»   » ನಿಶ್ಚಿತಾರ್ಥದ ನಂತರ ಮಂತ್ರಾಲಯಕ್ಕೆ ಭೇಟಿಕೊಟ್ಟ ರಕ್ಷಿತ್-ರಶ್ಮಿಕಾ

ನಿಶ್ಚಿತಾರ್ಥದ ನಂತರ ಮಂತ್ರಾಲಯಕ್ಕೆ ಭೇಟಿಕೊಟ್ಟ ರಕ್ಷಿತ್-ರಶ್ಮಿಕಾ

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನಲ್ಲಿ 200 ದಿನಗಳನ್ನು ಪೂರೈಸಿದ 'ಕಿರಿಕ್ ಪಾರ್ಟಿ' ಚಿತ್ರದ ರೀಲ್ ಜೋಡಿ ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ಇತ್ತೀಚೆಗೆ ನಿಶ್ಚಿತಾರ್ಥ ಮಾಡಿಕೊಂಡು ರಿಯಲ್ ಲೈಫ್ ನಲ್ಲೂ ಜೊತೆಯಾಗಿರಲು ಮುಂದಾಗಿದ್ದಾರೆ. ಇತ್ತೀಚೆಗೆ ಎಂಗೇಜ್ ಆದ ಈ ಜೋಡಿ ಈಗ ಮಂತ್ರಾಲಯಕ್ಕೆ ಭೇಟಿ ನೀಡಿ ರಾಘವೇಂದ್ರ ಸ್ವಾಮಿ ದರ್ಶನ ಪಡೆದಿದ್ದಾರೆ.

Rakshit Shetty and Rashmika Mandanna Visited Mantralaya Temple

ಎಂಗೇಜ್ ಆದ 'ಕಿರಿಕ್' ಜೋಡಿ: ಉಂಗುರ ಬದಲಿಸಿಕೊಂಡ ರಕ್ಷಿತ್-ರಶ್ಮಿಕಾ

ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ಜೊತೆಗೆ 'ಕಿರಿಕ್ ಪಾರ್ಟಿ' ಚಿತ್ರ ನಿರ್ದೇಶಕ ರಿಷಬ್ ಶೆಟ್ಟಿ, ಶೀತಲ್ ಶೆಟ್ಟಿ, ನಟ ಪ್ರಮೋದ್ ಶೆಟ್ಟಿ ಮತ್ತು ಚಿತ್ರತಂಡದ ಇತರರು ಸಹ ರಾಯರ ದರ್ಶನ ಪಡೆದು, ಅಲ್ಲಿನ ಸುಬುಧೇಂದ್ರ ತೀರ್ಥ ಶ್ರೀಗಳ ಆರ್ಶೀವಾದ ಪಡೆದಿದ್ದಾರೆ.

Rakshit Shetty and Rashmika Mandanna Visited Mantralaya Temple

ಇನ್ನು ಇಂದು (ಜುಲೈ 23) ಕ್ರಿಕೆಟ್ ಕಾಶಿ ಲಂಡನ್ ನ ಲಾರ್ಡ್ಸ್ ನಲ್ಲಿ ನಡೆಯಲಿರುವ ಮಹಿಳೆಯರ ವಿಶ್ವ ಕಪ್ ಕ್ರಿಕೆಟ್ ಫೈನಲ್ ಪಂದ್ಯದಲ್ಲಿ ಭಾರತ ಮಹಿಳೆಯರ ತಂಡ ಗೆಲ್ಲಲಿ ಎಂದು ದೇಶವೇ ಹಾರೈಸುತ್ತಿದೆ. ಜೊತೆಗೆ ಮಂತ್ರಾಲಯದಲ್ಲಿ ರಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣ ರವರು ಮತ್ತು ಇತರರು ಸಹ ದೇವರ ಸನ್ನಿದಿಯಿಂದ ಮಹಿಳೆಯರ ಕ್ರಿಕೆಟ್ ತಂಡಕ್ಕೆ ಗೆದ್ದು ಬರಲಿ ಎಂದು ಶುಭಹಾರೈಸಿದ್ದಾರೆ.

English summary
After engagement Rakshit Shetty and Rashmika Mandanna Visited Mantralaya Temple.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada