twitter
    For Quick Alerts
    ALLOW NOTIFICATIONS  
    For Daily Alerts

    100ಕ್ಕೂ ಹೆಚ್ಚು ಪ್ರೀಮಿಯರ್ ಶೋ, 1800 ಥಿಯೇಟರ್‌ಗಳಲ್ಲಿ '777 ಚಾರ್ಲಿ' ರಿಲೀಸ್

    |

    ಕನ್ನಡದ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ವಿಶ್ವದಾದ್ಯಂತ ಬಿಡುಗಡೆಗೆ ಸಜ್ಜಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ರಕ್ಷಿತ್ ಶೆಟ್ಟಿಯ '777 ಚಾರ್ಲಿ' ಗ್ರ್ಯಾಂಡ್ ಆಗಿ ರಿಲೀಸ್ ಆಗಲಿದೆ. ರಕ್ಷಿತ್ ಶೆಟ್ಟಿ ಅಂಡ್ ಟೀಮ್ ದೇಶದ ಮೂಲೆ ಮೂಲೆಯನ್ನೂಸುತ್ತಿ ಭರ್ಜರಿ ಪ್ರಚಾರ ಮಾಡುತ್ತಿದೆ.

    'ಕೆಜಿಎಫ್' ಬಳಿಕ ಅಧಿಕೃತವಾಗಿ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ರಿಲೀಸ್ ಆಗುತ್ತಿರುವ ಸಿನಿಮಾವಿದು. ಈ ಕಾರಣಕ್ಕೆ '777 ಚಾರ್ಲಿ' ಕುತೂಹಲವನ್ನು ಕೆರಳಿಸಿದೆ. 'ಅವನೇ ಶ್ರೀಮನ್ನಾರಾಯಣ' ಸಿನಿಮಾವನ್ನು ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ರಿಲೀಸ್ ಮಾಡುವ ಪ್ರಯತ್ನ ಪಟ್ಟಿದ್ದರೂ, ಅದು 100 ಪರ್ಸೆಂಟ್ ಸಕ್ಸಸ್ ಆಗಿರಲಿಲ್ಲ. ಈ ಬಾರಿ '777 ಚಾರ್ಲಿ' ಸಿನಿಮಾ ಪಕ್ಕಾ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಬಿಡುಗಡೆಯಾಗುತ್ತಿದೆ.

    '777 ಚಾರ್ಲಿ'ಯ ಪ್ಯಾನ್ ಇಂಡಿಯಾ ಟ್ರೈಲರ್ ರಿಲೀಸ್: ರಕ್ಷಿತ್ ಹಾಗೂ ಚಾರ್ಲಿ ಕಥೆಯೇನು?'777 ಚಾರ್ಲಿ'ಯ ಪ್ಯಾನ್ ಇಂಡಿಯಾ ಟ್ರೈಲರ್ ರಿಲೀಸ್: ರಕ್ಷಿತ್ ಹಾಗೂ ಚಾರ್ಲಿ ಕಥೆಯೇನು?

    ರಕ್ಷಿತ್ ಶೆಟ್ಟಿ ಈಗಾಗಲೇ ಪ್ರಮೋಷನ್ ಮಾಡುತ್ತಿದ್ದಾರೆ. ಕನ್ನಡದ ಜೊತೆ ಜೊತೆಗೆ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲೂ '777' ಚಾರ್ಲಿ ಬಗ್ಗೆ ಕ್ರೇಜ್ ಜೋರಾಗಿಯೇ ಇದೆ. ಕೇವಲ ಕರ್ನಾಟಕ ಅಷ್ಟೇ ಅಲ್ಲ. ಭಾರತದ ಪ್ರತಿಯೊಂದು ರಾಜ್ಯದಲ್ಲಿಯೂ ಸಿನಿಮಾ ಬಿಡುಗಡೆ ಮಾಡುವುದಕ್ಕೆ ಒಂದಿಷ್ಟು ಪ್ಲ್ಯಾನ್ ಮಾಡಿಕೊಂಡಿದೆ. ಹಾಗಿದ್ದರೆ, '777 ಚಾರ್ಲಿ ರಿಲೀಸ್ ಪ್ಲ್ಯಾನ್ ಏನು ಅನ್ನುವುದನ್ನು ತಿಳಿಯಲು ಮುಂದೆ ಓದಿ.

