For Quick Alerts
  ALLOW NOTIFICATIONS  
  For Daily Alerts

  ಸಹೋದರ ಸಹೋದರಿಯರ ನಡುವಿನ ಬಾಂಧವ್ಯದ ಬೆಸುಗೆಗೆ 'ಅಪ್ಪು ರಾಖಿ'!

  |

  ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಮರೆತು ಹೋಗೋ ವ್ಯಕ್ತಿತ್ವವೇ ಅಲ್ಲ. ಅಪ್ಪು ಸರಳತೆಗೆ, ಸಹಾಯ ಮನೋಭಾವಕ್ಕೆ ಸಾಕ್ಷಿಯಾದವರು ಅದೆಷ್ಟೋ ಮಂದಿ. ಈ ಕಾರಣಕ್ಕೆ ಅವರು ಅಗಲಿದ ಬಳಿಕವೂ ಅವರನ್ನು ದೇವರಂತೆ ಪೂಜಿಸುತ್ತಿದ್ದಾರೆ. ಕರ್ನಾಟಕದ ಮೂಲೆ ಮೂಲೆಯಲ್ಲಿ ಅಪ್ಪು ಪೂಜಿಸುತ್ತಿದ್ದಾರೆ.

  ಪವರ್‌ಸ್ಟಾರ್ ಅಪಾರ ಅಭಿಮಾನಿಗಳನ್ನು ಅಗಲಿ 10 ತಿಂಗಳುಗಳಾಗುತ್ತಿದೆ. ಆದರೂ, ಅಭಿಮಾನಿಗಳು ನೋವಿನಿಂದ ಹೊರಬಂದಿಲ್ಲ. ಅದಕ್ಕೆ ಪ್ರತಿ ದಿನವೂ ಅವರ ನೆನಪಿನಲ್ಲಿ ಏನಾದರೂ ಕೆಲಸ ಮಾಡುತ್ತಲೇ ಇರುತ್ತಾರೆ. ಈಗ ರಾಖಿ ಹಬ್ಬದ ಪ್ರಯುಕ್ತ ಅಪ್ಪು ರಾಖಿಯನ್ನು ಹೊರತಂದಿದ್ದಾರೆ.

  ಕನ್ನಡ ರಾಜ್ಯೋತ್ಸವಕ್ಕೆ ಸಿನಿಮೋತ್ಸವ: 'ಗಂಧದ ಗುಡಿ' ಎದುರು 'ಕ್ರಾಂತಿ'?ಕನ್ನಡ ರಾಜ್ಯೋತ್ಸವಕ್ಕೆ ಸಿನಿಮೋತ್ಸವ: 'ಗಂಧದ ಗುಡಿ' ಎದುರು 'ಕ್ರಾಂತಿ'?

  ಆಗಸ್ಟ್ 11ರಂದು ಭಾರತದಾದ್ಯಂತ ರಾಖಿ ಹಬ್ಬವಿದೆ. ಅಣ್ಣ-ತಂಗಿಯ ಬಾಂಧವ್ಯವನ್ನು ಬೆಸೆಯುವ ಈ ಹಬ್ಬವನ್ನು ದೇಶಾದ್ಯಂತ ಅದ್ಧೂರಿಯಾಗಿ ಆಚರಣೆ ಮಾಡುತ್ತಾರೆ. ಈ ದಿನದಂದು ಅಣ್ಣ-ತಂಗಿಯಂದಿರಿಗಾಗಿ ಪುನೀತ್ ರಾಖಿ ಮಾರುಕಟ್ಟೆಯಲ್ಲಿ ಲಭ್ಯವಿದೆ. ಅಷ್ಟಕ್ಕೂ ಈ ರಾಖಿಯ ವಿಶೇಷತೆಯೇನು? ಎಲ್ಲೆಲ್ಲಿ ಸಿಗುತ್ತೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.

