For Quick Alerts
  ALLOW NOTIFICATIONS  
  For Daily Alerts

  ರಾಕಿ ಭಾಯ್ ಮನೆಯಲ್ಲಿ ರಾಖಿ ಹಬ್ಬದ ಸಂಭ್ರಮ!

  |

  ಅದಕ್ಕೆ ನಟ ರಾಕಿಂಗ್ ಸ್ಟಾರ್ ಯಶ್ ಬಗ್ಗೆ ಇರುವುದು ಒಂದೇ ಕುತೂಹಲ. ಯಶ್ ಮುಂದಿನ ಸಿನಿಮಾ ಯಾವುದು ಎನ್ನುವುದು. ಜೊತೆಗೆ ಯಶ್ ಮುಂದಿನ ಸಿನಿಮಾ ಯಾವಾಗ ಪ್ರಕಟವಾಗಲಿದೆ ಎನ್ನುವ ದಟ್ಟ ಕುತೂಹಲದೊಂದಿಗೆ ಅವರ ಅಭಿಮಾನಿಗಳು ಕಾಯುತ್ತಾ ಕುಳಿತಿದ್ದಾರೆ.

  ಆದರೆ ಯಶ್ ತಮ್ಮ ಮುಂದಿನ ಸಿನಿಮಾದ ಬಗ್ಗೆ ಸಾಕಷ್ಟು ಎಚ್ಚರಿಕೆಯಿಂದ ಹೆಜ್ಜೆ ಇಡುವ ನಿಟ್ಟಿನಲ್ಲಿ ಸಮಯವನ್ನು ತೆಗೆದುಕೊಳ್ಳುತ್ತಿದ್ದಾರೆ. ಹಾಗಾಗಿ ಸದ್ಯ ಬ್ರೇಕ್ ತೆಗೆದುಕೊಂಡು ತಮ್ಮ ವೈಯಕ್ತಿಕ ಜೀವನದ ಹಲವು ಸಂದರ್ಭಗಳನ್ನು ಎಂಜಾಯ್ ಮಾಡುತ್ತಿದ್ದಾರೆ ರಾಕಿಂಗ್ ಸ್ಟಾರ್.

  ರಾಮ್‌ ಚರಣ್‌, ಶಂಕರ್ ಸಿನಿಮಾದ ದುಬೈ ಈವೆಂಟ್‌ಗೆ ಯಶ್ ಗೆಸ್ಟ್: 19ನೇ ಸಿನಿಮಾಗೆ ಸಿಕ್ಕಿತಾ ಸುಳಿವು?ರಾಮ್‌ ಚರಣ್‌, ಶಂಕರ್ ಸಿನಿಮಾದ ದುಬೈ ಈವೆಂಟ್‌ಗೆ ಯಶ್ ಗೆಸ್ಟ್: 19ನೇ ಸಿನಿಮಾಗೆ ಸಿಕ್ಕಿತಾ ಸುಳಿವು?

  ಇತ್ತೀಚಿಗೆ ತಮ್ಮ ಪತಿ ರಾಧಿಕಾ ಪಂಡಿತ್ ಜೊತೆಗೆ ಹಾಲಿಡೇ ಎಂಜಾಯ್ ಮಾಡಿದ್ದರು ಯಶ್. ಈ ಸೆಲೆಬ್ರೆಟಿ ಜೋಡಿಗಳ ಫೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದವು. ಈಗ ಮನೆಯಲ್ಲಿ ರಕ್ಷಾ ಬಂಧನ ಹಬ್ಬವನ್ನು ಆಚರಿಸುತ್ತಾರೆ.

  ಯಶ್ ಮನೆಯಲ್ಲಿ ರಕ್ಷಾಬಂಧನ!

  ಯಶ್ ಮನೆಯಲ್ಲಿ ರಕ್ಷಾಬಂಧನ!

  ಪ್ರತಿ ಅಣ್ಣ-ತಂಗಿಗೂ ಕೂಡ ರಕ್ಷಾಬಂಧನ ಹಬ್ಬ ಬಹಳನೇ ವಿಶೇಷ. ಅಂತೆಯೇ ಹಬ್ಬ ಬಂತು ಅಂದರೆ ನಟ ರಾಕಿಂಗ್ ಸ್ಟಾರ್ ಯಶ್ ಮನೆಯಲ್ಲಿ ಸಂಭ್ರಮ ಕಳೆಗಟ್ಟುತ್ತದೆ. ಪ್ರತಿವರ್ಷವೂ ನಟ ಯಶ್ ತಮ್ಮ ತಂಗಿ ಕೈಯಲ್ಲಿ ರಾಖಿ ಕಟ್ಟಿಸಿಕೊಂಡು ಫೋಟೋಗೆ ಪೋಸ್ ಕೊಡುತ್ತಾರೆ. ಈ ಬಾರಿಯೂ ಕೂಡ ರಾಕಿಂಗ್ ಸ್ಟಾರ್ ತಂಗಿ ನಂದಿನಿ ಅವರಿಗೆ ರಾಖಿ ಕಟ್ಟಿ ಸಂಭ್ರಮಿಸಿದ್ದಾರೆ. ಈ ಫೋಟೋಗಳನ್ನು ನಟ ಯಶ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

  75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಹಿನ್ನೆಲೆ ಮೈಸೂರಿಗೆ ಆಗಮಿಸಲಿರೋ ಯಶ್: ಫ್ಯಾನ್ಸ್ ವೇಟಿಂಗ್!75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಹಿನ್ನೆಲೆ ಮೈಸೂರಿಗೆ ಆಗಮಿಸಲಿರೋ ಯಶ್: ಫ್ಯಾನ್ಸ್ ವೇಟಿಂಗ್!

