For Quick Alerts
  ALLOW NOTIFICATIONS  
  For Daily Alerts

  7 ವರ್ಷಗಳ ಬಳಿಕ ರಕ್ಷಿತ್ ನಿರ್ದೇಶನಕ್ಕೆ; 'ಮೊದಲು ಕೆಲಸ ಮಾತಾಡಲಿ' ಎಂದ ಸಿಂಪಲ್ ಸ್ಟಾರ್

  |

  ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ 'ಉಳಿದವರು ಕಂಡಂತೆ' ಸಿನಿಮಾ ಮೂಲಕ ಕನ್ನಡ ಅಭಿಮಾನಿಗಳ ಹೃದಯ ಗೆದ್ದಿದ್ದರು. ವಿಭಿನ್ನ, ವಿನೂತ ಶೈಲಿಯ ಸಿನಿಮಾ ಮೂಲಕ ನಿರ್ದೇಶಕರಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದ ರಕ್ಷಿತ್ ಚೊಚ್ಚಲ ನಿರ್ದೇಶನದಲ್ಲೇ ಸಕ್ಸಸ್ ಕಂಡಿದ್ದರು. 'ಉಳಿದವರು ಕಂಡಂತೆ' ಚಿತ್ರದಲ್ಲಿ ನಟನಾಗಿ, ನಿರ್ದೇಶಕನಾಗಿ ಖ್ಯಾತಿಗಳಿಸಿದ್ದ ರಕ್ಷಿತ್ ಬಳಿಕ ಮತ್ತೆ ಸಿನಿಮಾ ನಿರ್ದೇಶನದ ಕಡೆ ಮುಖ ಮಾಡಿರಲಿಲ್ಲ.

  ರಕ್ಷಿತ್ ನಿರ್ದೇಶನದ ಮುಂದಿನ ಸಿನಿಮಾ ಯಾವುದು, ಯಾವಾಗ ಎನ್ನುವ ಕುತೂಹಲ ಅಭಿಮಾನಿಗಳಲ್ಲಿತ್ತು. ಸದಾ ಈ ಪ್ರಶ್ನೆ ರಕ್ಷಿತ್ ಗೆ ಎದುರಾಗುತ್ತಿತ್ತು. ಇದೀಗ ಮತ್ತೆ ನಿರ್ದೇಶನಕ್ಕೆ ಮರಳುವ ಮೂಲಕ ಎಲ್ಲಾ ಪ್ರಶ್ನೆಗಳಿಗೂ ಸಿಂಪಲ್ ಸ್ಟಾರ್ ತೆರೆ ಎಳೆದಿದ್ದಾರೆ. ಬರೋಬ್ಬರಿ 7 ವರ್ಷಗಳ ಬಳಿಕ ರಕ್ಷಿತ್ ನಿರ್ದೇಶನದ ಕಡೆ ಮುಖ ಮಾಡುತ್ತಿದ್ದಾರೆ. ಮುಂದೆ ಓದಿ...

  ನಾಯಕ ಜೊತೆಗೆ ನಿರ್ದೇಶನದ ಜವಾಬ್ದಾರಿ

  ನಾಯಕ ಜೊತೆಗೆ ನಿರ್ದೇಶನದ ಜವಾಬ್ದಾರಿ

  ರಕ್ಷಿತ್ ನಿರ್ದೇಶನದ ಚಿತ್ರಕ್ಕೆ ಹೊಂಬಾಳೆ ಫಿಲಂಮ್ಸ್ ಬಂಡವಾಳ ಹೂಡುತ್ತಿದೆ ಎನ್ನುವುದೇ ವಿಶೇಷ. 'ರಿಚರ್ಡ್ ಆಂಟನಿ' ಶೀರ್ಷಿಕೆಯಲ್ಲಿ ರಕ್ಷಿತ್ ನಿರ್ದೇಶನದ ಸಿನಿಮಾ ಮೂಡಿಬರುತ್ತಿದ್ದು, ನಾಯಕನಾಗಿಯೂ ರಕ್ಷಿತ್ ಕಾಣಿಸಿಕೊಳ್ಳುತ್ತಿದ್ದಾರೆ. ದೊಡ್ಡ ಬ್ಯಾನರ್ ಜೊತೆ ಪ್ರತಿಭಾವಂತ ನಟ, ನಿರ್ದೇಶಕ ಕೈಜೋಡಿಸಿರುವುದು ಚಿತ್ರದ ಮೇಲಿನ ನಿರೀಕ್ಷೆಯ ದುಪ್ಪಟ್ಟು ಮಾಡಿದೆ.

