Don't Miss!
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Sports
IND VS AUS Test: ಟೆಸ್ಟ್ ಸರಣಿಯಲ್ಲಿ ಕೆಎಲ್ ರಾಹುಲ್ ವಿಕೆಟ್ ಕೀಪರ್ ಅಲ್ಲ: ಪದಾರ್ಪಣೆ ಮಾಡಲು ಸಜ್ಜಾದ ವಿಕೆಟ್ ಕೀಪರ್
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಜೋಶ್'ಗೆ ರಾಕೇಶ್ ಅಡಿಗ ಮೊದಲು ನಾಯಕನಾಗಿರಲಿಲ್ಲ ಬೇರೆಯವರಿದ್ರು ಎಂದ ರಾಕೇಶ್ ತಾಯಿ!
ಸದ್ಯ ನಡೆಯುತ್ತಿರುವ ಬಿಗ್ ಬಾಸ್ ಕನ್ನಡ ಒಂಬತ್ತನೇ ಆವೃತ್ತಿಯಲ್ಲಿ ತನ್ನ ನೇರ ಮಾತುಗಳಿಂದ ಅಪಾರವಾದ ಅನುಯಾಯಿಗಳನ್ನು ಸಂಪಾದಿಸಿ ವೀಕ್ಷಕರ ಮನಸ್ಸನ್ನು ಗೆದ್ದಿರುವ ಸ್ಪರ್ಧಿ ರಾಕೇಶ್ ಅಡಿಗ ಕನ್ನಡ ಸಿನಿ ಪ್ರೇಕ್ಷಕರಿಗೆ ಹಿಂದಿನಿಂದಲೂ ಪರಿಚಿತ ನಟನಾಗಿದ್ದಾರೆ. ಜೋಶ್ ಎಂಬ ಚಿತ್ರದಲ್ಲಿ ನಾಯಕ ನಟನಾಗಿ ಚಂದನವನಕ್ಕೆ ಕಾಲಿಟ್ಟ ರಾಕೇಶ್ ಅಡಿಗ ತನ್ನ ಪದಾರ್ಪಣೆಯ ಚಿತ್ರದಲ್ಲಿಯೇ ಶತಕ ಬಾರಿಸಿ ಭರವಸೆ ಹುಟ್ಟುಹಾಕಿದ್ದ ನಟನಾಗಿದ್ದರು.
ಹೀಗೆ ಕಿರಿಯ ವಯಸ್ಸಿನಲ್ಲಿಯೇ ಬೃಹತ್ ಹಿಟ್ ಪಡೆದ ರಾಕೇಶ್ ಅಡಿಗ ನಟನಾಗುವ ಮುನ್ನವೇ 'ಅರ್ಬನ್ ಲ್ಯಾಡ್ಸ್' ಎಂಬ ರ‍್ಯಾಪ್ ಆಲ್ಬಂ ಹಾಡುಗಳನ್ನು ಸಂಯೋಜಿಸಿ ಕರ್ನಾಟಕದ ಮೊದಲ ರ‍್ಯಾಪರ್ ಎಂಬ ಮೈಲಿಗಲ್ಲನ್ನು ನೆಟ್ಟಿದ್ದರು. ಹೀಗೆ ಹಾಡುಗಾರನಾಗಿ ಹಾಗೂ ನಟನಾಗಿ ಕನ್ನಡ ಸಿನಿ ರಸಿಕರ ಮೆಚ್ಚುಗೆಗೆ ಪಾತ್ರವಾದ ರಾಕೇಶ್ ಅಡಿಗ ಕುರಿತು ಚರ್ಚಿಸುವ ಪ್ರತಿಯೊಬ್ಬರೂ ಮರೆಯದೇ ಚರ್ಚಿಸುವ ವಿಷಯವೆಂದರೆ ಅದು ಜೋಶ್ ಚಿತ್ರದ ಬಗ್ಗೆಯೇ.
ಕರುನಾಡ
ಸಂಭ್ರಮ
ಕಾರ್ಯಕ್ರಮಕ್ಕಾಗಿ
ಎದ್ದು
ನಿಂತ
'ಅಪ್ಪು-ಚಿರು'
ಬೃಹತ್
ಕಟೌಟ್!
