For Quick Alerts
  ALLOW NOTIFICATIONS  
  For Daily Alerts

  'ಶ್ರೀಮನ್ನಾರಾಯಣ' ಟ್ರೈಲರ್ ರಿಲೀಸ್ ವೇಳೆ ರಕ್ಷಿತ್ ಕಣ್ಣೀರಿಟ್ಟಿದ್ದೇಕೆ?

  |
  ಅವನೇ ಶ್ರೀಮನ್ನಾರಾಯಣ: ಚಿತ್ರ ತಡವಾಗಿದ್ದಕ್ಕೆ ಕಾರಣ ಹೇಳಿದ ರಕ್ಷಿತ್ | FILMIBEAT KANNADA

  'ಅವನೇ ಶ್ರೀಮನ್ನಾರಾಯಣ' ಸ್ಯಾಂಡಲ್ ವುಡ್ ಮಾತ್ರವಲ್ಲದೆ ಇಡೀ ದೇಶದಾದ್ಯಂತ ಸದ್ದು ಮಾಡುತ್ತಿರುವ ಕನ್ನಡದ ಸಿನಿಮಾ. ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ತಂಡದವರ ಕನಸಿನ ಸಿನಿಮಾ. ಕನ್ನಡ ಚಿತ್ರಾಭಿಮಾನಿಗಳು ಕುತೂಹಲ, ಕಾತರದಿಂದ ಉಸಿರು ಬಿಗಿ ಹಿಡಿದು ಕಾಯುತ್ತಿರುವ ಸಿನಿಮಾ.

  ಭಾರಿ ನಿರೀಕ್ಷೆ ಮೂಡಿಸಿರುವ 'ಅವನೇ ಶ್ರೀಮನ್ನಾರಾಯಣ' ಚಿತ್ರದ ಟ್ರೈಲರ್ ಅನ್ನು ಅದ್ದೂರಿಯಾಗಿ ರಿಲೀಸ್ ಮಾಡಲಾಗಿದೆ. ಐದು ಭಾಷೆಯಲ್ಲಿ ಚಿತ್ರದ ಟ್ರೈಲರ್ ರಿಲೀಸ್ ಆಗಿದೆ. ಟ್ರೈಲರ್ ರಿಲೀಸ್ ಸಮಯದಲ್ಲಿ ನಟ ರಕ್ಷಿತ್ ಶೆಟ್ಟಿ ಭಾವುಕರಾಗಿ ಕಣ್ಣೀರಾಕಿದ್ದಾರೆ. ಮೂರು ವರ್ಷದ ಕಠಿಣ ಶ್ರಮದ ಫಲವನ್ನು ತೆರೆ ಮೇಲೆ ನೋಡಿದಾಗ ರಕ್ಷಿತ್ ಭಾವುಕರಾಗಿದ್ದಾರೆ. ಹಳೆಯ ದಿನಗಳನ್ನು ನೆನೆದು ಕಣ್ಣೀರಾಕಿದರು.

  'ಅವನೇ ಶ್ರೀಮನ್ನಾರಾಯಣ' ಟ್ರೈಲರ್ ನೋಡಿ ಸ್ಟಾರ್ ನಟರು ಹೇಳಿದ್ದೇನು?'ಅವನೇ ಶ್ರೀಮನ್ನಾರಾಯಣ' ಟ್ರೈಲರ್ ನೋಡಿ ಸ್ಟಾರ್ ನಟರು ಹೇಳಿದ್ದೇನು?

  ಹಳೆಯ ಲೈಫ್ ನೆನೆದ ರಕ್ಷಿತ್

  ಹಳೆಯ ಲೈಫ್ ನೆನೆದ ರಕ್ಷಿತ್

  ಅವನೇ ಶ್ರೀಮನ್ನಾರಾಯಣ ಚಿತ್ರದ ಟ್ರೈಲರ್ ರಿಲೀಸ್ ಆಗಿ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ನಾನು ತುಂಬ ಸಮಯದ ನಂತರ ನಾನು ಈವೆಂಟ್ ನಲ್ಲಿ ಭಾಗಿಯಾಗುತ್ತಿದ್ದೀನಿ. ಎಂದು ಮಾತು ಪ್ರಾರಂಭಿಸಿದ ರಕ್ಷಿತ್ ಭಾವುಕರಾದರು. . ಮೊದಲು ಬೆಂಗಳೂರಿಗೆ ಬರುವಾಗ ಝೀರೋ ಆಗಿದ್ದೆ. ಆದರೀಗ ಅವನೇ ಶ್ರೀಮನ್ನಾರಾಯಣ ಚಿತ್ರ ಐದು ಭಾಷೆಯಲ್ಲಿ ತೆರೆಗೆ ಬರುತ್ತಿದೆ. ಎಂದು ಹಳೆಯ ಲೈಫನನ್ನು ನೆನೆದು ಕಣ್ಣೀರಾಕಿದ್ರು.

