Don't Miss!
- Finance ಆಕ್ಸಿಸ್ ಬ್ಯಾಂಕ್ಗೆ ಭರ್ಜರಿ ಲಾಟರಿ, 7,129 ಕೋಟಿ ನಿವ್ವಳ ಲಾಭ!
- News Gold Price: ಚಿನ್ನ ಮತ್ತು ಬೆಳ್ಳಿ ದರದಲ್ಲಿ ಭಾರೀ ಇಳಿಕೆ, ಇಂದಿನ ಬೆಲೆ ವಿವರ
- Lifestyle ಬಾಯಿ ಚಪ್ಪರಿಸಿ ಸವಿಯುವ ನೆಲ್ಲಿಕಾಯಿ ಉಪ್ಪಿನಕಾಯಿ..!
- Sports IPL 2024 :ಬಲಿಷ್ಠ ಹೈದರಾಬಾದ್ ಬಗ್ಗು ಬಡಿದ ಆರ್ಸಿಬಿ: ಕಮಿನ್ಸ್ ಪಡೆಗೆ ಹೀನಾಯ ಸೋಲು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಜುಲೈ 3, ಇಂದು ರಕ್ಷಿತ್-ರಶ್ಮಿಕಾ ಎಂಗೇಜ್ ಮೆಂಟ್ ಕಣ್ರಪ್ಪೋ
ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಮತ್ತು ನಟಿ ರಶ್ಮಿಕಾ ಮಂದಣ್ಣ ಪಾಲಿನ ಶುಭ ದಿನ ಜುಲೈ 3 ಬಂದೇ ಬಿಡ್ತು. ಜುಲೈ 3, ಅಂದ್ರೆ ಇಂದು ಇವರಿಬ್ಬರ ನಿಶ್ಚಿತಾರ್ಥ ಕಾರ್ಯಕ್ರಮ ವಿರಾಜಪೇಟೆಯಲ್ಲಿ ನಡೆಯಲಿದೆ. ಈ ವಿಶೇಷ ಕಾರ್ಯಕ್ರಮದಲ್ಲಿ ಎರಡು ಕುಟುಂಬದವರು ಮತ್ತು ಆಪ್ತರು ಭಾಗಿಯಾಗಲಿದ್ದಾರೆ.
ಕಿರಿಕ್ ಜೋಡಿಯ ಎಂಗೇಜ್ ಮೆಂಟ್ ಕಾರ್ಯಕ್ರಮಕ್ಕೆ ಬಂಧು, ಬಾಂಧವರ ಜೊತೆ ಚಿತ್ರರಂಗದ ಕೆಲ ತಾರೆಯರು ಕೂಡ ಆಗಮಿಸಲಿದ್ದಾರೆ. ಇವರಿಬ್ಬರ ನಿಶ್ಚಿತಾರ್ಥಕ್ಕೆ ವಿರಾಜಪೇಟೆಯ ಸೆರಿನಿಟಿ ಹಾಲ್ ಶೃಂಗಾರಗೊಂಡಿದ್ದು, ಸಂಜೆ 6.30ಕ್ಕೆ ಅತಿಥಿಗಳಿಗಾಗಿ ಔತಣಕೂಟವನ್ನ ಏರ್ಪಡಿಲಾಗಿದೆ. ಹೀಗಾಗಿ, ಇಂದು ಎಲ್ಲರ ಕಣ್ಣು ವಿರಾಜಪೇಟೆಯತ್ತ ಬೀಳಲಿದೆ.
'ರಕ್ಷಿತ್-ರಶ್ಮಿಕಾ' ನಿಶ್ಚಿತಾರ್ಥದ ಆಮಂತ್ರಣ ಪತ್ರಿಕೆ ನೋಡಿ
ಇನ್ನು ನಿಶ್ಚಿತಾರ್ಥದ ದಿನವಾದ ಇಂದು ನವ ಜೋಡಿಗಳು ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎಂಬ ಕುತೂಹಲ ಕಾಡುವುದು ಸಹಜ. ರಶ್ಮಿಕಾ ಅವರು ಪೀಚ್ ಕಲರ್ ನ ಗೌನ್ ನಲ್ಲಿ ಮಿಂಚಲಿದ್ದು, ರಕ್ಷಿತ್ ಶೆಟ್ಟಿ ಕೆನೆ ಬಣ್ಣದ ಟುಕ್ಸೆಡೊ ಮತ್ತು ಪೀಚ್ ಕಲರ್ ನ ಟೈ ನಲ್ಲಿ ಕಂಗೊಳಿಸಿದ್ದಾರಂತೆ.
'ಹೃದಯದ ಒಡತಿ' ರಶ್ಮಿಕಾಗೆ ರಕ್ಷಿತ್ ಶೆಟ್ಟಿ ಕೊಟ್ಟ 'ಒಲವಿನ ಉಡುಗೊರೆ' ಏನು.?
'ಕಿರಿಕ್ ಪಾರ್ಟಿ' ಚಿತ್ರದ ಯಶಸ್ವಿ ಜೋಡಿಗಳಾದ ರಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣ ಈಗ ನಿಜ ಜೀವನದಲ್ಲಿಯೂ ಜೊತೆಯಾಗುತ್ತಿದ್ದಾರೆ. ಈಗಾಗಲೇ ರಕ್ಷಿತ್ ಶೆಟ್ಟಿ ಅವರೇ ಹೇಳಿರುವ ಪ್ರಕಾರ, ಎರಡು ವರ್ಷದ ನಂತರ ಮದುವೆ ಆಗಲು ನಿರ್ಧರಿಸಲಿದ್ದಾರೆ ಎನ್ನಲಾಗಿದೆ.
ಭಾವಿ ಸೊಸೆಗೆ ರಕ್ಷಿತ್ ಶೆಟ್ಟಿ ತಾಯಿಯ ಸ್ಪೆಷಲ್ ಉಡುಗೊರೆ ಏನು?