For Quick Alerts
  ALLOW NOTIFICATIONS  
  For Daily Alerts

  ಮಲಯಾಳಂನ 8 ಸ್ಟಾರ್ ಗಳಿಂದ ರಕ್ಷಿತ್ ಶೆಟ್ಟಿ '777 ಚಾರ್ಲಿ' ಟೀಸರ್ ಬಿಡುಗಡೆ

  |

  ಸ್ಯಾಂಡಲ್ ವುಡ್ ನ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಟನೆಯ ಬಹುನಿರೀಕ್ಷೆಯ 777 ಚಾರ್ಲಿ ಸಿನಿಮಾದ ಟೀಸರ್ ಬಿಡುಗಡೆಗೆ ಇನ್ನೊಂದು ದಿನ ಬಾಕಿ ಇದೆ. ರಕ್ಷಿತ್ ಶೆಟ್ಟಿ ಹುಟ್ಟುಹಬ್ಬದ ಪ್ರಯುಕ್ತ ಜೂನ್ 6ರಂದು ಚಿತ್ರದ ಟೀಸರ್ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಈಗಾಗಲೇ ಪೋಸ್ಟರ್ ಮೂಲಕ ಅಭಿಮಾನಿಗಳ ನಿರೀಕ್ಷೆ ದುಪ್ಪಟ್ಟು ಮಾಡಿರುವ ಚಾರ್ಲಿ ತಂಡ ಈಗ ಟೀಸರ್ ಮೂಲಕ ಎಂಟ್ರಿ ಕೊಡ್ತಿದೆ.

  777 ಚಾರ್ಲಿ ಐದು ಭಾಷೆಯಲ್ಲಿ ತೆರೆಗೆ ಬರುತ್ತಿದೆ. ತೆಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿಯಲ್ಲಿ ಬಿಡುಗಡೆಯಾಗುತ್ತಿದೆ. ವಿಶೇಷ ಎಂದರೆ ರಕ್ಷಿತ್ ಶೆಟ್ಟಿ ಸಿನಿಮಾ ಮಲಯಾಳಂನಲ್ಲೂ ಭಾರಿ ಕುತೂಹಲ ಮೂಡಿಸಿದ್ದು, ದೊಡ್ಡ ಮಟ್ಟಕ್ಕೆ ಬಿಡುಗೆಯಾಗುತ್ತಿದೆ.

  ರಕ್ಷಿತ್ ನಟನೆಯ '777 ಚಾರ್ಲಿ' ಹಕ್ಕು ಖರೀದಿಸಿದ ತಮಿಳಿನ ಖ್ಯಾತ ಸಂಸ್ಥೆ ರಕ್ಷಿತ್ ನಟನೆಯ '777 ಚಾರ್ಲಿ' ಹಕ್ಕು ಖರೀದಿಸಿದ ತಮಿಳಿನ ಖ್ಯಾತ ಸಂಸ್ಥೆ

  ಮಲಯಾಳಂ ಖ್ಯಾತ ನಟ ಪೃಥ್ವಿರಾಜ್ ಅವರ ಪ್ರೊಡಕ್ಷನ್ ಹೌಸ್ 777 ಚಾರ್ಲಿ ಚಿತ್ರದ ಮಲಯಾಳಂ ವಿತರಣ ಹಕ್ಕನ್ನು ಖರೀದಿ ಮಾಡಿದೆ. ಇದೀಗ ಟೀಸರ್ ಅನ್ನು ಬರೋಬ್ಬರಿ 8 ಸ್ಟಾರ್ಸ್ ಬಿಡುಗಡೆ ಮಾಡುತ್ತಿದ್ದಾರೆ. ನಟ ಪೃಥ್ವಿರಾಜ್ ಸುಕುಮಾರನ್, ಕುಂಚಾಕೊ ಬೊಬನ್, ನಿವೀನ್ ಪೌಲಿ, ಟೊವಿನೋ ಥಾಮನ್, ಉನ್ನಿ ಮುಕುಂದನ್, ಅನ್ನಾ ಬೆನ್, ನಿಖಿಲಾ ವಿಮ್ಲಾ ಮತ್ತು ಆಂಟ್ಯೋನಿ ವರ್ಗೀಸ್. ಈ 8 ಸ್ಟಾರ್ 777 ಚಾರ್ಲಿ ಟೀಸರ್ ಬಿಡುಗಡೆ ಮಾಡಿ ತಮ್ಮ ಅನಿಸಿಕೆ ಹಂಚಿಕೊಳ್ಳಲಿದ್ದಾರೆ.

  ಈ ಬಗ್ಗೆ ನಟ ರಕ್ಷಿತ್ ಶೆಟ್ಟಿ ಮಾಹಿತಿ ಹಂಚಿಕೊಂಡಿದ್ದು, ಮಲಯಾಳಂನ 8 ಮಂದಿ ಸ್ಟಾರ್ಸ್ 777 ಚಾರ್ಲಿ ಸಿನಿಮಾದ ಟೀಸರ್ ಬಿಡುಗಡೆ ಮಾಡುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಅಂದಹಾಗೆ ಬಹುನಿರೀಕ್ಷೆಯ ಟೀಸರ್ ಜೂನ್ 6ರಂದು ಬೆಳಗ್ಗೆ 11.04ಕ್ಕೆ ಬಿಡುಗಡೆಯಾಗುತ್ತಿದೆ.

  Prashanth Neel, Yash ಈ ರೀತಿ ಮಾಡ್ತಾರೆ ಅಂತಾ ನಾನು ನಿರೀಕ್ಷೆ ಮಾಡಿರಲಿಲ್ಲ | Filmibeat Kannada

  ಅಂದಹಾಗೆ '777 ಚಾರ್ಲಿ' ನಾಯಿ ಮತ್ತು ಮನುಷ್ಯನ ನಡುವಿನ ಭಾವನಾತ್ಮಕ ಸಂಬಂಧದ ಬಗ್ಗೆ ಇರುವ ಸಿನಿಮಾವಾಗಿದೆ. ಸ್ಯಾಂಡಲ್ ವುಡ್ ನ ಬಹುನಿರೀಕ್ಷೆಯ ಚಿತ್ರಗಳಲ್ಲಿ ಒಂದಾಗಿರುವ '777 ಚಾರ್ಲಿ' ಅಂದುಕೊಂಡಂತೆ ಆಗಿದ್ದರೆ ಈಗಾಗಲೇ ಬಿಡುಗಡೆಗೆ ಸಿದ್ಧವಾಗಬೇಕಿತ್ತು. ಆದರೆ ಕೊರೊನಾ ಕಾರಣ ತಡವಾಗುತ್ತಿದೆ. ಸದ್ಯ ಟೀಸರ್ ಮೂಲಕ ಬರ್ತಿರುವ ಚಾರ್ಲಿ ಹೇಗಿದೆ ಎನ್ನುವ ಕುತೂಹಲಕ್ಕೆ ನಾಳೆ ತೆರೆಬೀಳಲಿದೆ.

  English summary
  Rakshit Shetty Birthday; South Indian stars to release 777 Charlie movie teaser on June 6.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X