twitter
    For Quick Alerts
    ALLOW NOTIFICATIONS  
    For Daily Alerts

    ಜುಲೈ 3, ಇಂದು ರಕ್ಷಿತ್-ರಶ್ಮಿಕಾ ಎಂಗೇಜ್ ಮೆಂಟ್ ಕಣ್ರಪ್ಪೋ

    By Bharath Kumar
    |

    ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಮತ್ತು ನಟಿ ರಶ್ಮಿಕಾ ಮಂದಣ್ಣ ಪಾಲಿನ ಶುಭ ದಿನ ಜುಲೈ 3 ಬಂದೇ ಬಿಡ್ತು. ಜುಲೈ 3, ಅಂದ್ರೆ ಇಂದು ಇವರಿಬ್ಬರ ನಿಶ್ಚಿತಾರ್ಥ ಕಾರ್ಯಕ್ರಮ ವಿರಾಜಪೇಟೆಯಲ್ಲಿ ನಡೆಯಲಿದೆ. ಈ ವಿಶೇಷ ಕಾರ್ಯಕ್ರಮದಲ್ಲಿ ಎರಡು ಕುಟುಂಬದವರು ಮತ್ತು ಆಪ್ತರು ಭಾಗಿಯಾಗಲಿದ್ದಾರೆ.

    ಕಿರಿಕ್ ಜೋಡಿಯ ಎಂಗೇಜ್ ಮೆಂಟ್ ಕಾರ್ಯಕ್ರಮಕ್ಕೆ ಬಂಧು, ಬಾಂಧವರ ಜೊತೆ ಚಿತ್ರರಂಗದ ಕೆಲ ತಾರೆಯರು ಕೂಡ ಆಗಮಿಸಲಿದ್ದಾರೆ. ಇವರಿಬ್ಬರ ನಿಶ್ಚಿತಾರ್ಥಕ್ಕೆ ವಿರಾಜಪೇಟೆಯ ಸೆರಿನಿಟಿ ಹಾಲ್ ಶೃಂಗಾರಗೊಂಡಿದ್ದು, ಸಂಜೆ 6.30ಕ್ಕೆ ಅತಿಥಿಗಳಿಗಾಗಿ ಔತಣಕೂಟವನ್ನ ಏರ್ಪಡಿಲಾಗಿದೆ. ಹೀಗಾಗಿ, ಇಂದು ಎಲ್ಲರ ಕಣ್ಣು ವಿರಾಜಪೇಟೆಯತ್ತ ಬೀಳಲಿದೆ.

    'ರಕ್ಷಿತ್-ರಶ್ಮಿಕಾ' ನಿಶ್ಚಿತಾರ್ಥದ ಆಮಂತ್ರಣ ಪತ್ರಿಕೆ ನೋಡಿ'ರಕ್ಷಿತ್-ರಶ್ಮಿಕಾ' ನಿಶ್ಚಿತಾರ್ಥದ ಆಮಂತ್ರಣ ಪತ್ರಿಕೆ ನೋಡಿ

    Rakshit Shetty and Rashmika Mandanna Engagement

    ಇನ್ನು ನಿಶ್ಚಿತಾರ್ಥದ ದಿನವಾದ ಇಂದು ನವ ಜೋಡಿಗಳು ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎಂಬ ಕುತೂಹಲ ಕಾಡುವುದು ಸಹಜ. ರಶ್ಮಿಕಾ ಅವರು ಪೀಚ್ ಕಲರ್ ನ ಗೌನ್ ನಲ್ಲಿ ಮಿಂಚಲಿದ್ದು, ರಕ್ಷಿತ್ ಶೆಟ್ಟಿ ಕೆನೆ ಬಣ್ಣದ ಟುಕ್ಸೆಡೊ ಮತ್ತು ಪೀಚ್ ಕಲರ್ ನ ಟೈ ನಲ್ಲಿ ಕಂಗೊಳಿಸಿದ್ದಾರಂತೆ.

    'ಹೃದಯದ ಒಡತಿ' ರಶ್ಮಿಕಾಗೆ ರಕ್ಷಿತ್ ಶೆಟ್ಟಿ ಕೊಟ್ಟ 'ಒಲವಿನ ಉಡುಗೊರೆ' ಏನು.?'ಹೃದಯದ ಒಡತಿ' ರಶ್ಮಿಕಾಗೆ ರಕ್ಷಿತ್ ಶೆಟ್ಟಿ ಕೊಟ್ಟ 'ಒಲವಿನ ಉಡುಗೊರೆ' ಏನು.?

    'ಕಿರಿಕ್ ಪಾರ್ಟಿ' ಚಿತ್ರದ ಯಶಸ್ವಿ ಜೋಡಿಗಳಾದ ರಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣ ಈಗ ನಿಜ ಜೀವನದಲ್ಲಿಯೂ ಜೊತೆಯಾಗುತ್ತಿದ್ದಾರೆ. ಈಗಾಗಲೇ ರಕ್ಷಿತ್ ಶೆಟ್ಟಿ ಅವರೇ ಹೇಳಿರುವ ಪ್ರಕಾರ, ಎರಡು ವರ್ಷದ ನಂತರ ಮದುವೆ ಆಗಲು ನಿರ್ಧರಿಸಲಿದ್ದಾರೆ ಎನ್ನಲಾಗಿದೆ.

    ಭಾವಿ ಸೊಸೆಗೆ ರಕ್ಷಿತ್ ಶೆಟ್ಟಿ ತಾಯಿಯ ಸ್ಪೆಷಲ್ ಉಡುಗೊರೆ ಏನು? ಭಾವಿ ಸೊಸೆಗೆ ರಕ್ಷಿತ್ ಶೆಟ್ಟಿ ತಾಯಿಯ ಸ್ಪೆಷಲ್ ಉಡುಗೊರೆ ಏನು?

    English summary
    Kannada Actor Rakshit Shetty and Kannada Actress Rashmika Mandanna's Engagement will be held on Monday, 3 July at VirajaPete.
    Monday, July 3, 2017, 13:40
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X