Breaking News: 2021ನೇ ಸಾಲಿನ ಚಿತ್ರಗಳಿಗೆ ರಾಜ್ಯಪ್ರಶಸ್ತಿ ಪ್ರಕಟ, ಇಲ್ಲಿದೆ ವಿಜೇತರ ಲಿಸ್ಟ್

2021ನೇ ಸಾಲಿನಲ್ಲಿ ಬಿಡುಗಡೆಯಾಗಿದ್ದ ಕನ್ನಡ ಚಿತ್ರಗಳಿಗೆ ರಾಜ್ಯ ಪ್ರಶಸ್ತಿ ಘೋಷಣೆಯಾಗಿದೆ. ವಿವಿಧ ವಿಭಾಗಗಳಲ್ಲಿ ವಿಜೇತರನ್ನು ಗುರ್ತಿಸಿ ಪ್ರಶಸ್ತಿ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. '777 ಚಾರ್ಲಿ' ಚಿತ್ರದ ನಟನೆಗಾಗಿ ರಕ್ಷಿತ್ ಶೆಟ್ಟಿ ಅತ್ಯುತ್ತಮ ನಟ ಪ್ರಶಸ್ತಿಗೆ ಭಾಜನರಾಗಿದ್ದಾರೆ.

'ದೊಡ್ಡಹಟ್ಟಿ ಬೋರೆ ಗೌಡ' ಚಿತ್ರಕ್ಕೆ ಮೊದಲನೇ ಅತ್ಯುತ್ತಮ ಸಿನಿಮಾ ಪ್ರಶಸ್ತಿ, '777 ಚಾರ್ಲಿ' ಚಿತ್ರಕ್ಕೆ 2ನೇ ಅತ್ಯುತ್ತಮ ಚಿತ್ರ ಪ್ರಶಸ್ತಿ ಲಭಿಸಿದೆ. ಇನ್ನು 'ಬಿಸಿಲು ಕುದುರೆ' ಚಿತ್ರಕ್ಕೆ 3ನೇ ಅತ್ಯುತ್ತಮ ಚಲನಚಿತ್ರ ರಾಜ್ಯಪ್ರಶಸ್ತಿ ಸಿಕ್ಕಿದೆ.

Rakshit Shetty Archana Jois Shine as Karnataka State Awards 2021 Winners

'ಮ್ಯೂಟ್' ಚಿತ್ರದ ನಟನೆಗಾಗಿ ಅರ್ಚನಾ ಜೋಯಿಸ್ ಅತ್ಯುತ್ತಮ ನಟಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. 'ರತ್ನನ್ ಪ್ರಪಂಚ' ಚಿತ್ರದ ನಟನೆಗಾಗಿ ಪ್ರಮೋದ್ ಅತ್ಯುತ್ತಮ ಪೋಷಕ ನಟ, 'ಬಿಸಿಲು ಕುದುರೆ' ಚಿತ್ರಕ್ಕಾಗಿ ಇಮ್ತಿಯಾಜ್ ಅತ್ಯುತ್ತಮ ಸಂಗೀತ ನಿರ್ದೇಶನ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಇನ್ನುಳಿದ ವಿತೇತರ ಪಟ್ಟಿ ಮುಂದೆ ಇದೆ ಓದಿ..

ಅತ್ಯುತ್ತಮ ಮನರಂಜನಾ ಚಿತ್ರ: ಯುವರತ್ನ

ವಿಶೇಷ ಸಾಮಾಜಿಕ ಕಳಕಳಿ ಚಿತ್ರ: ಭಾರತದ ಪ್ರಜೆಗಳಾದ ನಾವು

ಅತ್ಯುತ್ತಮ ಮಕ್ಕಳ ಚಿತ್ರ: ಕೇಕ್

ನಿರ್ದೇಶಕರ ಪ್ರಥಮ ನಿರ್ದೇಶನದ ಅತ್ಯುತ್ತಮ ಚಿತ್ರ: ಬಡವ ರಾಸ್ಕಲ್

ಅತ್ಯುತ್ತಮ ಕರ್ನಾಟಕ ಪ್ರಾದೇಶಿಕ ಭಾಷಾ ಚಿತ್ರ: ನಾಡ ಪೆದ ಆಶಾ (ಕೊಡವ)

