4 ವರ್ಷದ ಹಿಂದಿನ 'ಕಮಿಟ್ ಮೆಂಟ್'ಗೆ ಮತ್ತೆ ಜೀವ ನೀಡಿದ ಕೆ ಮಂಜು

By Bharath Kumar

ನಿನ್ನೆ ಮೊನ್ನೆ ಹೇಳಿದ ಮಾತಿಗೆ ಕೆಲವು ಕಡೆ ಬೆಲೆ ಇರಲ್ಲ. ಇನ್ನು ವರ್ಷಗಳ ಹಿಂದೆ ಆಡಿದ ಮಾತಿಗೆ ಯಾರ್ ಬೆಲೆ ಕೊಡ್ತಾರೆ ಎನ್ನುವ ಕಾಲ ಇದು. ಆದ್ರೆ, ನಿರ್ಮಾಪಕ ಕೆ ಮಂಜು ನಾಲ್ಕು ವರ್ಷದ ಹಿಂದಿನ 'ಕಮಿಟ್ ಮೆಂಟ್'ಗೆ ಮತ್ತೆ ಜೀವ ನೀಡುವ ಮೂಲಕ ಸುದ್ದಿಯಾಗಿದ್ದಾರೆ.

ಸತತವಾಗಿ ಹೊಸ ಹೊಸ ಸಿನಿಮಾಗಳನ್ನ ಮಾಡ್ತಿರುವ ನಿರ್ಮಾಪಕ ಕೆ ಮಂಜು ಮತ್ತೊಂದು ಸುದ್ದಿಯನ್ನ ಹಂಚಿಕೊಂಡಿದ್ದಾರೆ. ಅದೇನಪ್ಪಾ ಅಂದ್ರೆ, ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಜೊತೆ ಸಿನಿಮಾ ಮಾಡೋದಕ್ಕೆ ರೆಡಿಯಾಗ್ತಿದ್ದಾರೆ.

ಕೆ ಮಂಜು ಮತ್ತು ರಕ್ಷಿತ್ ಶೆಟ್ಟಿಯ ಈ ಚಿತ್ರಕ್ಕೆ ಕನ್ನಡದ ಸ್ಟಾರ್ ಡೈರೆಕ್ಟರ್ ಆಕ್ಷನ್ ಕಟ್ ಹೇಳುವ ಸಾಧ್ಯತೆ ಇದೆ. ಅಷ್ಟಕ್ಕೂ, ಈ ಸಿನಿಮಾ ಯಾವುದು.? ಯಾರು ಡೈರೆಕ್ಟರ್.? ಯಾವಾಗ ಶುರು ಎಂಬುದನ್ನ ಮುಂದೆ ಓದಿ...

ರಕ್ಷಿತ್ ಶೆಟ್ಟಿ ಜೊತೆ ಸಿನಿಮಾ.?

ರಕ್ಷಿತ್ ಶೆಟ್ಟಿ ಜೊತೆ ಸಿನಿಮಾ.?

ರಕ್ಷಿತ್ ಶೆಟ್ಟಿ ಮತ್ತು ಕೆ ಮಂಜು ಅವರ ಪರಿಚಯ ನಿನ್ನೆ ಮೊನ್ನೆಯದಲ್ಲ. ಸುಮಾರು ನಾಲ್ಕು ವರ್ಷದ ಹಿಂದೆಯೇ ಒಂದು ಸಿನಿಮಾ ಮಾಡಲು ಚಿಂತಿಸಿದ್ದರು. ಆದ್ರೆ, ಬೇರೆ ಪ್ರಾಜೆಕ್ಟ್ ಗಳ ಕಾರಣದಿಂದ ಅದು ಸಾಧ್ಯವಾಗಿರಲಿಲ್ಲ. ಆದ್ರೀಗ, ರಕ್ಷಿತ್ ಶೆಟ್ಟಿಗೆ ಸಿನಿಮಾ ಮಾಡುವ ಆಸೆಗೆ ಮತ್ತೆ ಜೀವ ನೀಡಿದ್ದಾರೆ.

ಭಟ್ಟರು ಡೈರೆಕ್ಷನ್.?

