ಆಕ್ಟಿಂಗ್ ಗೆ ಬ್ರೇಕ್ ಕೊಟ್ಟು 'ಡೈರೆಕ್ಟರ್' ಆದ ರಾಕೇಶ್
'ಜೋಶ್', 'ಅಲೆಮಾರಿ', 'ಮನಸಾಲಜಿ', 'ಮಂದಹಾಸ' ಹಾಗೂ ಕೊನೆಯದಾಗಿ 'ಮಂಡ್ಯ ಟು ಮುಂಬೈ' ಚಿತ್ರಗಳಲ್ಲಿ ನಟಿಸಿದ್ದ ಯುವ ನಟ ರಾಕೇಶ್ ಅಡಿಗ ಕೆಲವು ವರ್ಷದಿಂದ ಸೈಲೆಂಟ್ ಆಗಿದ್ದಾರೆ.
ಈ ಮಧ್ಯೆ 'ಡವ್' ಮತ್ತು 'ನಟೋರಿಯಸ್' ಅಂತ ಸಿನಿಮಾ ಮಾಡ್ತಿದ್ರು. ಆದ್ರೆ, ಇನ್ನು ಅದರ ಚಿತ್ರಕರಣ ಮುಗಿದಿಲ್ಲ. ಹೀಗಾಗಿ, ತೆರೆಮೇಲೆ ರಾಕೇಶ್ ಅವರನ್ನ ನೋಡಿ ಸುಮಾರು ಎರಡು ವರ್ಷ ಆಗ್ತಿದೆ.
ಈ ಗ್ಯಾಪ್ ನಲ್ಲಿ ರಾಕೇಶ್ ಅದೇನ್ ಮಾಡ್ತಿದ್ರು ಎಂಬ ಕುತೂಹಲ ಕಾಡುವುದು ಸಹಜ. ಆದ್ರೆ, ನಟನೆಗೆ ಮಾತ್ರ ಬ್ರೇಕ್ ಕೊಟ್ಟಿದ್ದ ಜೋಶ್ ನಟ ಡೈರೆಕ್ಟರ್ ಆಗಿಬಿಟ್ಟಿದ್ದಾರೆ. ಸದ್ದು ಸುದ್ದಿ ಇಲ್ಲದೇ ತಮ್ಮ ಚೊಚ್ಚಲ ಚಿತ್ರವನ್ನ ನಿರ್ದೇಶನ ಮಾಡ್ತಿದ್ದಾರೆ. ಯಾವುದು ಆ ಸಿನಿಮಾ.? ಮುಂದೆ ಓದಿ.....

ಮೊದಲ ಸಲ ನಿರ್ದೇಶನ
2009 ರಿಂದ ಸಿನಿಮಾಗಳಲ್ಲಿ ನಟಿಸುತ್ತಾ ಬಂದಿರುವ ರಾಕೇಶ್ ಅಡಿಗ ಇಲ್ಲಿಯವರೆಗೂ ಸುಮಾರು ಹನ್ನೆರಡರಿಂದ ಹದಿಮೂರು ಸಿನಿಮಾ ಮಾಡಿರಬಹುದು. ಅದರಲ್ಲಿ ನಾಯಕ ಹಾಗೂ ಖಳನಾಯಕನೂ ಪಾತ್ರಗಳು ಇದೆ. 9 ವರ್ಷದ ಅನುಭವದಿಂದ ಮೊದಲ ಸಲ ನಿರ್ದೇಶನ ಮಾಡ್ತಿದ್ದಾರೆ.

'ನೈಟ್ ಔಟ್'ಗೆ ಆಕ್ಷನ್ ಕಟ್
ರಾಕೇಶ್ ಚೊಚ್ಚಲ ಬಾರಿಗೆ ನಿರ್ದೇಶನ ಮಾಡುತ್ತಿರುವ ಚಿತ್ರದ ಹೆಸರು 'ನೈಟ್ ಔಟ್'. ಈಗಾಗಲೇ ಈ ಚಿತ್ರದ ಶೇಕಡಾ 50 ರಷ್ಟು ಶೂಟಿಂಗ್ ಮುಗಿದು ಹೋಗಿದೆ.

ಇಬ್ಬರು ನಾಯಕರು
ಒಂದು ರಾತ್ರಿಯಲ್ಲಿ ಇಬ್ಬರು ಯುವಕರ ಮಧ್ಯೆ ನಡೆಯುವ ಕಥೆಯೇ ನೈಟ್ ಔಟ್. ಜೋಶ್ ಚಿತ್ರದಲ್ಲಿ ನಟಿಸಿದ್ದ ಭರತ್ ಹಾಗೂ ಅಕ್ಷಯ್ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ರಾಕೇಶ್ ಕೇವಲ ಡೈರೆಕ್ಷನ್ ಮಾತ್ರ ಮಾಡ್ತಿದ್ದಾರೆ. ಡಾ ನವೀನ್ ಎಂಬುವರು ನಿರ್ಮಾಣ ಮಾಡ್ತಿದ್ದಾರೆ.

ನಾಯಕಿ ಯಾರು.?
'ಸಂಕಷ್ಟಕರ ಗಣಪತಿ' ಚಿತ್ರದಲ್ಲಿ ನಟಿಸಿದ್ದ ಶ್ರುತಿ ಗೊರಾಡಿ ಅವರು ಈ ಚಿತ್ರಕ್ಕೆ ನಾಯಕಿ. ನಿರ್ದೇಶನದ ಜೊತೆಗೆ ಸ್ನೇಹಿತರ ಜೊತೆಗೂಡಿ ಚಿತ್ರಕಥೆಯೂ ಮಾಡಿರುವ ರಾಕೇಶ್ ಸಂಪೂರ್ಣವಾಗಿ ಒಬ್ಬ ತಂತ್ರಜ್ಞನಾಗಿ ಕೆಲಸ ಮಾಡುತ್ತಿದ್ದಾರೆ. ಬಹುತೇಕ ಬೆಂಗಳೂರಿನಲ್ಲೇ ಶೂಟಿಂಗ್ ನಡೆಯುತ್ತಿದೆ.


Click it and Unblock the Notifications