'ರಿಚ್ಚಿ' ಸಿನಿಮಾ ಟೈಟಲ್ ವಿವಾದ: ರಕ್ಷಿತ್ ಶೆಟ್ಟಿ ಪ್ರತಿಕ್ರಿಯೆ

'ರಿಚ್ಚಿ' ಹೆಸರು ನಮಗೆ ಸೇರಿದ್ದು, ಆದರೆ ಅದೇ ಹೆಸರಲ್ಲಿ ನಟ, ನಿರ್ದೇಶಕ ರಕ್ಷಿತ್ ಶೆಟ್ಟಿ ಸಿನಿಮಾ ಘೋಷಣೆ ಮಾಡಿದ್ದಾರೆ ಎಂದು ಹೇಮಂತ್ ಎಂಬುವರು ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ದೂರು ದಾಖಲಿಸಿದ್ದಾರೆ.

ಹೇಮಂತ್ ಎಂಬುವರು 'ರಿಚ್ಚಿ' ಎಂಬ ಸಿನಿಮಾವನ್ನು ಎರಡು ವರ್ಷದ ಹಿಂದೆಯೇ ಆರಂಭಿಸಿ ಶೇ 70 ಭಾಗ ಚಿತ್ರೀಕರಣ ಸಹ ಮಾಡಿದ್ದರು, ಟೈಟಲ್ ನೊಂದಣಿ ಮಾಡಿಸಿದ್ದರು. ರಕ್ಷಿತ್ ಶೆಟ್ಟಿ ಅವರು ಅದೇ ಹೆಸರಿನ ಸಿನಿಮಾ ಘೋಷಣೆ ಮಾಡಿದ್ದಾರೆ ಎಂದು ಹೇಮಂತ್ ಆರೋಪಿಸಿ ದೂರು ನೀಡಿದ್ದಾರೆ.

ಆದರೆ ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ರಕ್ಷಿತ್ ಶೆಟ್ಟಿ, 'ನಾನು ಯಾವಾಗ ರಿಚ್ಚಿ ಸಿನಿಮಾದ ಟೈಟಲ್ ಅನ್ನು ಘೋಷಣೆ ಮಾಡಿದ್ದೇನೆ' ಎಂದು ಮರುಪ್ರಶ್ನೆ ಹಾಕಿದ್ದಾರೆ.

ನಾನು ಸಿನಿಮಾ ಹೆಸರು ಘೋಷಣೆಯನ್ನೇ ಮಾಡಿಲ್ಲ: ರಕ್ಷಿತ್ ಶೆಟ್ಟಿ

ನಾನು ಸಿನಿಮಾ ಹೆಸರು ಘೋಷಣೆಯನ್ನೇ ಮಾಡಿಲ್ಲ: ರಕ್ಷಿತ್ ಶೆಟ್ಟಿ

ರಕ್ಷಿತ್ ಶೆಟ್ಟಿ ಹೇಳಿರುವಂತೆ, ಅವರು ರಿಚ್ಚಿ ಸಿನಿಮಾದ ಘೋಷಣೆಯನ್ನೇ ಮಾಡಿಲ್ಲ, ಉಳಿದವರು ಕಂಡಂತೆ ಸಿನಿಮಾದ 'ರಿಚ್ಚಿ' ಪಾತ್ರವನ್ನು ಇಟ್ಟುಕೊಂಡು ಕತೆ ಹೆಣೆದಿದ್ದೇನೆ, ಆದರೆ ಸಿನಿಮಾದ ಹೆಸರನ್ನು ನಾನು ಈ ವರೆಗೆ ಘೋಷಣೆ ಮಾಡಿಲ್ಲ ಎಂದಿದ್ದಾರೆ ರಕ್ಷಿತ್ ಶೆಟ್ಟಿ.

