twitter
    For Quick Alerts
    ALLOW NOTIFICATIONS  
    For Daily Alerts

    'ರಾಜರಥ' ತಂಡ ಹಾಗೂ Rapid ರಶ್ಮಿ ಮೇಲೆ ಪೊಲೀಸರಿಗೆ ದೂರು

    By Pavithra
    |

    Recommended Video

    ರಾಜರಥ' ತಂಡ ಹಾಗೂ Rapid ರಶ್ಮಿ ಮೇಲೆ ಪೊಲೀಸರಿಗೆ ದೂರು | Oneindia Kannada

    ರಾಜರಥ ಸಿನಿಮಾದ ನಾಯಕ ನಿರೂಪ್ ಭಂಡಾರಿ, ಅನೂಪ್ ಭಂಡಾರಿ, ನಾಯಕಿ ಅವಂತಿಕಾ ಶೆಟ್ಟಿ ಮತ್ತು ಕಾರ್ಯಕ್ರಮದ ನಿರೂಪಕಿ Rapid ರಶ್ಮಿ ಮೇಲೆ ಹೈಗ್ರೌಂಡ್ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

    ಸಿನಿಮಾ ಸಂದರ್ಶನ ಕಾರ್ಯಕ್ರಮದಲ್ಲಿ ರಾಜರಥ ನೋಡದೇ ಇರುವ ಪ್ರೇಕ್ಷಕರು ಡ್ಯಾಷ್ ಎಂದು ಕೇಳಿದ ಪ್ರಶ್ನೆ ಅನೂಪ್ ಬಂಡಾರಿ, ನಿರೂಪ್ ಬಂಡಾರಿ ಹಾಗೂ ನಾಯಕಿ ಅವಂತಿಕಾ ಶೆಟ್ಟಿ ಲೋಫರ್ ಕಚಡ ನನ್ಮಕ್ಕಳು ಎನ್ನುವ ಉತ್ತರ ನೀಡಿದ್ದರು . ಈ ಸುದ್ದಿ ಎರಡು ದಿನಗಳಿಂದ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಇದಾದ ನಂತರ ತಪ್ಪಿನ ಅರಿವಾಗಿ ನಿರ್ದೇಶಕ ಹಾಗೂ ನಟ ಪ್ರೇಕ್ಷಕರಲ್ಲಿ ಕ್ಷಮೆಯನ್ನೂ ಕೇಳಿದ್ದರು.

    ಪ್ರಶ್ನೆ ಕೇಳಿದ್ದು ತಪ್ಪಾ ಅಥವಾ ಉತ್ತರ ಕೊಟ್ಟಿದ್ದು ತಪ್ಪಾ.?ಪ್ರಶ್ನೆ ಕೇಳಿದ್ದು ತಪ್ಪಾ ಅಥವಾ ಉತ್ತರ ಕೊಟ್ಟಿದ್ದು ತಪ್ಪಾ.?

    ಆದರೆ ನಮ್ಮ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಜಯರಾಜ್ ನಾಯ್ಡು ಚಿತ್ರತಂಡ ಹಾಗೂ ನಿರೂಪಕಿ ರಶ್ಮಿ ವಿರುದ್ದ ದೂರು ದಾಖಲು ಮಾಡಿದ್ದಾರೆ. ಸಂದರ್ಶನದಲ್ಲಿ ಕನ್ನಡ ಸಿನಿಮಾವನ್ನ ನೋಡದೇ ಇರೋರು ಅಂತ ಹೇಳಿಲ್ಲ, ರಾಜರಥ ಸಿನಿಮಾವನ್ನ ನೋಡದೇ ಇರುವವರು ಕಚಡಾಗಳು ಎಂದು ಹೇಳಿಕೆ ಕೊಟ್ಟಿರುವುದು ನೋವುಂಟು ಮಾಡಿದೆ.

    Rakshana Vedhike State president filed a complaint against Rajaratha movie team

    ನಿನ್ನೆ ಕ್ಷಮೆ ಕೇಳಿದ್ದಾರೆ ಅನ್ನೋ ಮಾತ್ರಕ್ಕೆ ನಮ್ಮ ಹೋರಾಟ ನಿಲ್ಲಿಸೋಲ್ಲ ವಾಣಿಜ್ಯ ಮಂಡಳಿಗೆ ಮನವಿಯನ್ನ ನೀಡಿ ಥಿಯೇಟರ್ ಗೂ ಲಗ್ಗೆ ಇಡುತ್ತೇವೆ. ನಾವು ಹೇಳ್ತೀವಿ ಇನ್ನು ಮುಂದೆ ರಾಜರಥ ಸಿನಿಮಾವನ್ನ ನೋಡುವವರು ಕಚಡಾಗಳು

    Rapid ರಶ್ಮಿ ಹಾಗೂ ಚಿತ್ರದ ನಾಯಕಿ ಅವಂತಿಕಾ ಶೆಟ್ಟಿ ಇಲ್ಲಿವರೆಗೂ ಕ್ಷಮೆ ಕೇಳಿಲ್ಲ ಅವರಿಬ್ಬರು ಕ್ಷಮೆ ಕೇಳ್ಬೇಕು. ಎಂದು ಒತ್ತಾಯಿಸಿದ್ದಾರೆ.

    Rakshana Vedhike State president filed a complaint against Rajaratha movie team

    ಒಟ್ಟಾರೆ ತಪ್ಪು ಮಾಡಿದನ್ನು ತಿಳಿದು ಕ್ಷಮೆ ಕೇಳಿದರೂ ಕೂಡ ಬಂಡಾರಿ ಬ್ರದರ್ಸ್ ವಿರುದ್ದ ಜನರ ಕೋಪ ಕಡಿಮೆ ಆಗಿಲ್ಲ. ಚಿತ್ರದ ನಾಯಕಿ ಅವಂತಿಕಾ ಶೆಟ್ಟಿ ಹಾಗೂ ನಿರೂಪಕಿ ರಶ್ಮಿ ಮೇಲೆಯೂ ಕೆಂಡಕಾರುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಈ ವಿವಾದ ಇನ್ಯಾವ ತಿರುವು ಪಡೆದುಕೊಳ್ಳುತ್ತದೆ ನೋಡಬೇಕು.

    ಫಿಲ್ಮ್ ಚೇಂಬರ್ ಸುದ್ದಿಗೋಷ್ಠಿಯಲ್ಲಿ ಕನ್ನಡಿಗರಿಗೆ ತಲೆ ಬಾಗಿದ ಭಂಡಾರಿ ಬ್ರದರ್ಸ್ಫಿಲ್ಮ್ ಚೇಂಬರ್ ಸುದ್ದಿಗೋಷ್ಠಿಯಲ್ಲಿ ಕನ್ನಡಿಗರಿಗೆ ತಲೆ ಬಾಗಿದ ಭಂಡಾರಿ ಬ್ರದರ್ಸ್

    English summary
    Karnataka Rakshana Vedhike State president Jayaraj Naidu filed a complaint at High Court Police Station on Kannada Rajaratha movie team and anchor Rapid Rashmi
    Wednesday, April 4, 2018, 16:11
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X