  'ಅವನೇ ಶ್ರೀಮನ್ನಾರಾಯಣ' ಅಂತಿದ್ದಾರೆ ಧನುಷ್, ನಾನಿ, ನಿವಿನ್ ಪೌಲಿ'ಅವನೇ ಶ್ರೀಮನ್ನಾರಾಯಣ' ಅಂತಿದ್ದಾರೆ ಧನುಷ್, ನಾನಿ, ನಿವಿನ್ ಪೌಲಿ

  ದೊಡ್ಡ ಕನಸಿನೊಂದಿಗೆ ಬೆಂಗಳೂರಿಗೆ ಬಂದೆ

  ದೊಡ್ಡ ಕನಸಿನೊಂದಿಗೆ ಬೆಂಗಳೂರಿಗೆ ಬಂದೆ

  "ಬೆಂಗಳೂರಿಗೆ ಬರುವಾಗ ದೊಡ್ಡ ಕನಸನ್ನು ಇಟ್ಟುಕೊಬಂದಿದ್ದೆ. ನಟನಾಗಬೇಕು ಎನ್ನುವ ಆಸೆ ದೊಡ್ಡದಾಗಿತ್ತು. ಬೆಂಗಳೂರಿಗೆ ಬಂದ ಮೊದಲು ನನಗೆ ಯಾರ ಸಂಪರ್ಕವು ಇರಲಿಲ್ಲ. ಆಗ ನಾನು ಮೊದಲು ಕಿರುಚಿತ್ರ ಮಾಡಲು ಪ್ರಾರಂಭಿಸಿದೆ. ಅಂದು ಹಣ ಕೂಡ ಇರಲಿಲ್ಲ" ಎಂದು ಮಾತನಾಡುತ್ತಲೆ ಭಾವುಕರಾಗಿ ಒಂದು ಕ್ಷಣ ಸೈಲೆಂಟ್ ಆದರು.

  ನನ್ನ ತಂಡ ನನ್ನ ಜೊತೆ ಇದೆ

  ನನ್ನ ತಂಡ ನನ್ನ ಜೊತೆ ಇದೆ

  ರಕ್ಷಿತ್ ಭಾವುಕರಾಗಿ ಮಾತು ನಿಲ್ಲಿಸುತ್ತಿದ್ದಂತೆ ಸ್ನೇಹಿತರೆಲ್ಲ ರಕ್ಷಿತ್ ನನ್ನು ಹುರಿದುಂಬಿಸಿ ಮಾತನಾಡುವಂತೆ ಕೂಗಿದರು. ಮತ್ತೆ ಮಾತು ಪ್ರಾರಂಭಿಸಿದ ರಕ್ಷಿತ್ "ಮೊದಲು ಕಿರುಚಿತ್ರ ಮಾಡುವಾಗ ನನ್ನ ಜೊತೆ ಯಾರಿದ್ದರು ಈಗಲೆ ಅವರೆ ಇದ್ದಾರೆ. ಸಿಂಪಲ್ ಒಂದು ಸ್ಟೋರಿ, ಉಳಿದವರು ಕಂಡಂತೆ, ರಿಕ್ಕಿ ಹೀಗೆ ಪ್ರತಿಹಂತದಲ್ಲೂ ಅನೇಕರು ನಮ್ಮ ಜೊತೆ ಸೇರಿಕೊಂಡರು. ಈಗ ಅವನೇ ಶ್ರೀಮನ್ನಾರಾಯರಣ ಸಮಯದಲ್ಲಿ ತುಂಬ ಜನ ಇದ್ದಾರೆ. ಎಲ್ಲರಿಗೂ ಒಂದೆ ಕನಸು ಉತ್ತಮ ಪ್ರೊಡೆಕ್ಟ್ ಕೊಡಬೇಕು ಎನ್ನುವುದು. ಇಡೀ ತಂಡಕ್ಕೆ ಧನ್ಯವಾದ" ಎಂದು ಹೇಳಿದರು.

  ಅಕ್ಷಯ್ ಕುಮಾರ್ ಗೆ 'ಗುಡ್ ನ್ಯೂಸ್' ಆದ್ರೆ ರಕ್ಷಿತ್ ಶೆಟ್ಟಿಗೆ ಬಿಗ್ ಚಾಲೆಂಜ್ಅಕ್ಷಯ್ ಕುಮಾರ್ ಗೆ 'ಗುಡ್ ನ್ಯೂಸ್' ಆದ್ರೆ ರಕ್ಷಿತ್ ಶೆಟ್ಟಿಗೆ ಬಿಗ್ ಚಾಲೆಂಜ್

  ಬೇರೆ ಬೇರೆ ರಾಜ್ಯದಲ್ಲಿ ಪ್ರಮೊಷನ್ ಪ್ರಾರಂಭ

  ಬೇರೆ ಬೇರೆ ರಾಜ್ಯದಲ್ಲಿ ಪ್ರಮೊಷನ್ ಪ್ರಾರಂಭ

  ಸದ್ಯ ಟ್ರೈಲರ್ ರಿಲೀಸ್ ಮಾಡಿರುವ ಚಿತ್ರತಂಡ ಪ್ರಮೋಷನ್ ನಲ್ಲಿ ಬ್ಯುಸಿಯಾಗಲಿದೆ. ವಾರ ನಂತರ ಚಿತ್ರತಂಡ ಬೇರೆ ಬೇರೆ ರಾಜ್ಯಗಳಲ್ಲಿ ಪ್ರಚಾರಕ್ಕೆ ಹೊರಡಲಿದೆ. ತಮಿಳಿನಲ್ಲಿ ನಟ ಧನುಷ್, ತೆಲುಗಿನಲ್ಲಿ ನಾನಿ ಮತ್ತು ಮಲಯಾಳಂನಲ್ಲಿ ನಟ ನಿವಿನ್ ಪೌಲಿ ಸಾಥ್ ನೀಡಿದ್ದಾರೆ. ನಿರೀಕ್ಷೆಯ ಅವನೇ ಶ್ರೀಮನ್ನಾರಾಯಣ ಹೇಗಿರಲಿದೆ ಎನ್ನುವುದು ಅಭಿಮಾನಿಗಳ ಕುತೂಹಲ.

  English summary
  Kannada actor Rakshi Shetty is emotional in the trailer launch of Avane Srimannarayana

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X