ರಕ್ಷಿತ್ ಶೆಟ್ಟಿ ಹುಟ್ಟುಹಬ್ಬ: ಈ ಬಾರಿ ಬಹಳ ವಿಶೇಷ

ಕನ್ನಡ ಸಿನಿಮಾ ಪ್ರೇಕ್ಷಕರು ಭರವಸೆ ಇಟ್ಟಿರುವ ನಾಯಕ ನಟ, ನಿರ್ದೇಶಕ ರಕ್ಷಿತ್ ಶೆಟ್ಟಿ. ಸಿನಿಮಾ ಪ್ರೇಮಿಗಳು ಮೇಲಿಟ್ಟ ಭರವಸೆಯನ್ನು ನಿಭಾಯಿಸಿಕೊಂಡು ಬರುತ್ತಿದ್ದಾರೆ ರಕ್ಷಿತ್ ಶೆಟ್ಟಿ.

ಇಂದು ನಟ ರಕ್ಷಿತ್‌ ಶೆಟ್ಟಿಯ ಹುಟ್ಟುಹಬ್ಬ. ಕಳೆದ ಕೆಲ ಹುಟ್ಟುಹಬ್ಬಗಳಿಗಿಂತಲೂ ಈ ಬಾರಿಯ ಹುಟ್ಟುಹಬ್ಬ ತುಸು ವಿಶೇಷ. ಏಕೆಂದರೆ ಅವರ ಮೊಟ್ಟ ಮೊದಲ ಪ್ಯಾನ್ ಇಂಡಿಯಾ ಸಿನಿಮಾ '777 ಚಾರ್ಲಿ' ಸಿನಿಮಾ ಬಿಡುಗಡೆ ಆಗುತ್ತಿದೆ. ಈಗಾಗಲೇ ದೇಶದ ಹಲವು ನಗರಗಳಲ್ಲಿ ಸಿನಿಮಾದ ಪ್ರೀಮಿಯರ್ ಶೋಗಳು ಪ್ರದರ್ಶನ ಕಂಡಿತ್ತು, ಸಿನಿಮಾ ಬಗ್ಗೆ ಒಳ್ಳೆಯ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

ಭಾರತ ಮೊದಲ ಬಾರಿಗೆ ಕ್ರಿಕೆಟ್‌ನಲ್ಲಿ ವಿಶ್ವಕಪ್ ಗೆದ್ದ ವರ್ಷ ಜೂನ್ 06 ರಂದು ಹುಟ್ಟಿದ ರಕ್ಷಿತ್ ಶೆಟ್ಟಿ ಈ ಬಾರಿ 39ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಕಿರುಚಿತ್ರಗಳ ಮೂಲಕ ನಟನೆ, ನಿರ್ದೇಶನ ಆರಂಭಿಸಿದ ರಕ್ಷಿತ್ ಶೆಟ್ಟಿ ಇಂದು ಕನ್ನಡ ಚಿತ್ರರಂಗದ ಪ್ರತಿಭಾವಂತ ನಿರ್ದೇಶಕ, ನಟರಾಗಿ ಮುಂದೆ ಸಾಗುತ್ತಿದ್ದಾರೆ.

Rakshit Shetty Birthday Today, His Movie 777 Charlie Releasing On June 10

ರಕ್ಷಿತ್ ಶೆಟ್ಟಿ ನಟಿಸಿರುವ '777 ಚಾರ್ಲಿ' ಸಿನಿಮಾ ಇದೇ ಶುಕ್ರವಾರ (ಜೂನ್ 10)ಕ್ಕೆ ಬಿಡುಗಡೆ ಆಗಲಿದ್ದು, ಆ ಕಾರಣಕ್ಕೆ ಈ ಹುಟ್ಟುಹಬ್ಬ ರಕ್ಷಿತ್‌ಗೆ ವಿಶೇಷವಾಗಿದೆ.