ಅತ್ಯುತ್ತಮ ಪೋಷಕ ನಟಿ: ಉಮಾಶ್ರೀ (ರತ್ನನ್ ಪ್ರಪಂಚ)

ಅತ್ಯುತ್ತಮ ಕಥೆ: 9 ಸುಳ್ಳು ಕಥೆಗಳು(ಮಂಜುನಾಥ್ ಮುನಿಯಪ್ಪ)

ಅತ್ಯುತ್ತಮ ಸಂಭಾಷಣೆ: ಬರಗೂರು ರಾಮಚಂದ್ರಪ್ಪ(ತಾಯಿ ಕಸ್ತೂರಿ ಗಾಂಧಿ)

ಅತ್ಯುತ್ತಮ ಸಂಕಲನ: ಪ್ರತೀಕ್ ಶೆಟ್ಟಿ(777 ಚಾರ್ಲಿ)

ಅತ್ಯುತ್ತಮ ಬಾಲನಟ: ಅತೀಶ್ ಶೆಟ್ಟಿ(ಕೇಕ್)

ಅತ್ಯುತ್ತಮ ಬಾಲನಟಿ: ಬೇಬಿ ಭೈರವಿ(ಭೈರವಿ)

ಅತ್ಯುತ್ತಮ ಕಲಾ ನಿರ್ದೇಶನ: ರವಿ ಸಂತೇಹಕ್ಲು(ಭಜರಂಗಿ 2)

ಅತ್ಯುತ್ತಮ ಗೀತ ರಚನೆ: ನಾಗಾರ್ಜುನ ಶರ್ಮಾ(777 ಚಾರ್ಲಿ)

ಅತ್ಯುತ್ತಮ ಗಾಯಕ: ಅನೀಶ್ ಕೇಶವರಾವ್(ರಾಮದೂತನ ಪಾದ)

ತೀರ್ಪುಗಾರರ ವಿಶೇಷ ಪ್ರಶಸ್ತಿ: 1. ಚಿತ್ರ: ಭೈರವಿ
2. ವಸ್ತ್ರ ವಿನ್ಯಾಸ: ಯೋಗಿ ಜಿ ರಾಜ್(ಭಜರಂಗಿ-2)
3. ಪ್ರಸಾದನ: ಶಿವಕುಮಾರ್

ಅತ್ಯುತ್ತಮ ನಿರ್ಮಾಣ ನಿರ್ವಾಹಕ: ಶಿವಾರ್ಜುನ (ಪೊಗರು)

ಕೋವಿಡ್ ಹಿನ್ನೆಲೆಯಲ್ಲಿ 2021ರಲ್ಲಿ ಹೆಚ್ಚು ಸಿನಿಮಾಗಳು ಬಿಡುಗಡೆ ಆಗಿರಲಿಲ್ಲ. ಒಟ್ಟು 58 ಚಿತ್ರತಂಡಗಳು ವಿವಿಧ ವಿಭಾಗಗಳಲ್ಲಿ ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸಿದ್ದವು. ವಿವಿಧ ಕಾರಣಗಳಿಂದ ಅದರಲ್ಲಿ 5 ಚಿತ್ರಗಳನ್ನು ಕೈಬಿಟ್ಟು 53 ಚಿತ್ರಗಳನ್ನು ಆಯ್ಕೆ ಸಮಿತಿ ವೀಕ್ಷಿಸಿದೆ. ಹಿರಿಯ ಪತ್ರಕರ್ತ ಸದಾಶಿವ ಶೆಣೈ ನೇತೃತ್ವದಲ್ಲಿ ಈ ಬಾರಿ ಆಯ್ಕೆ ಸಲಹಾ ಸಮಿತಿ ರಚಿಸಲಾಗಿತ್ತು.

More from Filmibeat

English summary
Karnataka State Film Awards 2021: Rakshit Shetty, Archana Jois Emerge as Top Winners
Read more about: rakshit shetty awards sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X