  ಗಮನ ಸೆಳೆಯುತ್ತಿದೆ ಟೀಸರ್

  ಗಮನ ಸೆಳೆಯುತ್ತಿದೆ ಟೀಸರ್

  ಇಂದು ಟೈಟೈಲ್ ಮತ್ತು ಹೀರೋ ಘೋಷಣೆ ಮಾಡುವ ಜೊತೆಗೆ ಚಿತ್ರದ ಪುಟ್ಟ ಟೀಸರ್ ಸಹ ಬಿಡುಗಡೆ ಮಾಡಲಾಗಿದೆ. ಟೀಸರ್ ನಲ್ಲಿ ಪ್ರಸಿದ್ಧ ನಟ ಅಚ್ಯುತ್ ಕುಮಾರ್ ಕಾಣಿಸಿಕೊಂಡಿದ್ದಾರೆ. ಸಮುದ್ರ ತಟದಲ್ಲಿರುವ ಸಮಾಧಿ, ಅದರ ಮೇಲೆ ಕೂಗುತ್ತಾ, ಕುಕ್ಕುತ್ತಾ ಕುಳಿತಿರುವ ಕಾಗೆ, ಮುಂದೆ ನಿಂತು ಮಾತನಾಡುತ್ತಿರುವ ಅಚ್ಯುತ್ ಕುಮಾರ್. ಇದಕ್ಕೆ ತಕ್ಕದಾದ ಬ್ಯಾಗ್ರೌಂಡ್ ಮ್ಯೂಸಿಕ್. ಈ ಪುಟ್ಟ ಟೀಸರ್ ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿದೆ.

  ರೆಟ್ರೋ ಶೈಲಿಯ ಸಿನಿಮಾನಾ?

  ರೆಟ್ರೋ ಶೈಲಿಯ ಸಿನಿಮಾನಾ?

  ಸಮಾಧಿ ಮೇಲೆ 1963 - 1991 ಎಂದು ಬರೆಯಲಾಗಿದೆ. ಈ ಸಿನಿಮಾ 70-80ರ ದಶಕದ ಕಥೆ ಹೇಳಲು ಹೊರಟಿದ್ಯ ಎನ್ನುವ ಕುತೂಹಲ ಮೂಡಿಸುತ್ತೆ. ಸಿಂಪಲ್ ಸ್ಟಾರ್ ರೆಟ್ರೋ ಶೈಲಿಯಲ್ಲಿ ಕಾಣಿಸಿಕೊಳ್ಳುತ್ತಾರಾ ಎನ್ನುವುದನ್ನು ಕಾದು ನೋಡಬೇಕು.

