ಮೈಸೂರು ಕೋರ್ಟ್ ಮುಂದೆ ಹೈಡ್ರಾಮ: ಗಳಗಳನೆ ಕಣ್ಣೀರು ಹಾಕಿದ ರಾಖಿ ಸಾವಂತ್

By ಮೈಸೂರು ಪ್ರತಿನಿಧಿ

ಬಾಲಿವುಡ್ ನಟಿ ರಾಖಿ ಸಾವಂತ್ ಇಂದು (ಫೆಬ್ರವರಿ 22) ಮೈಸೂರಿಗೆ ಕೋರ್ಟ್‌ಗೆ ಹಾಜರಾಗಿದ್ದರು. ಕೋರ್ಟ್‌ಗೆ ಹಾಜರಾಗುವುದಕ್ಕೂ ಮುನ್ನ ಆವರಣದ ಮುಂದೆ ಹೈಡ್ರಾಮ ಸೃಷ್ಟಿಸಿದ್ದರು. ಗಳಗಳನೆ ಅಳುತ್ತಾ ಕೋರ್ಟ್‌ ಮುಂಭಾಗದಲ್ಲಿ ಮಾಧ್ಯಮಗಳ ಮುಂದೆ ಪ್ರತ್ಯಕ್ಷ ಆಗಿದ್ದರು. ನ್ಯಾಯಾಲಯದ ಒಳಗೆ ಪ್ರವೇಶ ಮಾಡುವುದಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತಾಡಿದ ನಟಿ, ಪತಿ ಆದಿಲ್ ಖಾನ್ ದುರಾನಿ ಹಾಗೂ ಅವರ ತಂದೆ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.

ಆದಿಲ್ ಖಾನ್ ದುರಾನಿ ತನ್ನಿಂದ 1.16 ಕೋಟಿ ರೂ. ಹಣವನ್ನು ತೆಗೆದುಕೊಂಡಿದ್ದು, ಆ ಹಣವನ್ನು ಹಿಂತಿರುಗಿಸುತ್ತಿಲ್ಲ. ಅತ್ತ ಆತನ ಮನೆಯವರು ನನ್ನನ್ನು ಸೇರಿಸುತ್ತಿಲ್ಲ. ನಾನು ಎಲ್ಲಿಗೆ ಹೋಗಲಿ ? ನನಗೆ ನ್ಯಾಯ ಕೊಡಿಸಿಕೊಡಿ ಎಂದು ಬಾಲಿವುಡ್ ನಟಿ ರಾಖಿ ಸಾವಂತ್ ಕೋರ್ಟ್ ಮುಂದೆನೇ ಕಣ್ಣೀರು ಹಾಕಿಕೊಂಡಿದ್ದಾರೆ.

Rakhi Sawant in front of Mysore Court says that her father In law cannot accept her As she is a Hindu girl

ರಾಕಿಸಾವಂತ್ ಪತಿ ಆದಿಲ್ ಖಾನ್ ದುರಾನಿ ಪ್ರಕರಣದ ವಿಚಾರಣೆಗೆಂದು ಮೈಸೂರಿನ ನ್ಯಾಯಾಲಯಕ್ಕೆ ಆಗಮಿಸಿದ್ದರು. ಈ ವೇಳೆ "ನನ್ನ ಪತಿ ಆದಿಲ್ ಖಾನ್ ದುರಾನಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ನ್ಯಾಯಾಲಯ ಪತಿಯನ್ನು ಪೊಲೀಸರ ವಶಕ್ಕೆ ನೀಡಿ ಆದೇಶ ಕೊಟ್ಟಿದೆ. ನಾನೀಗ ಇಲ್ಲಿ ನ್ಯಾಯಾಧೀಶರ ಮುಂದೆ ಹಾಜರಾಗಲು ಬಂದಿದ್ದೇನೆ. ನನಗೆ ನ್ಯಾಯ ಬೇಕು. ನನ್ನ ಪತಿಗೆ ಯಾವುದೇ ಕಾರಣಕ್ಕೂ ಜಾಮೀನು ಸಿಗಬಾರದು. ಆತ ಕಾನೂನು ಬದ್ಧವಾಗಿ ನನ್ನನ್ನು ಮದುವೆಯಾಗಿದ್ದಾನೆ. ಆದರ ಎಲ್ಲಾ ದಾಖಲಾತಿಗಳೂ ನನ್ನ ಬಳಿ ಇವೆ" ಎಂದು ರಾಖಿ ಸಾವಂತ್ ಮಾಧ್ಯಮಗಳ ಮುಂದೆ ಹೇಳಿದ್ದಾರೆ.

"ಆದಿಲ್ ಖಾನ್ ದುರಾನಿಯನ್ನು ನಾನು ಕಾನೂನು ಬದ್ದವಾಗಿ ವಿವಾಹವಾಗಿದ್ದೇನೆ. ಹೀಗಾಗಿ ನ್ಯಾಯಾಲಯ ಮೇಲೆ ವಿಶ್ವಾಸವಿದ್ದು, ನನಗೆ ನ್ಯಾಯ ಸಿಗಲಿದೆ. ಹಿಂದೂ ಧರ್ಮಕ್ಕೆ ಸೇರಿದ್ದರೂ, ಪತಿಗೋಸ್ಕರ ಮುಸ್ಲಿಂ ಧರ್ಮಕ್ಕೆ ಬದಲಾದೆ. ನನ್ನ ಹೆಸರನ್ನು ಫಾತಿಮಾ ಅಂತಲೂ ಬದಲಿಸಿಕೊಂಡಿದ್ದೇನೆ. ಈಗ ನಾನು ಹಿಂದೂ ಎಂಬ ಕಾರಣಕ್ಕೆ ಅವರ ಕುಟುಂಬದವರು ನನ್ನನ್ನು ಸೊಸೆ ಅಂತ ಒಪ್ಪಿಕೊಳ್ಳುತ್ತಿಲ್ಲ." ಎಂದು ರಾಖಿ ಸಾವಂತ್ ಗಂಭೀರ ಆರೋಪ ಮಾಡಿದ್ದಾರೆ.

Rakhi Sawant in front of Mysore Court says that her father In law cannot accept her As she is a Hindu girl

ಇಷ್ಟೇ ಅಲ್ಲದೆ, " ನಾನು ಅವನಿಗೆ 1.16 ಕೋಟಿ ರೂ. ಹಣವನ್ನು ನನ್ನ ಬಳಿ ಇರುವ ಜ್ಯುವೆಲರಿ ಮಾರಿ ಕೊಟ್ಟಿದ್ದೇನೆ. ಆದಿಲ್ ಆಕ್ಟರ್ ಆಗಬೇಕು ಅಂತ ಬೇಕು ಅಂತಾನೇ ಹೇಳಿರಲಿಲ್ಲ. ಮದುವೆ ಆದ ಬಳಿಕ ನಾನು ನಟನಾಗಬೇಕು ಅಂತ ಹೇಳಿದ್ದ. ಹೀಗಾಗಿ ನನ್ನ ಮೇಲೆ ಹಲ್ಲೆಯನ್ನೂ ಮಾಡಿದ್ದ." ಎಂದು ರಾಖಿ ಸಾವಂತ್ ಆರೋಪಿಸಿದ್ದಾರೆ. ಇದರೊಂದಿಗೆ "ಆದಿಲ್ ಖಾನ್ ದುರಾನಿ ಕಳೆದ ಐದು ವರ್ಷಗಳಿಂದ ಇರಾನಿ ಮಹಿಳೆ ಜೊತೆ ಸಂಬಂಧವಿಟ್ಟುಕೊಂಡಿದ್ದಾನೆ" ಎಂದು ಹೇಳಿದ್ದಾರೆ. ಇತ್ತ ಇರಾನಿ ಮಹಿಳೆ ಕೂಡ ಆದಿಲ್ ಖಾನ್ ದುರಾನಿ ವಿರುದ್ಧ ಅತ್ಯಾಚಾರದ ಪ್ರಕರಣವನ್ನು ದಾಖಲಿಸಿದ್ದಾರೆ.

ತಿಂಗಳ ಆರಂಭದಲ್ಲಿ ರಾಖಿ ಸಾವಂತ್ ಪತಿ ಆದಿಲ್ ಖಾನ್ ದುರಾನಿಯನ್ನು ಪೊಲೀಸರು ಬಂಧಿಸಿದ್ದರು. ರಾಖಿ ಸಾವಂತ್ ಮುಂಬೈನ ಓಶಿವರ ಪೊಲೀಸ್ ಠಾಣೆಯಲ್ಲಿ ತನ್ನ ಪತಿ ಹಲ್ಲೆ ಮಾಡಿದ್ದಾನೆಂದು ದೂರನ್ನು ದಾಖಲಿಸಿದ್ದರು. ಈ ದೂರಿನಲ್ಲಿ ರಾಖಿ ಸಾವಂತ್ " ಪತಿ ತನ್ನ ಜೀವನನ್ನೇ ಹಾಳು ಮಾಡಿದ್ದಾನೆ. ತನ್ನ ಹಣವನ್ನು ಬೆದರಿಸಿ ತೆಗೆದುಕೊಂಡು ಹೋಗಿದ್ದಾನೆಂದು" ಹೇಳಿದ್ದಾರೆ.

More from Filmibeat

English summary
Rakhi Sawant, in front of Mysore Court says that her father In law cannot accept her because she is a Hindu girl,Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X