ಕಿರಿಕ್ ಜೋಡಿ ಬ್ರೇಕ್ ಅಪ್: ಮತ್ತೆ ಅದಲು ಬದಲಾಯ್ತು ಉಂಗುರ

By Pavithra

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ನಿಶ್ಚಿತಾರ್ಥ ಮುರಿದು ಬಿದ್ದಿದೆ. ಇಷ್ಟು ದಿನಗಳ ಕಾಲ ಗಾಸಿಪ್ ವಿಚಾರವಾಗಿ ಹರಿದಾಡುತ್ತಿದ್ದ ಸುದ್ದಿ ಈಗ ಎಲ್ಲೆಡೆ ವೈರಲ್ ಆಗಿದೆ. ರಶ್ಮಿಕಾ ಹಾಗೂ ರಕ್ಷಿತ್ ಮಧ್ಯೆ ಕಳೆದ ಒಂದು ತಿಂಗಳಿಂದ ಎಲ್ಲವೂ ಸರಿಯಿಲ್ಲ ಎನ್ನುವುದು ತಿಳಿದ ರಶ್ಮಿಕಾ ಕುಟುಂಬಸ್ಥರು ಮಧ್ಯ ಪ್ರವೇಶ ಮಾಡಿ ಇದನ್ನು ಇಲ್ಲಿಗೆ ನಿಲ್ಲಿಸೋಣ ಎನ್ನುವ ನಿರ್ಧಾರ ಮಾಡಿದ್ದಾರೆ.

ಸದ್ಯ ರಶ್ಮಿಕಾ ಚಿತ್ರರಂಗದಲ್ಲಿ ಉತ್ತಮ ಅವಕಾಶಗಳನ್ನು ಪಡೆದುಕೊಳ್ಳುತ್ತಿದ್ದು ವೃತ್ತಿ ಜೀವನದತ್ತ ಗಮನ ಹರಿಸುವಂತೆ ಕುಟುಂಬಸ್ಥರು ಸಲಹೆ ನೀಡಿದ್ದಾರೆ. ಬ್ರೇಕ್ ಅಪ್ ಎಲ್ಲಿಯವರೆಗೂ ಮುಟ್ಟಿದೆ ಎಂದರೆ ಇಬ್ಬರು ಕುಟುಂಬದವರು ನಿಶ್ಚಿತಾರ್ಥಕ್ಕೆ ಹಾಕಿಕೊಂಡಿದ್ದ ಉಂಗುರಗಳನ್ನು ವಾಪಸ್ ಮಾಡಿದ್ದಾರಂತೆ.

Rakshit Shetty and Rashmika Mandanna families return the engagement ring

ಅದಷ್ಟೇ ಅಲ್ಲದೆ ನಿಶ್ಚಿತಾರ್ಥಕ್ಕೆ ಎರಡು ಕುಟುಂಬ ಸೇರಿ ಮಾಡಿದ್ದ ಖರ್ಚು ವೆಚ್ಚವನ್ನು ಲೆಕ್ಕ ಹಾಕಿದ್ದಾರೆ ಎನ್ನುತಿವೆ ಮೂಲಗಳು. ರಶ್ಮಿಕಾ ಹಾಗೂ ರಕ್ಷಿತ್ ನಿಶ್ಚಿತಾರ್ಥ ಆದಾಗಲೇ ಗಾಂಧಿನಗರದ ಸಾಕಷ್ಟು ಮಂದಿ ಈ ಸಂಬಂಧ ಹೆಚ್ಚಿನ ದಿನ ಉಳಿಯುವುದಿಲ್ಲ ಎಂದಿದ್ದರು.

Rakshit Shetty and Rashmika Mandanna families return the engagement ring

ಈಗ ಗಾಸಿಪ್ ಆಗಿದ್ದ ಸುದ್ದಿ ನಿಜವಾಗಿದೆ. ಇನ್ನು ಮುಂದೆ ರಕ್ಷಿತ್ ಹಾಗೂ ರಶ್ಮಿಕಾ ಯಾವುದೇ ಸಂಬಂಧಗಳು ಇಲ್ಲದೇ ಇಬ್ಬರು ಸಿನಿಮಾರಂಗದ ಇಬ್ಬರು ಸ್ಟಾರ್ ಗಳಾಗಿ ಮಾತ್ರ ಕಾಣಿಸಿಕೊಳ್ಳಲಿದ್ದಾರೆ.

More from Filmibeat

English summary
Kannada actor Rakshit Shetty and Rashmika Mandanna call off their engagement. already Two families return the engagement ring
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X