ರಕ್ಷಿತ್ ಶೆಟ್ಟಿ ಕನಸಿನ 'ರಿಚರ್ಡ್ ಆಂಟನಿ' ಕಥೆ ಏನಾಯ್ತು? ಇಲ್ಲಿದೆ ಬಿಗ್ ಅಪ್‌ಡೇಟ್

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಆಪ್ತರು ಹಾಗೂ ಅಭಿಮಾನಿಗಳು ಸೋಶಿಯಲ್ ಮೀಡಿಯಾ ಮೂಲಕ ನೆಚ್ಚಿನ ನಟನಿಗೆ ಶುಭಾಶಯ ಕೋರುತ್ತಿದ್ದಾರೆ. ಇದೆಲ್ಲದರ ನಡುವೆ 'ರಿಚರ್ಡ್ ಆಂಟನಿ' ಸಿನಿಮಾ ಕಥೆ ಎಲ್ಲಿಗೆ ಬಂತು? ಏನಾಯ್ತು? ಎಂದು ಕೆಲವರು ಕೇಳುತ್ತಿದ್ದಾರೆ.

ರಕ್ಷಿತ್ ಶೆಟ್ಟಿ ಕನಸಿನ ಸಿನಿಮಾ 'ರಿಚರ್ಡ್ ಆಂಟನಿ'. ಮೂರು ವರ್ಷಗಳ ಹಿಂದೆಯೇ ಸಣ್ಣ ಟೀಸರ್ ಬಿಟ್ಟು ಸಿನಿಮಾ ಘೋಷಿಸಲಾಗಿತ್ತು. ಹೊಂಬಾಳೆ ಫಿಲ್ಮ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗುತ್ತದೆ ಎನ್ನುವ ಸುದ್ದಿ ಸಹಜವಾಗಿಯೇ ನಿರೀಕ್ಷೆ ಹೆಚ್ಚಿಸಿತ್ತು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಹಳ ದೊಡ್ಡಮಟ್ಟದಲ್ಲಿ ಸಿನಿಮಾ ನಿರ್ಮಾಣವಾಗಬೇಕಿದೆ. ಆದರೆ ಟೀಸರ್ ರಿಲೀಸ್ ಬಳಿಕ ಸಿನಿಮಾ ಬಗ್ಗೆ ಯಾವುದೇ ಅಪ್‌ಡೇಟ್ ಸಿಗಲಿಲ್ಲ. ಇದು ಸಹಜವಾಗಿಯೇ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.

Rakshit Shetty Birthday Pramod Shetty Reveals Richard Antony Developments

ಸಿಂಪಲ್ ಸ್ಟಾರ್ ಬೇರೆ ಸಿನಿಮಾಗಳಲ್ಲಿ ನಟಿಸ್ತಿಲ್ಲ, 'ರಿಚರ್ಡ್ ಆಂಟನಿ' ಸಿನಿಮಾ ಘೋಷಿಸಿ 3 ವರ್ಷ ಆಯ್ತು, 'ಸಪ್ತಸಾಗರದಾಚೆ ಎಲ್ಲೊ' ಬಳಿಕ 'ರಿಚರ್ಡ್ ಆಂಟನಿ' ಸಿನಿಮಾ ಮಾಡ್ತೀನಿ ಅಂತ ಕೂಡ ಹೇಳಿದ್ದಾರೆ. ಆದರೂ ಯಾಕೆ ತಡವಾಗುತ್ತಿದೆ. ತಮ್ಮ ಪ್ರೈಂ ಟೈಂನಲ್ಲಿ ಸಿನಿಮಾ ಮಾಡದೇ ಯಾಕೆ ಕಾಲಹರಣ ಮಾಡುತ್ತಿದ್ದಾರೆ. 'ರಿಚರ್ಡ್ ಆಂಟನಿ' ಆಗಲಿಲ್ಲ ಅಂದ್ರೆ ಅದು ಬಿಟ್ಟು ಬೇರೆ ಸಿನಿಮಾ ಮಾಡಬಹುದಲ್ಲ ಎಂದು ಕಾಮೆಂಟ್ ಮಾಡುತ್ತಲೇ ಇರುತ್ತಾರೆ. 'ಉಳಿದವರು ಕಂಡಂತೆ' ಸಿನಿಮಾ 10 ವರ್ಷ ಪೂರೈಸಿದ ಸಮಯದಲ್ಲಿ ಸೀಕ್ವೆಲ್ ಬಗ್ಗೆ ಅಪ್‌ಡೇಟ್ ಸಿಗುತ್ತೆ ಎಂದು ಕೆಲವರು ಕಾದಿದ್ದರು. ಆದರೆ 11 ವರ್ಷ ಕಳೆದರೂ ಯಾವುದೇ ಮಾಹಿತಿ ಸಿಗಲಿಲ್ಲ.

ಇವತ್ತು ರಕ್ಷಿತ್ ಶೆಟ್ಟಿ ಹುಟ್ಟುಹಬ್ಬ. ಈ ಸಂಭ್ರಮದಲ್ಲಾದರೂ 'ರಿಚರ್ಡ್ ಆಂಟನಿ' ಅಪ್‌ಡೇಟ್ ಸಿಗುತ್ತೆ ಎಂದುಕೊಂಡಿದ್ದವರಿಗೆ ನಿರಾಸೆಯಾಗಿದೆ. ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ರಕ್ಷಿತ್ ಶೆಟ್ಟಿಗೆ ಹುಟ್ಟುಹಬ್ಬದ ಶುಭಾಶಯ ಕೋರಿ ಸಣ್ಣ ಪೋಸ್ಟ್ ಮಾಡಿದೆ. ಅದು ಬಿಟ್ಟು ಬೇರೆ ಯಾವುದೇ ವಿಶೇಷ ಇಲ್ಲ. ಇನ್ನು ರಕ್ಷಿತ್ ಶೆಟ್ಟಿ ಕರೆ ಮಾಡಿದರೆ ಫೋನ್ ಸ್ವಿಚ್ ಆಫ್ ಆಗಿದೆ. ರಕ್ಷಿತ್ ಶೆಟ್ಟಿ ಆಪ್ತ, ನಟ ಪ್ರಮೋದ್ ಶೆಟ್ಟಿ ಫಿಲ್ಮಿಬೀಟ್ ಕನ್ನಡಕ್ಕೆ ಪ್ರತಿಕ್ರಿಯಿಸಿದ್ದಾರೆ.

"ರಕ್ಷಿತ್ ಶೆಟ್ಟಿಗೆ ಇವತ್ತು ಹುಟ್ಟುಹಬ್ಬ. ನಾನು ಕೂಡ ಶುಭಾಶಯ ಕೋರಲು ಫೋನ್ ಮಾಡಿದ್ದೆ. ಸ್ವಿಚ್ ಆಫ್ ಬಂತು. ವಿಶ್ ಮಾಡಿ ಒಂದು ಮೆಸೇಜ್ ಹಾಕಿ ಸುಮ್ಮನಾದೆ. 'ರಿಚರ್ಡ್ ಆಂಟನಿ' ಬಗ್ಗೆ ನನಗೂ ಹೆಚ್ಚಿನ ಮಾಹಿತಿ ಇಲ್ಲ. ನಾನು ಕೂಡ ಆ ಚಿತ್ರದಲ್ಲಿ ನಟಿಸಬೇಕಿದೆ. ಸದ್ಯಕ್ಕೆ 'ಕಾಂತಾರ' ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದೇನೆ" ಎಂದು ಹೇಳಿದ್ದಾರೆ.

'ಉಳಿದವರು ಕಂಡಂತೆ' ಚಿತ್ರದಲ್ಲಿ ರಿಚ್ಚಿಯ ಜೊತೆ ಜೊತೆಗೆ ಸಾಗುವ ದಿನೇಶ ಎಂಬ ಪಾತ್ರದಲ್ಲಿ ಪ್ರಮೋದ್ ಶೆಟ್ಟಿ ನಟಿಸಿದ್ದಾರೆ. ಸೀಕ್ವೆಲ್‌ನಲ್ಲಿ ನಟಿಸುವುದಕ್ಕೆ ತೂಕ ಇಳಿಸಿಕೊಂಡಿದ್ದಾರೆ. "ರಿಚರ್ಡ್ ಆಂಟನಿ' ಬಗ್ಗೆ ನನಗೂ ಹೆಚ್ಚಿನ ಮಾಹಿತಿ ಎರಡು ತಿಂಗಳ ಹಿಂದೆ ಮಾತನಾಡಿದಾಗ ಸ್ಕ್ರಿಪ್ಟ್ ಫೈನಲ್ ಆಗ್ತಾ ಬಂದಿದೆ. ಇನ್ನು ಮೂರು ತಿಂಗಳಲ್ಲಿ ಸ್ಕ್ರಿಪ್ಟ್ ರೀಡಿಂಗ್ ಕೊಡ್ತೀನಿ ಎಂದಿದ್ದ. ಆಮೇಲೆ ಪೋಸ್ಟ್ ಪ್ರೊಡಕ್ಷನ್ ಶುರುವಾಗುತ್ತದೆ. ಮಳೆಗಾಲ ಮುಗಿಯುವುದಕ್ಕೂ ಮುನ್ನ ಸಿನಿಮಾ ಶುರುವಾಗಬಹುದು" ಎಂದು ಮಾಹಿತಿ ನೀಡಿದ್ದಾರೆ.

