»   » 'ರಾಜು' ಆಗಮನಕ್ಕೆ ದಾರಿ ಬಿಟ್ಟು ಕೊಟ್ಟ 'ಮಫ್ತಿ' ಸಿನಿಮಾ

'ರಾಜು' ಆಗಮನಕ್ಕೆ ದಾರಿ ಬಿಟ್ಟು ಕೊಟ್ಟ 'ಮಫ್ತಿ' ಸಿನಿಮಾ

Posted By:
Subscribe to Filmibeat Kannada

'ಮಫ್ತಿ' ಸಿನಿಮಾ ಸೂಪರ್ ಹಿಟ್ ಆಗಿದೆ. ರಾಜ್ಯಾದ್ಯಂತ ಸಿನಿಮಾ ಎಲ್ಲ ಚಿತ್ರಮಂದಿರದಲ್ಲಿ ಬಹುತೇಕ ಹೌಸ್ ಫುಲ್ ಪ್ರದರ್ಶನ ಕಂಡಿದೆ. ಅದರ ಬಳಿಕ ಇದೀಗ ಗಾಂಧಿನಗರದ ಸಂತೋಷ್ ಚಿತ್ರಮಂದಿರದಿಂದ 'ಮಫ್ತಿ' ಸಿನಿಮಾ ಹೊರ ನಡೆದಿದೆ.

'ರಾಜು ಕನ್ನಡ ಮೀಡಿಯಂ' ಸಿನಿಮಾ ಇದೇ ತಿಂಗಳು 19ಕ್ಕೆ ರಿಲೀಸ್ ಆಗಲಿದೆ. ಈ ಸಿನಿಮಾದ ಮುಖ್ಯ ಚಿತ್ರಮಂದಿರವಾಗಿ ಸಂತೋಷ್ ಥಿಯೇಟರ್ ಸಿಕ್ಕಿದ್ದು, 'ಮಫ್ತಿ' ಚಿತ್ರ ರಾಜು ಆಗಮನಕ್ಕೆ ದಾರಿ ಬಿಟ್ಟು ಕೊಟ್ಟಿದೆ. ಡಿಸೆಂಬರ್ 1ಕ್ಕೆ ರಿಲೀಸ್ ಆಗಿದ್ದ 'ಮಫ್ತಿ' ಜನವರಿ 19ಕ್ಕೆ ಸರಿಯಾಗಿ 50 ದಿನಗಳನ್ನು ಪೂರೈಸುತ್ತದೆ.

'Raju Kannada Medium' movie will be releasing in January 19th

ಅಂದಹಾಗೆ, 'ರಾಜು ಕನ್ನಡ ಮೀಡಿಯಂ' ಸಿನಿಮಾ 'ಫಸ್ಟ್ ರಾಂಕ್ ರಾಜು' ಚಿತ್ರತಂಡದ ಎರಡನೇ ಪ್ರಯತ್ನ. ಚಿತ್ರದಲ್ಲಿ ಗುರುನಂದನ್ ನಾಯಕನಾಗಿದ್ದಾರೆ. ಆಶಿಕಾ ರಂಗನಾಥ್ ಮತ್ತು ಅವಂತಿಕಾ ಶೆಟ್ಟಿ ನಾಯಕಿಯರಾಗಿದ್ದಾರೆ. ನರೇಶ್ ಕುಮಾರ್ ನಿರ್ದೇಶನ ಮಾಡಿದ್ದು, 'ಶಿವಲಿಂಗ' ಖ್ಯಾತಿಯ ನಿರ್ಮಾಪಕ ಸುರೇಶ್ ನಿರ್ಮಾಣ ಮಾಡಿದ್ದಾರೆ.

ವಿಶೇಷ ಅಂದರೆ 'ರಾಜು ಕನ್ನಡ ಮೀಡಿಯಂ' ಸಿನಿಮಾದ ವಿಶೇಷ ಪಾತ್ರದಲ್ಲಿ ನಟ ಸುದೀಪ್ ಕಾಣಿಸಿಕೊಂಡಿದ್ದಾರೆ. ಸುದೀಪ್ ಟೀಸರ್ ಈಗಾಗಲೇ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದೆ. ಕಿಚ್ಚ ಅಭಿಮಾನಿಗಳು ಕೂಡ ಚಿತ್ರಕ್ಕೆ ಕಾಯುತ್ತಿದ್ದು, 'ರಾಜು ಕನ್ನಡ ಮೀಡಿಯಂ' ಜನವರಿ 19ಕ್ಕೆ ಬಿಡುಗಡೆಯಾಗಲಿದೆ.

English summary
Ashika ranganath and Gurunandan starring 'Raju Kannada Medium' movie will be releasing in January 19th.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X