ಭಟ್ಟರು ಡೈರೆಕ್ಷನ್.?

ಒಂದು ವೇಳೆ ರಕ್ಷಿತ್ ಶೆಟ್ಟಿ ಮತ್ತು ಕೆ ಮಂಜು ಸಿನಿಮಾ ಟೇಕ್ ಆನ್ ಆದ್ರೆ ಆ ಚಿತ್ರಕ್ಕೆ ನಿರ್ದೇಶನ ಮಾಡುವುದು ಯಾರು ಎಂಬುದು ಪ್ರಶ್ನೆಯಾಗಿತ್ತು. ಅದಕ್ಕೆ ಉತ್ತರ ಕೊಟ್ಟಿರುವ ಮಂಜು, ಯೋಗರಾಜ್ ಭಟ್ ಅವರ ಕಡೆ ಕೈ ತೋರಿಸುತ್ತಾರೆ. ಯಾಕಂದ್ರೆ, ಕೆ ಮಂಜು ಬಳಿ ಭಟ್ಟರು ಒಂದು ಕಥೆ ಹೇಳಿದ್ರಂತೆ, ಆ ಕಥೆ ರಕ್ಷಿತ್ ಶೆಟ್ಟಿ ಸೂಕ್ತವಾಗುತ್ತೆ ಎಂದು ಮಂಜು ಭಾವಿಸಿದ್ರಂತೆ. ಹೀಗಾಗಿ, ಎಲ್ಲ ಅಂದುಕೊಂಡಂತೆ ಆದ್ರೆ, ಈ ಸಿನಿಮಾ ಶುರುವಾಗುತ್ತೆ ಎನ್ನಲಾಗುತ್ತಿದೆ.

ರಕ್ಷಿತ್ ಸಿಕ್ಕಾಪಟ್ಟೆ ಬ್ಯುಸಿ

ರಕ್ಷಿತ್ ಸಿಕ್ಕಾಪಟ್ಟೆ ಬ್ಯುಸಿ

ಸದ್ಯಕ್ಕೆ ರಕ್ಷಿತ್ ಶೆಟ್ಟು ಎರಡ್ಮೂರು ಪ್ರಾಜೆಕ್ಟ್ ಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯಕ್ಕೆ 'ಅವನೇ ಶ್ರೀಮನ್ನಾರಾಯಣ', ನಂತರ 'ಚಾರ್ಲಿ' ಚಿತ್ರಗಳ ಶೂಟಿಂಗ್ ಮಾಡ್ತಿದ್ದಾರೆ. ಈ ಕಡೆ ಕೆ ಮಂಜು, ತಮ್ಮ ಮಗ ಅಭಿನಯದ 'ಪಡ್ಡೆಹುಲಿ' ಹಾಗೂ ರವಿಚಂದ್ರನ್ ಗೆ ಹೊಸ ಸಿನಿಮಾ ಮಾಡ್ತಿದ್ದಾರೆ.

2019ಕ್ಕೆ ಆರಂಭ.?

2019ಕ್ಕೆ ಆರಂಭ.?

ಸದ್ಯದ ಮಾಹಿತಿಯ ಪ್ರಕಾರ, ಕೆ ಮಂಜು ಮತ್ತು ರಕ್ಷಿತ್ ಶೆಟ್ಟಿ ಜೋಡಿಯ ಸಿನಿಮಾ 2019ರಲ್ಲಿ ಶುರುವಾಗಬಹುದು. ಸದ್ಯ, ಸಿನಿಮಾ ಮಾಡಬೇಕು ಎಂದು ನಿರ್ಧರಿಸಿಕೊಂಡಿರುವ ನಿರ್ಮಾಪಕರು ಮತ್ತು ನಟ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಕಥೆ ಫೈನಲ್ ಆದ್ಮೇಲೆಯೇ ಉಳಿದ ಎಲ್ಲ ಮಾಹಿತಿಗಳು ಸಿಗಲಿದೆ.

More from Filmibeat

English summary
Rakshit Shetty and K Manju to keep up four-year-old commitment Producer says director Yogaraj Bhat may associate with the project; Bhatru supposedly has a story ‘apt’ for Rakshit.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X