ಶೀಘ್ರದಲ್ಲೇ 'ರಿಚರ್ಡ್ ಆಂಟನಿ' ಸಿನಿಮಾ ಶುರುವಾಗುತ್ತದೆ. ಮುಂದಿನ ವರ್ಷವೇ ಸಿನಿಮಾ ಬಿಡುಗಡೆ ಆಗಬಹುದು ಎಂದು ನಟ ಪ್ರಮೋದ್ ಶೆಟ್ಟಿ ಆಶಾಭಾವನೆ ವ್ಯಕ್ತಪಡಿಸಿದ್ದಾರೆ.

11 ವರ್ಷಗಳ ಹಿಂದೆ ಬಂದಿದ್ದ 'ಉಳಿದವರು ಕಂಡಂತೆ' ಸಿನಿಮಾ ಮಿಶ್ರಪ್ರತಿಕ್ರಿಯೆ ಪಡೆದುಕೊಂಡಿತ್ತು. ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿದರೂ ಬಳಿಕ ಕಲ್ಟ್ ಸಿನಿಮಾ ಸ್ಟೇಟಸ್ ಪಡೆದುಕೊಂಡಿತ್ತು. ಅದರಲ್ಲೂ ರಿಚ್ಚಿ ಪಾತ್ರಕ್ಕೆ ದೊಡ್ಡ ಫ್ಯಾನ್ ಫಾಲೋಯಿಂಗ್ ಇದೆ. ಅದೇ ಕಾರಣಕ್ಕೆ ಚಿತ್ರದ ಸೀಕ್ವೆಲ್ ಬಗ್ಗೆ ಕುತೂಹಲ ಹೆಚ್ಚಿದೆ. ಹಿಂದಿಗೆ ಡಬ್ ಆಗಿದ್ದ 'ಉಳಿದವರು ಕಂಡಂತೆ' ಸಿನಿಮಾ ತಮಿಳಿಗೆ ರೀಮೆಕ್ ಸಹ ಆಗಿತ್ತು.

'ಉಳಿದವರು ಕಂಡಂತೆ' ಚಿತ್ರಕ್ಕೆ 'ರಿಚರ್ಡ್ ಆಂಟನಿ' ಸೀಕ್ವೆಲ್ ಹಾಗೂ ಪ್ರೀಕ್ವೆಲ್ ಎರಡೂ ಆಗಿರಲಿದೆ. ಅಂದರೆ ರಿಚ್ಚಿನ ಹಿನ್ನೆಲೆ ಕಟ್ಟಿಕೊಡುವುದರ ಜೊತೆಗೆ ಮುಂದಿನ ಕಥೆಯನ್ನು ಹೇಳಲು ರಕ್ಷಿತ್ ಶೆಟ್ಟಿ ಮುಂದಾಗಿದ್ದಾರೆ. ಕೆಲ ವರ್ಷಗಳ ಕಾಲ ಬೇರೆ ನಿರ್ದೇಶಕರ ಸಿನಿಮಾಗಳಲ್ಲಿ ನಟಿಸಲ್ಲ ಸದ್ಯಕ್ಕೆ ತಮ್ಮ ಕಥೆಗಳಿಗೆ ದೃಶ್ಯರೂಪ ಕೊಡಬೇಕಿದೆ ಎಂದು ರಕ್ಷಿತ್ ಶೆಟ್ಟಿ ಕೆಲ ದಿನಗಳ ಹಿಂದೆ ಹೇಳಿದ್ದರು.

'ರಿಚರ್ಡ್ ಆಂಟನಿ' ಬಳಿಕ 'ಪುಣ್ಯಕೋಟಿ' ಚಿತ್ರವನ್ನು 2 ಭಾಗಗಳಾಗಿ ಹೇಳುವ ಲೆಕ್ಕಾಚಾರ ನಡೀತಿದೆ. ಬಳಿಕ 'ಮಿಡ್‌ ವೇ ಟು ಮೋಕ್ಷ' ಎಂಬ ಮತ್ತೊಂದು ಸಿನಿಮಾ ಮಾಡಬೇಕಿದೆ. ಆದರೆ ಇನ್ನು 'ರಿಚರ್ಡ್ ಆಂಟನಿ' ಸಿನಿಮಾ ಶುರುವಾಗಿಲ್ಲ, ಮುಂದಿನ ಸಿನಿಮಾಗಳ ಕಥೆ ಆಮೇಲೆ ಎಂದು ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಉಡುಪಿಯಲ್ಲೇ ಈ ಚಿತ್ರದ ಬಹುತೇಕ ಕೆಲಸಗಳು ನಡೆಯಲಿದೆ. ಅಲ್ಲೇ ಸಂಪೂರ್ಣ ಚಿತ್ರೀಕರಣಕ್ಕೆ ಪ್ಲ್ಯಾನ್ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

More from Filmibeat

English summary
While Rakshit Remains Silent, Pramod Shetty Confirms 'Richard Antony' is Still On Track
Read more about: rakshit shetty hombale films
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X