ಹೌದು, 2009ರಲ್ಲಿ ಬಿಡುಗಡೆಗೊಂಡಿದ್ದ ಶಿವಮಣಿ ನಿರ್ದೇಶನದ ಜೋಶ್ ಚಿತ್ರದಲ್ಲಿ ರಾಕೇಶ್ ಎಂಬ ಶಾಲಾ ಹಾಗೂ ಕಾಲೇಜ್ ವಿದ್ಯಾರ್ಥಿಯ ಪಾತ್ರವನ್ನು ನಿರ್ವಹಿಸಿದ್ದ ರಾಕೇಶ್ ಅದು ತನ್ನ ಮೊದಲ ಚಿತ್ರ ಎಂದು ಯಾರಿಗೂ ಅನಿಸದ ಹಾಗೆ ನಟಿಸಿದ್ದರು. ಆದರೆ ಈ ಪಾತ್ರದಲ್ಲಿ ರಾಕೇಶ್ ಬದಲಾಗಿ ಬೇರೊಬ್ಬ ನಟ ನಟಿಸಬೇಕಿತ್ತು, ಆದರೆ ನಂತರ ಅದು ರಾಕೇಶ್ ಅಡಿಗ ಪಾಲಾಯಿತು ಎಂಬ ವಿಚಾರವನ್ನು ರಾಕೇಶ್ ಅಡಿಗ ತಾಯಿ ಲತಾ ಅಡಿಗ ಅವರು ತಿಳಿಸಿದ್ದಾರೆ.

ಆಡಿಷನ್ ಮೂಲಕ ಆಯ್ಕೆ
ಚಿತ್ರರಂಗದ ನಂಟು ಹೆಚ್ಚಿಲ್ಲದ ರಾಕೇಶ್ ಅಡಿಗ ಚಿತ್ರರಂಗಕ್ಕೆ ಹೇಗೆ ಆಯ್ಕೆಯಾದರು ಹಾಗೂ ಜೋಶ್ ರೀತಿಯ ಬ್ಲಾಕ್‌ಬಸ್ಟರ್ ಚಿತ್ರದಲ್ಲಿ ನಾಯಕನ ಪಾತ್ರ ಹೇಗೆ ಗಿಟ್ಟಿಸಿಕೊಂಡರು ಎಂಬ ಪ್ರಶ್ನೆಗೆ 'ಎಂಜಿ ವರ್ಸ್' ಎಂಬ ಯುಟ್ಯೂಬ್ ಚಾನೆಲ್‌ನ ಸಂದರ್ಶನದಲ್ಲಿ ಉತ್ತರಿಸಿದ ರಾಕೇಶ್ ತಾಯಿ ಲತಾ ಅಡಿಗ 'ಆತ ನಾಯಕನಾಗಿ ಆಯ್ಕೆಯಾಗಿದ್ದನ್ನು ಈಗಲೂ ಸಹ ನನ್ನಿಂದ ನಂಬಲು ಸಾಧ್ಯವಾಗುವುದಿಲ್ಲ. ಏಕೆಂದರೆ ಆಟ ಆಡಿಕೊಂಡೇ ನಟನಾಗಿಬಿಟ್ಟ. ಗೆಳೆಯರೆಲ್ಲಾ ಸೇರಿ ಚಿತ್ರದ ಆಡಿಷನ್ ನಡೆಯುತ್ತಿದೆ ಎಂದು ಭಾಗವಹಿಸಿದ್ರು ಹಾಗೂ ಅದರಲ್ಲಿ ಆಯ್ಕೆಯೂ ಸಹ ಆಗಿಬಿಟ್ಟರು' ಎಂದು ಹೇಳಿಕೆ ನೀಡಿದರು.