  ಮೊದಲು ನಮ್ಮ ಕೆಲಸ ಮಾತಾಡಲಿ

  ಮೊದಲು ನಮ್ಮ ಕೆಲಸ ಮಾತಾಡಲಿ

  ಇನ್ನು ಜುಲೈ 11, ತನ್ನ ವಿರುದ್ಧ ಕೇಳಿಬರುತ್ತಿದ್ದ ಅನುಮಾನಗಳಿಗೆ ತಕ್ಕ ಉತ್ತರ ನೀಡುತ್ತೇನೆ ಎಂದು ರಕ್ಷಿತ್ ಶೆಟ್ಟಿ ಸವಾಲು ಹಾಕಿದ ದಿನ. ಖಾಸಗಿ ವಾಹಿನಿಯೊಂದು ರಕ್ಷಿತ್ ಶೆಟ್ಟಿಯನ್ನು ತೇಜೋವಧೆ ಮಾಡಿದ ಆರೋಪಕ್ಕೆ ರಕ್ಷಿತ್ ಜುಲೈ 11ಕ್ಕೆ ಉತ್ತರ ನೀಡುವುದಾಗಿ ಹೇಳಿದ್ದರು. ಇದೀಗ ರಿಚರ್ಡ್ ಆಂಟನಿ ಮೂಲಕ ಬಂದಿರುವ ಸಿಂಪಲ್ ಸ್ಟಾರ್ "ಮೊದಲು ನಮ್ಮ ಕೆಲಸ ಮಾತಾಡಲಿ, ಉಳಿದವೆಲ್ಲ ತದನಂತರ. ರಿಚರ್ಡ್ ಆಂಟನಿ, ಮುಂದಿನ ಅಲೆ.. ನಿಮ್ಮ ಹೃದಯದ ದಡದಲ್ಲಿ ಜಾಗವಿರಿಸಿ..ಸದಾ ನಿಮ್ಮ ಪ್ರೀತಿಯ ಆಶೀರ್ವಾದವಿರಲಿ" ಎಂದು ಬರೆದುಕೊಳ್ಳುವ ಮೂಲಕ ಉತ್ತರ ನೀಡಿದ್ದಾರೆ.

  ರಿಷಬ್ ಶೆಟ್ಟಿ ಪ್ರತಿಕ್ರಿಯೆ

  ರಿಷಬ್ ಶೆಟ್ಟಿ ಪ್ರತಿಕ್ರಿಯೆ

  ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಟ, ನಿರ್ದೇಶಕ ಮತ್ತು ರಕ್ಷಿತ್ ಶೆಟ್ಟಿ ಗೆಳೆಯ ರಿಷಬ್ ಶೆಟ್ಟಿ, "ಉಳಿದವರು ಕಂಡಿದ್ದ ರಿಚ್ಚಿ, ಉಳಿದವರು ಕಾಣದ ರಿಚರ್ಡ್ ಆಂಟನಿಯಾಗಿ ಮತ್ತೆ ಬಂದಿದ್ದಾನೆ. ಗೆಳೆಯ ರಕ್ಷಿತ್ ಬಹು ಕಾಲದ ನಂತರ ನಿರ್ದೇಶನಕ್ಕೆ. ಚಿತ್ರ ತಂಡಕ್ಕೆ ಶುಭವಾಗಲಿ" ಎಂದು ಪ್ರತಿಕ್ರಿಯೆ ನೀಡಿದ್ದಾರೆ.

  ವಿಕ್ರಾಂತ್ ರೋಣ ಒಂದು ಹಾಡಿನ ಬಜೆಟ್ ಕೇಳಿದ್ರೆ ಶಾಕ್ ಆಗ್ತೀರಾ | filmibeat kannada
  ಅಜನೀಶ್ ಲೋಕನಾಥ್ ಸಂಗೀತ

  ಅಜನೀಶ್ ಲೋಕನಾಥ್ ಸಂಗೀತ

  'ರಿಚರ್ಡ್ ಆಂಟನಿ'ಗೆ ಅಜನೀಶ್ ಲೋಕನಾಥ್ ಸಂಗೀಯ ಸಂಯೋಜನೆ ಮಾಡುತ್ತಿದ್ದಾರೆ. ವಿಶೇಷ ಎಂದರೆ ಉಳಿದವರು ಕಂಡಂತೆ ಸಿನಿಮಾಗೂ ಅಜನೀಶ್ ಸಂಗೀತ ನೀಡಿದ್ದರು. ಚಿತ್ರದ ಹಾಡುಗಳು ಸೂಪರ್ ಹಿಟ್ ಆಗಿತ್ತು. ಇದೀಗ ರಕ್ಷಿತ್ ನಿರ್ದೇಶನದ 2ನೇ ಸಿನಿಮಾಗೂ ಸಂಗೀತ ನೀಡುತ್ತಿದ್ದು, ಚಿತ್ರದ ಸಂಗೀತದ ಮೇಲು ನಿರೀಕ್ಷೆ ದುಪ್ಪಟ್ಟಾಗುತ್ತಿದೆ.

  English summary
  Actor Rakshit shetty back to Direction after 7 years with Richard Anthony.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X