ರಕ್ಷಿತ್ ಶೆಟ್ಟಿ ಹುಟ್ಟುಹಬ್ಬಕ್ಕೆ ಅವರ ಆಪ್ತೇಷ್ಟರು ಈಗಾಗಲೇ ಹುಟ್ಟುಹಬ್ಬ ಶುಭಾಶಯಗಳನ್ನು ಕೋರಿದ್ದಾರೆ. ''ನಮ್ಮೊಳಗೆ ಹುಟ್ಟು ವ ಕನಸುಗಳನ್ನು ನನಸಾಗಿಸುವ ಪ್ರಯತ್ನದಲ್ಲಿ ನಮ್ಮ ಹುಟ್ಟು ಸಾರ್ಥಕವಾಗುತ್ತದೆ. ಪ್ರತಿ ಕ್ಷಣವು 'ಸಿನಿಮಾ'ದ ಕನಸನ್ನು ಕಂಡು, ಕಾಪಾಡಿ, ಆನಂದಿಸಿ, ಆಚರಿಸುವವನು ನೀನು! ನಿನ್ನೆಲ್ಲಾ ಕನಸುಗಳು ಕೈಗೂಡಲಿ ಮಗಾ. ಚಾರ್ಲಿ ಸಿನಿಮಾದ ಯಶಸ್ಸು, ಪ್ರಶಂಸೆಗಳು ಈ ಹುಟ್ಟಿದಬ್ಬಕ್ಕೆ ಮರೆಯಲಾರದ ಉಡುಗೊರೆಯಾಗಲಿ! ಹ್ಯಾಪಿ ಬರ್ತಡೇ'' ಎಂದು ರಕ್ಷಿತ್ ಶೆಟ್ಟಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ ರಿಷಬ್ ಶೆಟ್ಟಿ.

ತೆಲುಗಿನ ಸ್ಟಾರ್ ನಟ ರಾಣಾ ದಗ್ಗುಬಾಟಿ ಸಹ ರಕ್ಷಿತ್ ಶೆಟ್ಟಿ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ್ದು, ''777 ಚಾರ್ಲಿ' ಸಿನಿಮಾವನ್ನು ತೆಕ್ಕೆಗೆ ತೆಗೆದುಕೊಂಡು, ಅದನ್ನು ಪ್ರೀತಿಸಿ, ಕೈಹಿಡಿದು ಚಿತ್ರಮಂದಿರಗಳ ವರೆಗೆ ಕರೆತಂದಿದ್ದಾರೆ. ನಮ್ಮ 'ಧರ್ಮ'ನಿಗೆ ಹುಟ್ಟುಹಬ್ಬದ ಶುಭಾಶಯಗಳು'' ಎಂದಿದ್ದಾರೆ. ತೆಲುಗಿನಲ್ಲಿ '777 ಚಾರ್ಲಿ' ಸಿನಿಮಾವನ್ನು ರಾಣಾ ದಗ್ಗುಬಾಟಿ ಪ್ರೆಸೆಂಟ್ ಮಾಡುತ್ತಿದ್ದಾರೆ.

ರಕ್ಷಿತ್ ಶೆಟ್ಟಿಯ ಹಲವಾರು ಅಭಿಮಾನಿಗಳು, ಸಿನಿಮಾ ರಂಗದ ಗೆಳೆಯರು ಹುಟ್ಟುಹಬ್ಬಕ್ಕೆ ಶುಭ ಹಾರೈಸಿದ್ದು, ರಕ್ಷಿತ್ ಶೆಟ್ಟಿ ನಟನೆಯ 'ಸಪ್ತಸಾಗರದಾಚೆ ಯೆಲ್ಲೊ' ಸಿನಿಮಾದ ಟೀಸರ್ ಇದೇ ದಿನ ಸಂಜೆ ಬಿಡುಗಡೆ ಸಹ ಆಗಲಿದೆ.

More from Filmibeat

English summary
Rakshit Shetty Birthday today. His movie 777 Charlie releasing on June 10. His another new movie Sapthasagaradhache Yello's teaser releasing today evening.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X