರೆ.

English summary
Raju Kannada Medium Movie Teaser got 1 million viewers in 8 days on youtube. the movie directed by naresh kumar features gurunandan, avanthika shetty and sudeep in the lead role.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada