ರಂಗನ ಗಂಗಮ್ಮನ ಸ್ಟೈಲ್ ಗೆ ರಾಖಿ ಕ್ಲೀನ್ ಬೌಲ್ಡ್

By Rajendra

ಬಾಲಿವುಡ್ ಚಿತ್ರರಂಗದ ನಟಿ ಹಾಗೂ ಐಟಂ ಹಾಡುಗಳ ಸ್ಪೆಷಲಿಸ್ಟ್ ರಾಖಿ ಸಾವಂತ್ 'ರಂಗನ್ ಸ್ಟೈಲ್' ಚಿತ್ರದ ಭಾರತಿ ಸಿಂಗ್ ಹಾಗೂ ಸಂಗಡಿಗರು ಕುಣಿದಿರುವ 'ಗಂಗಮ್ಮನ ಸ್ಟೈಲ್' ಹಾಡನ್ನು ನೋಡಿ ಅಪಾರವಾಗಿ ಪ್ರಶಂಸೆ ನೀಡಿದ್ದಾರೆ.

ಕಳೆದ ವಾರ ರಾಖಿ ಸಾವಂತ್ ಅವರು ಈ ಹಾಡನ್ನು ವೀಕ್ಷಿಸಿ ಭಾರತಿ ಸಿಂಗ್ ಅವರು ಕನ್ನಡ ಸಿನಿಮಾಕ್ಕೆ ಕುಣಿದಿರುವ ಸ್ಪೀಡ್ ಹಾಗೂ ಸ್ಟೈಲ್ ಅನ್ನು ಹೊಗಳುತ್ತಾ ತಾವು ಸಹ ಇಂತಹ ಅವಕಾಶ ಸಿಕ್ಕರೆ ಕುಣಿದು ಕುಪ್ಪಳಿಸಲು ಸಿದ್ಧ ಎಂದು ರಾಷ್ಟ್ರೀಯ ವಾಹಿನಿಗಳಾದ ಆಜ್ ತಕ್ ಹಾಗೂ ಇಂಡಿಯ ಟುಡೆಗೆ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. [ಚಿತ್ರದಲ್ಲಿ ರಾಖಿ ಜೊತೆ ಭಾರತಿ ಸಿಂಗ್]

ನಾಲ್ಕು ನಿಮಿಷದ ಸಂದರ್ಶನದಲ್ಲಿ ರಾಕಿ ಸಾವಂತ್ ಅವರು 'ಚೆನ್ನೈ ಎಕ್ಸ್ ಪ್ರೆಸ್' ಇದ್ದಹಾಗೆ ಈ ಸಿನೆಮಾ ಕನ್ನಡದ ಎಕ್ಸ್ ಪ್ರೆಸ್" ಆಗಲಿ ಎಂದು ಶುಭ ನುಡಿದಿದ್ದಾರೆ. ತಾವು ಸಹ ಕನ್ನಡ ಸಿನೆಮಾದಲ್ಲಿ ನೃತ್ಯ ಮಾಡಿರುವುದನ್ನು ಹೇಳಿಕೊಂಡು ಮತ್ತೊಂದು ಅವಕಾಶವನ್ನು ಎದುರು ನೋಡುತ್ತಿದ್ದೇನೆ ಎಂದಿದ್ದಾರೆ.

ಆರೆಂಜ್ ಬ್ರದರ್ಸ್ ಅವರ 'ರಂಗನ ಸ್ಟೈಲ್' ಚಿತ್ರಕ್ಕೆ ಅಂದಿನ ರಂಗ ಇಂದಿನ ಜನಪ್ರಿಯ ಕಿಚ್ಚ ಸುದೀಪ್ ಅಭಿನಯಿಸಿದ್ದು ಗೊತ್ತೇ ಇದೆ. 'ರಂಗನ್ ಸ್ಟೈಲ್' ನಿರ್ದೇಶಕ ಪ್ರಶಾಂತ್ ಹೆಸರಾಂತ ನಿರ್ದೇಶಕ ಎಂ ಡಿ ಶ್ರೀಧರ್ ಅವರ ಶಿಷ್ಯ. ಈ ಚಿತ್ರಕ್ಕಾಗಿ ಪ್ರೇಮ ಕಥೆ ಹಾಗೂ ಹಾಸ್ಯವನ್ನು ಬಹು ಮುಖ್ಯವಾಗಿ ಇಟ್ಟುಕೊಂಡಿದ್ದಾರೆ.