  ಆಗಸ್ಟ್ 11 ರಾಖಿ ಹಬ್ಬ

  ಆಗಸ್ಟ್ 11 ರಾಖಿ ಹಬ್ಬ

  "ಅಣ್ಣ ತಂಗಿಯರ ಈ ಬಂಧ ಜನುಮ ಜನುಮದ ಅನುಬಂಧ.." ಈ ಮಾತು ಅಕ್ಷರಶ: ಸತ್ಯ. ಇಬ್ಬರ ಬಾಂಧವ್ಯವನ್ನು ದಿನದಿಂದ ದಿನಕ್ಕೆ ಮತ್ತಷ್ಟು ಗಟ್ಟಿಗೊಳಿಸುವ ಹಬ್ಬವೇ ರಾಖಿ ಹಬ್ಬ. ಉತ್ತರ ಭಾರತದಲ್ಲಿ ಇದೇ ಹಬ್ಬವನ್ನು ರಕ್ಷಾ ಬಂಧನವೆಂದು ಆಚರಣೆ ಮಾಡುತ್ತಾರೆ. ಈ ಹಬ್ಬ ಈ ಬಾರಿ ಕರ್ನಾಟಕದಲ್ಲಿ ವಿಶೇಷ ಅಂತಲೇ ಹೇಳಬೇಕು. ಅದಕ್ಕೆ ಕಾರಣ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್. ಇವರ ನೆನಪಿನಲ್ಲಿ ಜನರು ರಾಖಿ ಹಬ್ಬವನ್ನು ಆಚರಣೆ ಮಾಡಲು ಜನರು ಸಜ್ಜಾಗಿದ್ದಾರೆ.

  'ಫಹಾದ್ ಫಾಸಿಲ್ ನೋಡಿ ನಾನು ಆಕ್ಟ್ ಮಾಡ್ತೀನಿ ಎಂದ್ದಿದ್ದ ಅಪ್ಪು': 'ದ್ವಿತ್ವ' ಇನ್‌ಸೈಡ್ ಸ್ಟೋರಿ!'ಫಹಾದ್ ಫಾಸಿಲ್ ನೋಡಿ ನಾನು ಆಕ್ಟ್ ಮಾಡ್ತೀನಿ ಎಂದ್ದಿದ್ದ ಅಪ್ಪು': 'ದ್ವಿತ್ವ' ಇನ್‌ಸೈಡ್ ಸ್ಟೋರಿ!

  ರಾಖಿ ಮೇಲೆ ಪುನೀತ್ ಫೋಟೊ

  ರಾಖಿ ಮೇಲೆ ಪುನೀತ್ ಫೋಟೊ

  ಆಗಸ್ಟ್ 11ರಂದು ರಾಖಿ ಹಬ್ಬವಿರುವ ಕಾರಣ ಮಾರುಕಟ್ಟೆಯಲ್ಲಿ ವಿಶೇಷ ರಾಖಿ ಲಭ್ಯವಿದೆ. ಸಹೋದರ ಸಹೋದರಿಯರ ನಡುವಿನ ಬಾಂಧವ್ಯ ಬೆಸೆಯುವ ಹಬ್ಬಕ್ಕೆ ಅಪ್ಪು ರಾಖಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಪುನೀತ್ ರಾಜ್‌ಕುಮಾರ್ ನೆನಪಿನಲ್ಲಿ ಈ ಹಬ್ಬವನ್ನು ಹಲವೆಡೆ ಆಚರಣೆ ಮಾಡಲು ನಿರ್ಧರಿಸಿದ್ದಾರೆ. ಈ ಕಾರಣಕ್ಕೆ ಅಪ್ಪು ಫೋಟೊ ಇರುವ ರಾಖಿ ಮಾರುಕಟ್ಟೆಯಲ್ಲಿ ಲಭ್ಯವಿದೆ. ಹಲವು ಪ್ರಕಾರದ ರಾಖಿಗಳ ಮಧ್ಯೆ 'ಅಪ್ಪು ರಾಖಿ' ಗಮನ ಸೆಳೆಯುತ್ತಿದೆ.