    '777 ಚಾರ್ಲಿ' 100 ಪ್ರೀಮಿಯರ್ ಶೋ

    '777 ಚಾರ್ಲಿ' 100 ಪ್ರೀಮಿಯರ್ ಶೋ

    ಸಿಂಪಲ್ ಸ್ಟಾರ್ ಸಿನಿಮಾಗಳು ಇನ್ಮುಂದೆ ಸಿಂಪಲ್ ಆಗಿ ರಿಲೀಸ್ ಆಗಲ್ಲ. ಬಹುಭಾಷೆಯಲ್ಲಿ ಬಿಡುಗಡೆಯಾಗುತ್ತಿರುವ ಈ ಸಿನಿಮಾವನ್ನು ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಸಿನಿಮಾ ಬಿಡುಗಡೆಗೂ ಒಂದು ದಿನ ಮುನ್ನ (ಜೂನ್ 10) ಭಾರತದಾದ್ಯಂತ 100ಕ್ಕೂ ಹೆಚ್ಚು ಪ್ರೀಮಿಯರ್ ಶೋಗಳನ್ನು ಆಯೋಜಿಸಲಾಗಿದೆ. ಕೆಆರ್‌ಜಿ ಸ್ಟುಡಿಯೋ ಇಂತಹದ್ದೊಂದು ವಿಭಿನ್ನ ಶೋಗೆ ಕೈ ಹಾಕಿದ್ದು, ಇಷ್ಟೊಂದು ಶೋ ಪ್ರೀಮಿಯರ್ ಆಗುತ್ತಿರುವುದು ಇದೇ ಮೊದಲು ಎನ್ನಲಾಗಿದೆ.

    2022ರಲ್ಲಿ ಯಾವ ತಿಂಗಳಲ್ಲಿ ಯಾವ ಕನ್ನಡದ ಪ್ಯಾನ್ ಇಂಡಿಯ ಸಿನಿಮಾ ರಿಲೀಸ್ ಆಗುತ್ತೆ2022ರಲ್ಲಿ ಯಾವ ತಿಂಗಳಲ್ಲಿ ಯಾವ ಕನ್ನಡದ ಪ್ಯಾನ್ ಇಂಡಿಯ ಸಿನಿಮಾ ರಿಲೀಸ್ ಆಗುತ್ತೆ

    ಎಷ್ಟು ಥಿಯೇಟರ್‌ಗಳಲ್ಲಿ '777 ಚಾರ್ಲಿ' ರಿಲೀಸ್?

    ಎಷ್ಟು ಥಿಯೇಟರ್‌ಗಳಲ್ಲಿ '777 ಚಾರ್ಲಿ' ರಿಲೀಸ್?

    '777 ಚಾರ್ಲಿ' ಸಿನಿಮಾವನ್ನು ಕೆಆರ್‌ಜಿ ಸ್ಟುಡಿಯೋ ರಿಲೀಸ್ ಮಾಡುತ್ತಿದೆ. ಕರ್ನಾಟಕದಲ್ಲಿ ಕೆಆರ್‌ಜಿ ಸ್ಟುಡಿಯೋ ರಿಲೀಸ್ ಮಾಡುತ್ತಿದ್ದರೆ, ವಿಶ್ವದೆಲ್ಲೆಡೆ ಬೇರೆ ಬೇರೆ ವಿತರಣಾ ಸಂಸ್ಥೆಗಳು ಬಿಡುಗಡೆ ಮಾಡುತ್ತಿವೆ. ಕರ್ನಾಟಕದಲ್ಲಿಯೇ ಸುಮಾರು 350 ಚಿತ್ರಮಂದಿರಗಳಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ. ಇನ್ನು ಉಳಿದಂತೆ 1450 ಚಿತ್ರಮಂದಿರಗಳು ಭಾರತದ ಇತರೆ ರಾಜ್ಯಗಳು ಹಾಗೂ ವಿದೇಶದಲ್ಲಿ ರಿಲೀಸ್ ಆಗಲಿದೆ. ಒಟ್ಟು 1800 ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದೆ.