ನಾಯಕನ ಪಾತ್ರಕ್ಕೆ ರಾಕೇಶ್ ಆಯ್ಕೆಯಾಗಿರಲಿಲ್ಲ
ಇನ್ನು ಜೋಶ್ ಚಿತ್ರದ ನಾಯಕನ ಪಾತ್ರಕ್ಕೆ ಮೊದಲಿಗೆ ಬೇರೆಯವರು ಆಯ್ಕೆಯಾಗಿದ್ದರು ಹಾಗೂ ನಂತರ ರಾಕೇಶ್ ನಟನೆ, ಟ್ಯಾಲೆಂಟ್ ನೋಡಿ ಬದಲಾವಣೆ ಮಾಡಿಕೊಂಡು ಆತನಿಗೆ ನಾಯಕನ ಪಾತ್ರ ಮಾಡಲು ಅವಕಾಶ ನೀಡಿದರು ಎಂದೂ ಸಹ ಲತಾ ಅಡಿಗ ತಿಳಿಸಿದರು. ಅಷ್ಟೇ ಅಲ್ಲದೇ ಚಿತ್ರ ಹಿಟ್ ಆದ ಕಾರಣ ಚಿತ್ರತಂಡ ನಟಿಸಿದ್ದ ಹುಡುಗರಿಗೆಲ್ಲಾ ಪಲ್ಸರ್ ಬೈಕ್ ಕೊಟ್ಟಿತ್ತು, ಅದನ್ನೆಲ್ಲಾ ನೋಡಿ ಖುಷಿಯಾಗಿತ್ತು ಎಂದು ಹಳೆಯ ನೆನಪನ್ನು ಮೆಲುಕು ಹಾಕಿದರು.

ಸೆಲೆಬ್ರಿಟಿ ಎಂಬ ಫೀಲ್ ಇಲ್ಲ
ಇನ್ನು ಇಷ್ಟು ಚಿತ್ರಗಳಲ್ಲಿ ನಟಿಸಿದ್ದರೂ ಸಹ ರಾಕೇಶ್ ಅಡಿಗಗೆ ತಾನೊಬ್ಬ ಸೆಲೆಬ್ರಿಟಿ ಎಂಬ ಭಾವನೆಯೇ ಇಲ್ಲ ಎನ್ನುವ ರಾಕೇಶ್ ತಾಯಿ ಲತಾ ಅಡಿಗ ಆತ ಹೊರಗೆ ಹೋಗುವಾಗ, ಕಾರ್ಯಕ್ರಮಗಳಿಗೆ ತೆರಳುವಾಗ ಬ್ರಾಂಡೆಡ್ ಬಟ್ಟೆಗಳನ್ನು ಧರಿಸುವುದನ್ನೆಲ್ಲಾ ಆತ ಇಷ್ಟ ಪಡುವುದೇ ಇಲ್ಲ ಎಂದೂ ಸಹ ತಿಳಿಸಿದರು. ಎಷ್ಟೋ ಬಾರಿ ತಾನೇ ಮಗನಿಗೆ ನೀನೊಬ್ಬ ಸೆಲೆಬ್ರಿಟಿ ತುಸು ಬ್ರಾಂಡೆಡ್ ಬಟ್ಟೆಗಳನ್ನು ಹಾಕು ಎಂದದ್ದಿದೆ ಎನ್ನುತ್ತಾರೆ ಲತಾ ಅಡಿಗ.

ತಮಿಳು ಹಾಗೂ ತೆಲುಗಿಗೆ ರಿಮೇಕ್ ಆಗಿತ್ತು ಜೋಶ್
ಇನ್ನು ಜೋಶ್ ಚಿತ್ರ ಕನ್ನಡದಲ್ಲಿ ಸೂಪರ್ ಹಿಟ್ ಆದ ಕಾರಣ ಈ ಚಿತ್ರವನ್ನು ತೆಲುಗು ಹಾಗೂ ತಮಿಳಿನಲ್ಲಿಯೂ ರಿಮೇಕ್ ಮಾಡಲಾಗಿತ್ತು. ತೆಲುಗಿನಲ್ಲಿ 'ಕೆರಂಟ' ಹಾಗೂ ತಮಿಳಿನಲ್ಲಿ 'ಯುವನ್' ಎಂಬ ಶೀರ್ಷಿಕೆಗಳಡಿಯಲ್ಲಿ ಜೋಶ್ ರಿಮೇಕ್ ಮೂಡಿಬಂದಿತ್ತು.