»   » ನಟ, ನಿರ್ದೇಶಕ, ನಿರ್ಮಾಪಕ ರಕ್ಷಿತ್ ಶೆಟ್ಟಿ ಹೆಗಲಿಗೆ ಹೊಸ ಜವಾಬ್ದಾರಿ

ನಟ, ನಿರ್ದೇಶಕ, ನಿರ್ಮಾಪಕ ರಕ್ಷಿತ್ ಶೆಟ್ಟಿ ಹೆಗಲಿಗೆ ಹೊಸ ಜವಾಬ್ದಾರಿ

Posted By:
Subscribe to Filmibeat Kannada

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಟ, ನಿರ್ದೇಶಕನಾಗಿ ಯಶಸ್ಸು ಕಂಡಿದ್ದಾರೆ. 'ಕಿರಿಕ್ ಪಾರ್ಟಿ' ಚಿತ್ರದ ಮೂಲಕ ನಿರ್ಮಾಪಕರಾಗಿಯೂ ಸಕ್ಸಸ್ ಕಂಡರು. ಈಗ ಇನ್ನು ಒಂದು ಹೆಜ್ಜೆ ಮುಂದೆ ಹೋಗಿರುವ ರಕ್ಷಿತ್ ವಿತರಣೆ ಮಾಡಲು ಸಿದ್ದವಾಗಿದ್ದಾರೆ.

ಹೌದು, ನಟ, ನಿರ್ದೇಶಕ, ನಿರ್ಮಾಪಕ ರಕ್ಷಿತ್ ಶೆಟ್ಟಿ ಇನ್ಮುಂದೆ ವಿತರಕ ಕೂಡ ಆಗಲಿದ್ದಾರೆ. ಈ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಒಬ್ಬ ವ್ಯಕ್ತಿ ಹಲವು ವೃತ್ತಿಗಳನ್ನ ನಿರ್ವಹಿಸುವ ವಿಶೇಷ ದಾಖಲೆ ಮಾಡಿದ್ದಾರೆ. ವಿತರಕರಾಗಿ ಮೊದಲ ಪ್ರಯತ್ನವೆಂಬಂತೆ ಅರವಿಂದ್ ನಿರ್ದೇಶನದ 'ಹುಲಿರಾಯ' ಚಿತ್ರದ ವಿತರಣೆಯಲ್ಲಿ ರಕ್ಷಿತ್ ತೊಡಗಿಕೊಂಡಿದ್ದಾರೆ.

'ಕಿರಿಕ್ ಪಾರ್ಟಿ' ಚಿತ್ರದ ರೀಮೇಕ್ ರೈಟ್ಸ್ ಗೆ ಅಷ್ಟೊಂದು ಬೆಲೆಯೇ.? ಅಬ್ಬಬ್ಬಾ.!

Rakhsith Shetty Takes Distribution Rights of Huliraaya Movie

ಪುಷ್ಕರ್ ಮಲ್ಲಿಕಾರ್ಜುನಯ್ಯ ಮತ್ತು ನಟ ರಕ್ಷಿತ್ ಶೆಟ್ಟಿ ಜಂಟಿಯಾಗಿ 'ಹುಲಿರಾಯ' ಚಿತ್ರದ ವಿತರಣ ಹಕ್ಕನ್ನ ಖರೀಸಿದ್ದು, ರಾಜ್ಯಾದ್ಯಂತ ಬಿಡುಗಡೆ ಮಾಡಲಿದ್ದಾರೆ. 'ಹುಲಿರಾಯ' ಚಿತ್ರದ ನಿರ್ದೇಶಕ ಅರವಿಂದ್, ರಕ್ಷಿತ್ ಶೆಟ್ಟಿ ಅಭಿನಯದ ಚೊಚ್ಚಲ ಚಿತ್ರ 'ತುಘ್ಲಕ್' ಚಿತ್ರವನ್ನ ನಿರ್ದೇಶನ ಮಾಡಿದ್ದರು. ಹೀಗಾಗಿ, ಸ್ನೇಹಿತನ ಚಿತ್ರಕ್ಕೆ ಒಳ್ಳೆಯದಾಗಲಿ ಎಂಬ ಕಾರಣಕ್ಕೆ ಪುಷ್ಕರ್ ಜೊತೆ ಸೇರಿ ರಕ್ಷಿತ್ ಶೆಟ್ಟಿ ಈ ಚಿತ್ರವನ್ನ ವಿತರಣೆ ಮಾಡಲು ಮುಂದಾಗಿದ್ದಾರೆ.

ರಕ್ಷಿತ್ ಶೆಟ್ಟಿಗೆ ಮೊದಲ ಮತ್ತು ಕೊನೆಯ ಸೆಲೆಬ್ರಿಟಿ ಕ್ರಶ್ ಯಾರ ಮೇಲೆ?

Rakhsith Shetty Takes Distribution Rights of Huliraaya Movie

ಅಂದ್ಹಾಗೆ, ಬಾಲು ನಾಗೇಂದ್ರ, ದಿವ್ಯ, ಚಿರಶ್ರೀ ಸೇರಿದಂತೆ ಹಲವು ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು, ಅರ್ಜುನ್ ರಾಮು ಸಂಗೀತ ಒದಗಿಸಿದ್ದಾರೆ. ಸದ್ಯ, ಟ್ರೈಲರ್ ರಿಲೀಸ್ ಮಾಡಿರುವ 'ಹುಲಿರಾಯ', ಆಗಸ್ಟ್ ನಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.

ಸೇಲ್ ಆಗೋಯ್ತು 'ಕಿರಿಕ್ ಪಾರ್ಟಿ' ಚಿತ್ರದ ಹಿಂದಿ ರೀಮೇಕ್ ರೈಟ್ಸ್

English summary
Kannada Actor, Producer Rakhsith Shetty Takes Distribution Rights of Kannada Movie Huliraaya With Pushkara Mallikarjunaiah.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada