For Quick Alerts
  ALLOW NOTIFICATIONS  
  For Daily Alerts

  'ರಕ್ಷಿತ್-ರಶ್ಮಿಕಾ' ನಿಶ್ಚಿತಾರ್ಥದ ಆಮಂತ್ರಣ ಪತ್ರಿಕೆ ನೋಡಿ

  By Bharath Kumar
  |

  ಸ್ಯಾಂಡಲ್ ವುಡ್ ನ ಮುದ್ದು ತಾರಾ ಜೋಡಿ ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ದಾಂಪತ್ಯ ಜೀವನಕ್ಕೆ ಅಣಿಯಾಗುತ್ತಿದ್ದು, ಜುಲೈ 3ರಂದು ಇವರಿಬ್ಬರ ನಿಶ್ಚಿತಾರ್ಥ ಜರುಗಲಿದೆ. ಈ ವಿಶೇಷ ಕಾರ್ಯಕ್ರಮಕ್ಕೆ ಕೇವಲ ಬಂಧು-ಮಿತ್ರರು ಮತ್ತು ಕೆಲವೇ ಕೆಲವು ಆಪ್ತರಿಗೆ ಮಾತ್ರ ಆಹ್ವಾನ ನೀಡಲಾಗಿದೆ.

  ವಿರಾಜಪೇಟೆಯ ಸೆರೆನಿಟಿ ಹಾಲ್ ನಲ್ಲಿ ಉಂಗುರ ಬದಲಿಸಿಕೊಳ್ಳುವ ಕಾರ್ಯಕ್ರಮ ನಡೆಯಲಿದ್ದು, ಕುಟುಂಬದವರು, ಬಂಧುಗಳು, ಆತ್ಮೀಯರು ಸಾಕ್ಷಿಯಾಗಲಿದ್ದಾರೆ. ಇನ್ನು ಕೊಡಗಿನ ಶೈಲಿಯಲ್ಲಿ ನಿಶ್ಚಿತಾರ್ಥ ನೆರವೇರಲಿದ್ದು. ಈಗ ನಿಶ್ಚಿತಾರ್ಥದ ಆಮಂತ್ರಣ ಪತ್ರಿಕೆ ಹೊರಬಿದ್ದಿದ್ದು, ಸಂಜೆ 6.30ಕ್ಕೆ ಅತಿಥಿಗಳಿಗಾಗಿ ಔತಣಕೂಟವನ್ನ ಏರ್ಪಡಿಲಾಗಿದೆ.

  ಅಂತೂ 'ಸುಳ್ಳು' ನಿಜ ಆಯ್ತು: ಜುಲೈ 3 ರಂದು ರಕ್ಷಿತ್-ರಶ್ಮಿಕಾ ನಿಶ್ಚಿತಾರ್ಥ ನಿಕ್ಕಿ ಆಯ್ತು.!ಅಂತೂ 'ಸುಳ್ಳು' ನಿಜ ಆಯ್ತು: ಜುಲೈ 3 ರಂದು ರಕ್ಷಿತ್-ರಶ್ಮಿಕಾ ನಿಶ್ಚಿತಾರ್ಥ ನಿಕ್ಕಿ ಆಯ್ತು.!

  ಡಿಸೈನರ್ ಶ್ರದ್ಧಾ ಪೊನ್ನಪ್ಪ ಡಿಸೈನ್ ಮಾಡಿರುವ ಗೌನ್ ನಲ್ಲಿ ರಶ್ಮಿಕಾ ಮಂದಣ್ಣ ಕಂಗೊಳಿಸಲಿದ್ದು, ತಾವೇ ಡಿಸೈನ್ ಮಾಡಿದ ಸೂಟ್ ನಲ್ಲಿ ರಕ್ಷಿತ್ ಮಿಂಚಲಿದ್ದಾರಂತೆ. ಇನ್ನು ವಿವೇಕ್ ಸೋಮಯ್ಯ ತಂಡದಿಂದ ಡಿ.ಜೆ. ಡ್ಯಾನ್ಸ್ ಇರುತ್ತದೆ ಎನ್ನಲಾಗಿದೆ.

  ಭಾವಿ ಅಳಿಯ ರಕ್ಷಿತ್ ಶೆಟ್ಟಿಗೆ ರಶ್ಮಿಕಾ ತಂದೆ ಕೊಟ್ಟ ದುಬಾರಿ ಉಡುಗೊರೆ ಏನ್ಗೊತ್ತೇ.?ಭಾವಿ ಅಳಿಯ ರಕ್ಷಿತ್ ಶೆಟ್ಟಿಗೆ ರಶ್ಮಿಕಾ ತಂದೆ ಕೊಟ್ಟ ದುಬಾರಿ ಉಡುಗೊರೆ ಏನ್ಗೊತ್ತೇ.?

  ನಿಶ್ಚಿತಾರ್ಥಕ್ಕೆ ಕೆಲವೇ ದಿನಗಳು ಬಾಕಿಯಿದ್ದು, ಎರಡು ಕುಟುಂಬದವರಿಂದ ಸಿದ್ದತೆಗಳು ಭರದಿಂದ ಸಾಗುತ್ತಿದೆ. ಈ ಮೊದಲೇ ಹೇಳಿದಾಗೆ, ಎರಡು ವರ್ಷದ ನಂತರ ಮದುವೆಯ ಯೋಚನೆ ಮಾಡಲಾಗಿದೆಯಂತೆ.

  English summary
  Kannada Actor Rakshit Shetty and Kannada Actress Rashmika Mandanna Engagement Invitation Card. Engagement Held on Junly 3rd at Virajpete.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X