  ರಾಖಿ ಹಬ್ಬದಲ್ಲಿ ಪವರ್‌ಸ್ಟಾರ್

  ರಾಖಿ ಹಬ್ಬದಲ್ಲಿ ಪವರ್‌ಸ್ಟಾರ್

  ಕರ್ನಾಟಕದ ಹಲವೆಡೆಗಳಲ್ಲಿ 'ಅಪ್ಪು ರಾಖಿ' ಜನಪ್ರಿಯವಾಗಿದೆ. ಕರ್ನಾಟಕದಾದ್ಯಂತ ಇರುವ ಅವರ ಅಭಿಮಾನಿಗಳು 'ಅಪ್ಪು ರಾಖಿ'ಯನ್ನು ಖರೀದಿ ಮಾಡುತ್ತಿದ್ದಾರೆ. ಅವರ ಮೇಲಿನ ಅಭಿಮಾನ ಈ ರಾಖಿಯನ್ನು ನೋಡುತ್ತಿದ್ದಂತೆ ಮತ್ತಷ್ಟು ಹೆಚ್ಚಾಗಿದೆ. ಹೀಗಾಗಿ ಜನರು 'ಅಪ್ಪು ರಾಖಿ' ಖರೀದಿ ಮಾಡಲು ಆಸಕ್ತಿ ತೋರುತ್ತಿದ್ದಾರೆ.

  ಅಪ್ಪು ಸಮಾಜಮುಖಿ ಕೆಲಸ

  ಅಪ್ಪು ಸಮಾಜಮುಖಿ ಕೆಲಸ

  ಅಪ್ಪು ಸಮಾಜಮುಖಿ ಕೆಲಸಗಳು ಈಗಾಗಲೇ ಇಡೀ ಜಗತ್ತಿಗೆ ಗೊತ್ತಿದೆ. ಬದುಕಿದ್ದಾಗ ಅವರು ಮಾಡಿ ಒಳ್ಳೆಯ ಕೆಲಸಗಳು ಜನಮನ ಗೆದ್ದಿದೆ. ಹೀಗಾಗಿ ಅಪ್ಪು ಮೇಲಿನ ಅಭಿಮಾನ ಮತ್ತಷ್ಟು ಹೆಚ್ಚಾಗಿದೆ. ಈ ಕಾರಣಕ್ಕೆ ರಸ್ತೆಗಳಿಗೆ, ಹೊಟೇಲ್‌ಗಳಿಗೆ, ಗ್ರಾಮಗಳ ಗಲ್ಲಿಗಳಿಗೆ ಪುನೀತ್ ರಾಜ್‌ಕುಮಾರ್ ಹೆಸರನ್ನು ಇಡುತ್ತಿದ್ದಾರೆ. ಹೀಗಾಗಿ ಈ ಬಾರಿ ಅಣ್ಣ ತಂಗಿಯರ ಹಬ್ಬಕ್ಕೆ ರಾಜಕುಮಾರನ ಕಳೆ ಬಂದಿದೆ. ಸಹೋದರ ಸಹೋದರಿಯರು ಬಾಂಧವ್ಯದಲ್ಲೂ ಅಪ್ಪು ನೆನೆಯುತ್ತಿದ್ದಾರೆ.

  Recommended Video

  ಮತ್ತೊಂದು ವಿವಾದದಲ್ಲಿ ಚಾಲೆಂಜಿಂಗ್ ಸ್ಟಾರ್, ದರ್ಶನ್ ಯಾಕ್ಹೀಗೆ ಎಡವಟ್ಟು ಮಾಡ್ಕೋತಾರೆ..? | Filmibeat Kannada
  English summary
  Raksha Bandhan 2022: Rakhi with Puneeth Rajkumar Photos Available in Market, Know More
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X