  ರಾಕಿಗೆ, ರಾಖಿ ಸಂಭ್ರಮ!

  ರಾಕಿಗೆ, ರಾಖಿ ಸಂಭ್ರಮ!

  ನಟ ರಾಕಿಂಗ್ ಸ್ಟಾರ್ ಯಶ್‌ಗೆ ಒಬ್ಬರು ತಂಗಿ ಇದ್ದಾರೆ. ಯಶ್ ತಂಗಿ ನಂದಿನಿ ಅವರು ಪ್ರತಿ ರಾಖಿ ಹಬ್ಬಕ್ಕೆ ಅಣ್ಣನ ಮನೆಗೆ ಬಂದು ಯಶ್‌ಗೆ ರಾಖಿ ಕಟ್ಟಿ ಶುಭ ಹಾರೈಸುತ್ತಾರೆ. ಅಂತೆಯೇ ಈ ಬಾರಿ ಕೂಡ ಸಂಭ್ರಮದಿಂದ ರಾಖಿ ಹಬ್ಬವನ್ನು ಅಣ್ಣ-ತಂಗಿ ಸೆಲೆಬ್ರೇಟ್ ಮಾಡಿದ್ದಾರೆ. ಇನ್ನು ತಂಗಿಗಾಗಿ ವಿಶೇಷ ಸಂದೇಶವನ್ನು ಬರೆದುಕೊಂಡು ಫೋಟೋಗಳನ್ನು ಹಂಚಿಕೊಂಡಿದ್ದಾರೆ ನಟ ಯಶ್. "ಒಡಹುಟ್ಟಿದವರು, ಜೀವಮಾನದಾದ್ಯಂತ ಪ್ರೀತಿ ಮತ್ತು ಬೆಂಬಲದಿಂದ ಬಂಧಿತರಾಗಿದ್ದೇವೆ. ಎಲ್ಲರಿಗೂ ರಕ್ಷಾ ಬಂಧನ ಹಬ್ಬದ ಶುಭಾಶಯಗಳು." ಎಂದು ಯಶ್ ಬರೆದುಕೊಂಡಿದ್ದಾರೆ.

  ಮುಂದಿನ ಚಿತ್ರಕ್ಕೆ ತಯಾರಿ?

  ಮುಂದಿನ ಚಿತ್ರಕ್ಕೆ ತಯಾರಿ?

  ನಟ ಯಶ್ ಏನೆ ಮಾಡಿದರು. ಯಾವುದೇ ವಿಚಾರವಾಗಿ ಸದ್ದು ಮಾಡಿದರು. ಯಾವುದೇ ವಿಚಾರವನ್ನು ಹಂಚಿಕೊಂಡರೂ, ಯಶ್ ಮುಂದಿನ ಸಿನಿಮಾದ ಬಗ್ಗೆಯೇ ಹತ್ತು ಹಲವು ಪ್ರಶ್ನೆಗಳು ಏಳುತ್ತಿವೆ. ಹಾಲಿ ಡೇ ಯಿಂದ ಬಂದ ಬಳಿಕ ಯಶ್ ತಮ್ಮ ಮುಂದಿನ ಸಿನಿಮಾದಲ್ಲಿ ಬ್ಯುಸಿಯಾಗಲಿದ್ದಾರೆ ಎನ್ನಲಾಗಿತ್ತು. ಆದರೆ ಅ ಬ್ಗಗೆ ಯಶ್ ಸುಳಿವು ಬಿಟ್ಟುಕೊಟ್ಟಿಲ್ಲ.

  ಪ್ರಕಟಣೆಗೆ ಕಾಯಲೇ ಬೇಕು!

  ಪ್ರಕಟಣೆಗೆ ಕಾಯಲೇ ಬೇಕು!

  ಕೆಜಿಎಫ್ ಯಶಸ್ಸು ಕಂಡಿದ್ದೇ, ಕಂಡಿದ್ದು ಯಶ್ ಮುಂದಿನ ಸಿನಿಮಾ ಯಾವುದು. ಯಶ್ ಮುಂದಿನ ಚಿತ್ರದಲ್ಲಿ ಹೇಗೆ ಕಾಣಿಸಿಕೊಳ್ಳಲಿದ್ದಾರೆ. ರಾಕಿಂಗ್ ಸ್ಟಾರ್ ಮುಂದಿನ ನಡೆ ಎನ್ನುವು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಈ ಹಿಂದೆ ಯಶ್, ಒಂದು ದೊಡ್ಡ ಯಶಸ್ಸಿನ ಬಳಿಕ ಮುಂದಿನ ಹೆಜ್ಜೆಯನ್ನು ಹುಷಾರಾಗಿ ಇಡಬೇಕು ಎಂದು ಹೇಳಿದ್ದರು. ಹಾಗಾಗೊ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿದ್ದಾರೆ. ಇನ್ನು ಯಶ್ ಮುಂದಿನ ಸಿನಿಮಾ ಪ್ರಕಟಗೊಳ್ಳುವ ತನಕ ಕಾಯಲೇ ಬೇಕು.

  Recommended Video

  ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಗೆ ಡಬಲ್ ಧಮಾಕಾ | Rocking star Yash towards Mysore | Yuva Jana Mahotsava
  English summary
  Raksha Bandhan 2022: Yash Celebrates Raksha Bandhan Festival With Sister Nandini, Know More,
  Thursday, August 11, 2022, 15:55
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X