''ಡಿ ಬಾಸ್ ಸಿನಿಮಾ ನಮ್ಗೆ ಗ್ರೇಟ್, ಅದಕ್ಕೆ 'ಪೈಲ್ವಾನ್' ಲೀಕ್ ಮಾಡಿದೆ : ಆರೋಪಿ ರಾಕೇಶ್ ಹೇಳಿಕೆ

Recommended Video

ಪೈಲವಾನ್ ಚಿತ್ರ ಲೀಕ್ ಮಾಡಿದವ ಹೇಳಿದ್ದೇನು ? | FILMIBEAT KANNADA

'ಪೈಲ್ವಾನ್' ಸಿನಿಮಾ ಪೈರಸಿ ಆಗಿದ್ದ ದಿನದಿಂದ ಅದನ್ನು ನಟ ದರ್ಶನ್ ಅಭಿಮಾನಿಗಳು ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬರುತ್ತಿತ್ತು. ಇದೀಗ, 'ಪೈಲ್ವಾನ್' ಪೈರಸಿ ವಿಚಾರವಾಗಿ ಒಬ್ಬ ಆರೋಪಿಯನ್ನ ಬಂಧನ ಮಾಡಿದ್ದು, ಆತ ತಾನು ದರ್ಶನ್ ಅಭಿಮಾನಿ ಎಂದು ಕೇಳಿಕೊಂಡಿದ್ದಾನೆ.

'ಪೈಲ್ವಾನ್' ಸಿನಿಮಾ ಸಪ್ಟೆಂಬರ್ 12 ರಂದು ಬಿಡುಗಡೆ ಆಗಿತ್ತು. 19 ಸಪ್ಟೆಂಬರ್ ರಂದು 'ಪೈಲ್ವಾನ್' ಸಿನಿಮಾ ಪೈರಸಿ ಆಗಿದೆ ಎಂದು ನಿರ್ಮಾಪಕಿ ಸ್ವಪ್ನ ಕೃಷ್ಣ ಸೈಬರ್ ಕ್ರೈ ಪೊಲೀಸರಿಗೆ ದೂರು ನೀಡಿದರು. ಇದರ ಬೆನ್ನು ಹಾತ್ತಿದ ಪೊಲೀಸರು ಇಂದು ರಾಕೇಶ್ ವಿರಾಟ್ ಎಂಬುವವನನ್ನು ಅರೆಸ್ಟ್ ಮಾಡಿದ್ದಾರೆ. ವಿಚಾರಣೆಯ ವೇಳೆ ತಾನು ದರ್ಶನ್ ಅಭಿಮಾನಿ ಎಂಬ ಮಾತನ್ನು ರಾಕೇಶ್ ಹೇಳಿದ್ದಾನೆ.

ಪೊಲೀಸರ ವಿಚಾರಣೆಯ ವೇಳೆ ರಾಕೇಶ್ ವಿರಾಟ್ ತಾನು 'ಪೈಲ್ವಾನ್' ಸಿನಿಮಾ ಪೈರಸಿ ಮಾಡಿದ್ದೇನೆ ಎಂದು ತಪ್ಪನ್ನು ಒಪ್ಪಿಕೊಂಡಿದ್ದಾನೆ. ಪೊಲೀಸರ ಮುಂದೆ ಆರೋಪಿ ರಾಕೇಶ್ ನೀಡಿರುವ ಮಾಹಿತಿಗಳು ಹೀಗಿವೆ.

ಡಿ ಬಾಸ್ ಸಿನಿಮಾಗಳೆ ಗ್ರೇಟ್

ಡಿ ಬಾಸ್ ಸಿನಿಮಾಗಳೆ ಗ್ರೇಟ್

''ನಾನು ದರ್ಶನ್ ಅಭಿಮಾನಿ. ನಮಗೆ ಡಿ ಬಾಸ್ ಸಿನಿಮಾಗಳೆ ಗ್ರೇಟ್. ದರ್ಶನ್ ಮೇಲಿನ ಅಭಿಮಾನಕ್ಕಾಗಿ 'ಪೈಲ್ವಾನ್' ಸಿನಿಮಾವನ್ನು ಲೀಕ್ ಮಾಡಿದೆ. ನಾನು ದುಡ್ಡಿಗಾಗಿ ಈ ಕೆಲಸ ಮಾಡಿಲ್ಲ.'' ಎಂದು ರಾಕೇಶ್ ಪೊಲೀಸರ ಎದುರು ತಪ್ಪು ಒಪ್ಪಿಕೊಂಡಿದ್ದಾನೆ. ವಿಚಾರಣೆಯ ವೇಳೆ ರಾಕೇಶ್ ಅಸಲಿ ವಿಷಯವನ್ನು ಬಾಯಿ ಬಿಟ್ಟಿದ್ದಾನೆ.