ಸದ್ಯಕ್ಕೆ ಮಾತುಗಳ ಜೋಡಣೆ ಮುಗಿಸಿ ರೀರಿಕಾರ್ಡಿಂಗ್ ಕೆಲಸದಲ್ಲಿ ತೊಡಗಿರುವ ಈ ಚಿತ್ರವು ಅಕ್ಟೋಬರ್ 15ರಂದು ಧ್ವನಿ ಸುರುಳಿ ಬಿಡುಗಡೆ ಮಾಡಲಿದೆ. ನವೆಂಬರ್ ಮಾಸದಲ್ಲಿ ಪ್ರೇಕ್ಷಕರ ಮುಂದೆ ಬರಲಿದೆ ಅನ್ನುತ್ತಾರೆ ಪ್ರಶಾಂತ್. ಪ್ರದೀಪ್ 'ರಂಗನ' ಪಾತ್ರದಲ್ಲಿ ಇದ್ದಾರೆ, ರಾಣಿಯಾಗಿ ಕನ್ನಿಕಾ ತಿವಾರಿ ಅಭಿನಯಿಸಿದ್ದಾರೆ.

ದೀಪಿಕಾ ದಾಸ್, ಸಾಧು ಕೋಕಿಲ, ರೇಖಾ ದಾಸ್, ಶರತ್ ಲೋಹಿತಾಶ್ವ, ತಬಲಾ ನಾಣಿ ಹಾಗೂ ಇನ್ನಿತರರು ಇದ್ದಾರೆ. ಗುರುಕಿರಣ್ ಅವರ ಇಂಪಾದ ಸಂಗೀತ ಹೊಸ ತಂಡಕ್ಕೆ ಮ್ಯೂಜಿಕಲ್ ಲವ್ ಸ್ಟೋರಿ ಆಗುವುದಕ್ಕೂ ಸಹಾಯವಾಗಲಿದೆ. ಮುರಳಿ, ಗಣೇಶ್ ಮಾಸ್ಟರ್, ಬಾಬ್ಬಿ ಲಕ್ಷ್ಮಿ, ತ್ರಿಭುವನ್ ನೃತ್ಯ ನಿರ್ದೇಶಕರುಗಳು.

ಪಿ ಆರ್ ಸೌಂದರ್ ರಾಜ್ ಅವರ ಸಂಕಲನ, ರವಿ ವರ್ಮ ಅವರ ಸಹಾಸ, ಸಿನೆಟೆಕ್ ಸೂರಿ ಅವರ ಛಾಯಾಗ್ರಹಣ, ಮಂಜು ಮಾಂಡವ್ಯ ಅವರ ಸಂಭಾಷಣೆ, ರಾಶಿ ನೀಡನ್ಜಿ ಹಾಗೂ ಎಂ 2 ಕೆ, ಸಹಾಯಕ ನಿರ್ದೇಶಕರು. ಜಯಂತ್ ಕಾಯ್ಕಿಣಿ, ಕವಿರಾಜ್, ವಿಜ್ಞೇಶ್ವರ ರವಿ ಸಾಹಿತ್ಯ ಒದಗಿಸಿದ್ದಾರೆ. (ಒನ್ಇಂಡಿಯಾ ಕನ್ನಡ)

More from Filmibeat

English summary
Bollywood drama queen Rakhi Sawant lauds Kannada film Rangan Style. The film written and directed by Prashanth S starring Pradeep and Kannika Tiwari in the lead roles. This film also starring Sudeep in an important guest role.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X