ಚಂದನವನದಲ್ಲಿ ಯಶ್, ರಿಷಬ್ ಮಕ್ಕಳ ರಕ್ಷಾ ಬಂಧನ ಸಂಭ್ರಮ: ಧನಂಜಯ್‌ಗೆ ರಾಖಿ ಕಟ್ಟಿದ್ದು ಯಾರು?
ಅಣ್ಣ- ತಂಗಿ, ಅಕ್ಕ - ತಮ್ಮನ ಸಂಬಂಧವನ್ನು ಮತ್ತಷ್ಟು ಗಟ್ಟಿ ಮಾಡುವ ರಕ್ಷಾ ಬಂಧನ ಆಚರಣೆ ದೇಶದೆಲ್ಲೆಡೆ ಸಂಭ್ರಮದಿಂದ ಆಚರಿಸಲಾಗಿದೆ. ಸಹೋದರ ಸಹೋದರಿಯರ ನಡುವಿನ ವಿಶೇಷ ಬಾಂಧವ್ಯವನ್ನು ಆಚರಿಸುವ ಈ ರಕ್ಷಾ ಬಂಧನ ಹಿಂದೂ ಸಂಪ್ರದಾಯದ ಮಹತ್ವದ ಹಬ್ಬಗಳಲೊಂದು. ಈ ಹಬ್ಬವನ್ನು ಚಂದನವನದ ತಾರೆಯರು ಮತ್ತು ಅವರ ಮಕ್ಕಳು ಸಂಭ್ರಮದಿಂದ ಆಚರಿಸಿದ್ದಾರೆ.
ಕಾಂತಾರದಿಂದ ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ರಿಷಬ್ ಶೆಟ್ಟಿ ಅವರ ಮುದ್ದು ಮಕ್ಕಳು ಇಂದು ರಕ್ಷಾ ಬಂಧನ ಆಚರಿಸಿದ್ದಾರೆ. ನಟ ರಿಷಬ್ ಶೆಟ್ಟಿ ಹಾಗೂ ಪ್ರಗತಿ ಶೆಟ್ಟಿ ಅವರ ಮಕ್ಕಳಾದ ರಣ್ವಿತ್ ಶೆಟ್ಟಿ ಹಾಗೂ ರಾಧ್ಯಾ ಶೆಟ್ಟಿ ರಕ್ಷಾ ಬಂಧನ ಹಬ್ಬವನ್ನು ಸಡಗರದಿಂದ ಸೆಲಬ್ರೆಟ್ ಮಾಡಿದ್ದಾರೆ.

ಇಬ್ಬರು ಮಕ್ಕಳು ಮ್ಯಾಚಿಂಗ್ ಡ್ರೆಸ್ ತೊಟ್ಟು ದೇವರ ಮುಂದೆ ಫೋಟೋಗೆ ಫೋಸ್ ನೀಡಿದ್ದಾರೆ. ಮುದ್ದು ಕಂದ ರಾಧ್ಯ ಶೆಟ್ಟಿ ಅಣ್ಣನ ಕೈಗೆ ರಾಖಿ ಕಟ್ಟಿ ಸಿಹಿ ತಿನ್ನಿಸಿದೆ. "ಅಣ್ಣ-ತಂಗಿಯ ಶಾಶ್ವತ ಬಂಧದ ಸಡಗರಕ್ಕೆ ಸಾಕ್ಷಿಯಾಗುವ ರಕ್ಷಾ ಬಂಧನದ ಶುಭಾಶಯಗಳು" ಎಂದು ಪ್ರಗತಿ ಶೆಟ್ಟಿ ಮತ್ತು ರಿಷಬ್ ಶೇಟ್ಟಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ರಾಕಿಂಗ್ ಜೋಡಿ ಮನೆಯಲ್ಲಿ ರಕ್ಷ ಬಂಧನ
ಸ್ಯಾಂಡಲ್‌ವುಡ್‌ನ ರಾಕಿಂಗ್ ಜೋಡಿ ಯಶ್ ಮತ್ತು ರಾಧಿಕಾ ಪಂಡಿತ್ ಅವರ ಮಕ್ಕಳು ಕೂಡ ರಕ್ಷಾ ಬಂಧನ ಆಚರಿಸಿದ್ದಾರೆ. ಐರಾ ತನ್ನ ತಮ್ಮ ಯಥರ್ವ್ ಕೈಗೆ ರಾಖಿ ಕಟ್ಟಿ ಸಂಭ್ರಮಿಸಿದ್ದಾರೆ. ಇಬ್ಬರು ಒಂದೇ ರೀತಿಯ ಬಟ್ಟೆ ಧರಿಸಿ ಮರದ ಕಟ್ಟೆಯ ಮೇಲೆ ಕುಳಿತು ಐರಾ ಯಥರ್ವ್‌ಗೆ ಆರತಿ ಮಾಡಿ ಬೆಳಗಿ, ರಾಖಿ ಕಟ್ಟಿದ್ದಾರೆ. ಮುದ್ದಾದ ತಮ್ಮನಿಗೆ ಸಿಹಿ ತಿನ್ನಿಸಿದ ಐರಾ ಪ್ರೀತಿಯ ಅಪ್ಪುಗೆ ನೀಡಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯರಾಗಿರುವ ರಾಧಿಕಾ ಪಂಡಿತ್ ಮಕ್ಕಳ ರಕ್ಷಾ ಬಂಧನ ಸಂಭ್ರಮಾಚರಣೆಯ ವಿಡಿಯೋವನ್ನು ಹಂಚಿಕೊಂಡಿದ್ದಾರೆ. "ಕೆಲವೊಮ್ಮೆ ಜೊತೆಗಾರರು, ಕೆಲವೊಮ್ಮೆ ಪ್ರತಿಸ್ಪರ್ಧಿಗಳು, ಕೆಲವೊಮ್ಮೆ ರಕ್ಷಕರು, ಆದರೆ ಯಾವಾಗಲೂ ಒಬ್ಬರಿಗೊಬ್ಬರು... ಎಲ್ಲಾ ಒಡಹುಟ್ಟಿದವರಿಗೆ ರಕ್ಷಾಬಂಧನದ ಶುಭಾಶಯಗಳು" ಎಂದು ಪೋಸ್ಟ್ ಶೇರ್ ಮಾಡಿದ್ದಾರೆ.
ಹುಟ್ಟುಹಬ್ಬದ ಸಂಭ್ರಮ ಮುಗಿಸಿರುವ ನಟ ರಾಕ್ಷಸ ಡಾಲಿ ಧನಂಜಯ್‌ಗೆ ರಾಖಿ ತಂಗಿ ನಟಿ ತನುಜಾ ವೆಂಕಟೇಶ್ ರಾಖಿ ಕಟ್ಟಿ ಹಬ್ಬ ಆಚರಿಸಿದ್ದಾರೆ. ಧನಂಜಯ್‌ಗೆ ರಾಖಿ ಕಟ್ಟಿರುವ ಫೋಟೋ ಮತ್ತು ವಿಡಿಯೋಗಳನ್ನು ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.

ರಾಖಿ ಹಬ್ಬದಂದು ನಟ ದರ್ಶನ್ ಮನೆಯಲ್ಲೂ ಸಂಭ್ರಮ ಮನೆ ಮಾಡಿದೆ. ನಟಿ ಸೋನಾಲ್ ಈ ಬಾರಿ ದರ್ಶನ್‌ಗೆ ರಾಖಿ ಕಟ್ಟಿದ್ದಾರೆ. ಅವರು ರಾಖಿ ಕಟ್ಟುತ್ತಿರುವ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ. ರಾಖಿ ಕಟ್ಟಿಸಿಕೊಂಡು ಚಾಲೆಂಜಿಂಗ್ ಸ್ಟಾರ್ ಸೋನಾಲ್‌ಗೆ ಪ್ರೀತಿಯ ಅಪ್ಪುಗೆ ನೀಡಿದ್ದಾರೆ.
ನಟಿ ಸೋನಾಲ್ ದರ್ಶನ್ ಜೊತೆಗೆ ರಾಬರ್ಟ್ ಸಿನಿಮಾದಲ್ಲಿ ನಟಿಸಿದ್ದರು. ಸಿನಿಮಾದಲ್ಲೂ ರಾಖಿ ಕಟ್ಟಿವ ದೃಶ್ಯವಿದೆ. ಜೊತೆಗೆ ದರ್ಶನ್ ಕೂಡ ಕರ್ನಾಟಕದ ತಮ್ಮ ಅಭಿಮಾನಿಗಳಿಗೆ ಅಕ್ಕತಂಗಿಯಂದಿರಿಗೆ ರಕ್ಷಾ ಬಂಧನದ ಶುಭಾಶಯಗಳನ್ನು ತಿಳಿಸಿದ್ದಾರೆ. ರಾಖಿ ಕಟ್ಟಿಸಿಕೊಂಡಿರುವ ಫೋಟೋವನ್ನು ಶೇರ್ ಮಾಡಿದ್ದಾರೆ.
ಚಂದನವನದ ಕ್ವೀನ್ ರಕ್ಷಿತಾ ಪ್ರೇಮ್ ಸಹ ತಮ್ಮ ನಟ ರಾಣಾಗೆ ರಾಖಿ ಕಟ್ಟುವ ಮೂಲಕ ರಕ್ಷಾ ಬಂಧನ ಹಬ್ಬವನ್ನು ಆಚರಿಸಿದ್ದಾರೆ. ರಾಣಾಗೆ ರಾಖಿ ಕಟ್ಟಿದ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.


Click it and Unblock the Notifications