ದರ್ಶನ್ ಅಭಿಮಾನಿ ಎಂದು ಬಿಂಬಿಸಿಕೊಂಡಿದ್ದಾನೆ

ದರ್ಶನ್ ಅಭಿಮಾನಿ ಎಂದು ಬಿಂಬಿಸಿಕೊಂಡಿದ್ದಾನೆ

ರಾಕೇಶ್ ಫೇಸ್ ಬುಕ್ ಖಾತೆಯಲ್ಲಿ ದರ್ಶನ್ ಅವರ ಫೋಟೋಗಳನ್ನು ಹಾಕಿಕೊಂಡಿದ್ದು, ತಾನು ದರ್ಶನ್ ಫ್ಯಾನ್ಸ್ ಎಂದು ತೋರಿಸಿಕೊಂಡಿದ್ದಾನೆ. ಸೋಷಿಯಲ್ ಮೀಡಿಯಾದಲ್ಲಿ ಮಾತ್ರವಲ್ಲದೆ, ಅವನ ಹೆಸರಿಗೆ ಸಹ ವಿರಾಟ್ ಎಂದು ದರ್ಶನ್ ಚಿತ್ರದ ಹೆಸರನ್ನು ಸೇರಿಸಿಕೊಂಡಿದ್ದಾನೆ. ಈ ರೀತಿಯಾಗಿ ತನ್ನ ಕುರುಡು ಅಭಿಮಾನವನ್ನು ಪ್ರದರ್ಶನ ಮಾಡಿದ್ದಾನೆ.

ಫೇಸ್ ಬುಕ್ ನಲ್ಲಿ ಸಿನಿಮಾ ಲೀಕ್

ಫೇಸ್ ಬುಕ್ ನಲ್ಲಿ ಸಿನಿಮಾ ಲೀಕ್

ರಾಕೇಶ್ ನೆಲಮಂಗಲದವನಾಗಿದ್ದು, 'ಪೈಲ್ವಾನ್' ಚಿತ್ರವನ್ನು ತನ್ನ ಫೇಸ್ ಬುಕ್ ಖಾತೆಯಲ್ಲಿ ಲೀಕ್ ಮಾಡಿದ್ದ. ಅದರ ಲೀಕ್ ಅನ್ನು ತನ್ನ ಸ್ನೇಹಿತರಿಗೆ ಕಳುಹಿಸಿದ್ದ. ಜೊತೆಗೆ ಸಿನಿಮಾವನ್ನು ನೋಡಲು ನನಗೆ ಇನ್ ಬಾಕ್ಸ್ ಮೇಸೆಜ್ ಮಾಡಿ ಎಂದು ಬರೆದುಕೊಂಡಿದ್ದ. ಈ ಕಾರಣ ಇಂದು (ಸಪ್ಟೆಂಬರ್ 20) DCP ರವಿಕುಮಾರ್ ನೇತೃತ್ವದಲ್ಲಿ ಆರೋಪಿ ರಾಕೇಶ್ ಅನ್ನು ಬಂಧನ ಮಾಡಲಾಗಿದೆ.

ಯಾರ ಅಭಿಮಾನಿ ಎನ್ನುವುದು ಮುಖ್ಯವಲ್ಲ

ಯಾರ ಅಭಿಮಾನಿ ಎನ್ನುವುದು ಮುಖ್ಯವಲ್ಲ

ರಾಕೇಶ್ ಯಾವ ನಟನ ಅಭಿಮಾನಿ ಎನ್ನುವುದಕ್ಕಿಂತ, ಆತ ಮಾಡಿರುವ ತಪ್ಪಿನ ಬಗ್ಗೆ ಮಾತ್ರ ಗಮನ ಹರಿಸಬೇಕು. ಯಾರೋ ಒಬ್ಬ ಕಿಡಿಗೇಡಿ ಮಾಡಿರುವ ಈ ಕೆಲಸ, ಒಬ್ಬ ನಟನ ಒಳ್ಳೆಯ ಅಭಿಮಾನಿಗಳಿಗೂ ಕೆಟ್ಟ ಹೆಸರು ತರುವಂತೆ ಮಾಡುತ್ತದೆ. ಈ ಘಟನೆಯಿಂದ ಆ ನಟನಿಗಾಗಿಲಿ, ಅವರ ಉಳಿದ ಅಭಿಮಾನಿಗಳಿಗಾಗಲಿ ದೂರುವುದು ಸರಿಯಲ್ಲ.

More from Filmibeat

English summary
Rakesh admitted that he pirated Pailwaan movie because he is Darshan fan. Bangalore cyber crime police arrested Rakesh who did Pailwaan movie facebook live.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X