ರಿಚ್ಚಿ ಪಾತ್ರದ ಸ್ಪೂರ್ತಿಯ ಆಧಾರದಲ್ಲಿ ಚಿತ್ರಕತೆ

ರಿಚ್ಚಿ ಪಾತ್ರದ ಸ್ಪೂರ್ತಿಯ ಆಧಾರದಲ್ಲಿ ಚಿತ್ರಕತೆ

ಉಳಿದವರು ಕಂಡಂತೆ ಸಿನಿಮಾದ ರಿಚ್ಚಿ ಪಾತ್ರವನ್ನೇ ಸ್ಪೂರ್ತಿಯಾಗಿಟ್ಟುಕೊಂಡು ಚಿತ್ರಕತೆ ಬರೆದಿದ್ದೇನೆ, ಹಾಗಾಗಿ ಟ್ವಿಟ್ಟರ್‌ ಪೋಸ್ಟ್‌ಗಳಲ್ಲಿ ರಿಚ್ಚಿ ಹ್ಯಾಷ್‌ಟ್ಯಾಗ್ ಬಳಸಿದ್ದೇನೆ, ನಾನು ನಿರ್ದೇಶಿಸುತ್ತಿರುವ ಸಿನಿಮಾದ ಹೆಸರು ರಿಚ್ಚಿ ಎಂದು ನಾನು ಈ ವರೆಗೆ ಹೇಳಿಲ್ಲ, ಹೇಳಿದ್ದರೆ ಸಾಬೀತು ಪಡಿಸಲಿ ಎಂದಿದ್ದಾರೆ ರಕ್ಷಿತ್ ಶೆಟ್ಟಿ.

ಪ್ರಚಾರಕ್ಕಾಗಿ ಸುಳ್ಳು ದೂರು ನೀಡುವುದು ಸರಿಯಲ್ಲ: ರಕ್ಷಿತ್

ಪ್ರಚಾರಕ್ಕಾಗಿ ಸುಳ್ಳು ದೂರು ನೀಡುವುದು ಸರಿಯಲ್ಲ: ರಕ್ಷಿತ್

ರಿಚ್ಚಿ ಎಂಬುದು ನನ್ನ ಸಿನಿಮಾದ ಹೆಸರು ಎಂದು ನಾನು ಹೇಳಿಯೇ ಇಲ್ಲ, ನನ್ನ ಸಿನಿಮಾದ ಹೆಸರು ನನ್ನ ಮನದಲ್ಲಿ ಭದ್ರವಾಗಿದೆ. ಸಮಯ ಬಂದಾಗ ಅದನ್ನು ಬಹಿರಂಗಗೊಳಿಸುತ್ತೇನೆ, ಹೀಗೆ ಸುಮ್ಮನೆ ಪ್ರಚಾರಕ್ಕೆ ಸುಳ್ಳು ದೂರು ನೀಡುವುದು ಸರಿಯಲ್ಲ ಎಂದಿದ್ದಾರೆ ರಕ್ಷಿತ್ ಶೆಟ್ಟಿ.

ಕೊಡಕೆನೈಲ್‌ ನಲ್ಲಿ ಚಿತ್ರೀಕರಣದಲ್ಲಿ ಭಾಗಿ

ಕೊಡಕೆನೈಲ್‌ ನಲ್ಲಿ ಚಿತ್ರೀಕರಣದಲ್ಲಿ ಭಾಗಿ

ನಟ ರಕ್ಷಿತ್ ಶೆಟ್ಟಿ ಕೊರೊನಾ ಲಾಕ್‌ಡೌನ್ ಸಮಯದಲ್ಲಿ ತಮ್ಮ ಸಿನಿಮಾದ ಚಿತ್ರಕತೆಯ ಮೇಲೆ ವರ್ಕ್ ಮಾಡಿದ್ದಾರೆ. ಪ್ರಸ್ತುತ ಕೊಡಕೆನೈಲ್‌ನಲ್ಲಿ ಚಾರ್ಲಿ 777 ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದ ನಂತರ 'ಸಪ್ತಸಾಗರದಾಚೆ ಎಲ್ಲೋ' ಸಿನಿಮಾದಲ್ಲಿ ನಟಿಸಲಿದ್ದಾರೆ ರಕ್ಷಿತ್ ಶೆಟ್ಟಿ.

More from Filmibeat

English summary
Rakshit Shetty talked about title dispute, He asks when i said my movie name is Richi. He said his movie name is not Richi.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X