    ವಿದೇಶದಲೆಷ್ಟು ಥಿಯೇಟರ್?

    ವಿದೇಶದಲೆಷ್ಟು ಥಿಯೇಟರ್?

    '777 ಚಾರ್ಲಿ' ಅಮೆರಿಕದಲ್ಲಿ ಸುಮಾರು 200 ಸ್ಕ್ರೀನ್‌ಗಳಲ್ಲಿ ಬಿಡುಗಡೆಯಾಗಲಿದೆ. ಗಾಲ್ಫ್‌ನಲ್ಲಿ 100 ಸ್ಕ್ರೀನ್‌ಗಳಲ್ಲಿ ರಿಲೀಸ್ ಆಗುತ್ತಿದೆ. ನೇಪಾಳದಲ್ಲಿ ರಿಲೀಸ್ ಮಾಡುವ ಬಗ್ಗೆ ಮಾತುಕತೆ ನಡೆಯುತ್ತಿದೆ. ಇನ್ನು ಹಲವೆಡೆ ಮಾತುಕತೆ ನಡೆಯುತ್ತಿದ್ದು, ವಿದೇಶದಲ್ಲಿ '777 ಚಾರ್ಲಿ' ಸಿನಿಮಾಗಾಗಿ ಸ್ಕ್ರೀನ್ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಇನ್ನು ಕೇರಳದಲ್ಲಿ ಪೃಥ್ವಿರಾಜ್ ಸುಕುಮಾರ್ ವಿತರಣೆ ಮಾಡುತ್ತಿದ್ದಾರೆ. ಕಾರ್ತಿಕ್ ಸುಬ್ಬರಾಜ್ ತಮಿಳಿನಲ್ಲಿ ಬಿಡುಗಡೆ ಮಾಡುತ್ತಿದ್ದಾರೆ. ತೆಲುಗಿನಲ್ಲಿ ರಾಣಾ ದಗ್ಗುಬಾಟಿ ವಿತರಣೆ ಮಾಡುತ್ತಿದ್ದಾರೆ.

    '777 ಚಾರ್ಲಿ' ಸಿನಿಮಾ ನೋಡಿ ಕಿಚ್ಚ ಸುದೀಪ್ ಹೇಳಿದ್ದೇನು?'777 ಚಾರ್ಲಿ' ಸಿನಿಮಾ ನೋಡಿ ಕಿಚ್ಚ ಸುದೀಪ್ ಹೇಳಿದ್ದೇನು?

    '777 ಚಾರ್ಲಿ' ಹೈಲೈಟ್ ಏನು?

    '777 ಚಾರ್ಲಿ' ಹೈಲೈಟ್ ಏನು?

    ರಕ್ಷಿತ್ ಶೆಟ್ಟಿ ನಿರ್ಮಾಣ ಸಂಸ್ಥೆ ಈ ಸಿನಿಮಾವನ್ನು ಪ್ರಡ್ಯೂಸ್ ಮಾಡಿದೆ. ಕಿರಣ್ ರಾಜ್ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ರಕ್ಷಿತ್ ಶೆಟ್ಟಿ ಜೊತೆ ರಾಜ್‌ ಬಿ ಶೆಟ್ಟಿ, ಸಂಗೀತ ಶೃಂಗೇರಿ, ದಾನಿಶ್ ಸೇಠ್ ಹಾಗೂ ತಮಿಳಿನ ಬಾಬಿ ಸಿಂಹ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಈಗಾಗಲೇ ಸಿನಿಮಾದ ಟ್ರೈಲರ್ ಪ್ರಾಣಿ ಪ್ರಿಯರ ಗಮನ ಸೆಳೆದಿದೆ. ಜೂನ್ 10ರಂದು ಬಿಡುಗಡೆಯಾಗುತ್ತಿರುವ ಸಿನಿಮಾ ಪ್ರೇಕ್ಷಕರನ್ನು ಹೇಗೆ ಸೆಳೆಯುತ್ತೆ ಅನ್ನುವ ಕುತೂಹಲವಂತೂ ಇದ್ದೇ ಇದೆ.

    English summary
    Rakshit Shetty 777 Charlie premier in 100 shows and Release in 1,800 theatres worldwide
    Tuesday, June 7, 2022, 13:31
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X