For Quick Alerts
  ALLOW NOTIFICATIONS  
  For Daily Alerts

  ನಟಿ ಶಾನ್ವಿ ಶ್ರೀವಾಸ್ತವ ಹುಟ್ಟುಹಬ್ಬಕ್ಕೆ ಶುಭ ಕೋರಿದ ನಟ ರಕ್ಷಿತ್ ಶೆಟ್ಟಿ

  |

  ಸ್ಯಾಂಡಲ್ ವುಡ್ ನಟಿ ಶಾನ್ವಿ ಶ್ರೀವಾಸ್ತವಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಚಿತ್ರರಂಗದ ಗಣ್ಯರು, ಸ್ನೇಹಿತರು ಮತ್ತು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಶುಭಾಶಯ ತಿಳಿಸುತ್ತಿದ್ದಾರೆ.

  ತೆಲುಗು ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಉತ್ತರ ಪ್ರದೇಶ ಮೂಲದ ನಟಿ ಶಾನ್ವಿ ಈಗ ಕನ್ನಡದ ಹುಡುಗಿಯಾಗಿ ಖ್ಯಾತಿಗಳಿಸಿದ್ದಾರೆ. ಚಂದ್ರಮುಖಿ ಸಿನಿಮಾ ಮೂಲಕ ಕನ್ನಡ ಸಿನಿಪ್ರಿಯರಿಗೆ ಪರಿಚಿತರಾದ ಶಾನ್ವಿ, ಈ ಸಿನಿಮಾ ಬಳಿಕ ಕನ್ನಡದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಶಾನ್ವಿಗೆ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಶುಭಾಶಯ ತಿಳಿಸಿದ್ದಾರೆ. ಮುಂದೆ ಓದಿ...

  ಜನವರಿಯಿಂದ 'ಸಪ್ತ ಸಾಗರದಾಚೆ ಎಲ್ಲೋ' ಹೊರಟ ನಟ ರಕ್ಷಿತ್ ಶೆಟ್ಟಿ

  ಶಾನ್ವಿಗೆ ವಿಶ್ ಮಾಡಿದ ರಕ್ಷಿತ್

  ಶಾನ್ವಿಗೆ ವಿಶ್ ಮಾಡಿದ ರಕ್ಷಿತ್

  ಸಾಮಾಜಿಕ ಜಾಲತಾಣದ ಮೂಲಕ ವಿಶ್ ಮಾಡಿರುವ ರಕ್ಷಿತ್, 'ನಲ್ಮೆಯ ಶಾನ್ವಿ ಶ್ರೀವಾಸ್ತವ್ ಗೆ ಹುಟ್ಟುಹಬ್ಬದ ಶುಭಾಶಯಗಳು. ನಿಮ್ಮಲ್ಲಿ ಕನಸುಗಳು ಸದಾ ತುಂಬಿರಲಿ. ನೀವು ಅದ್ಭುತವಾದ ವ್ಯಕ್ತಿ. ಜನ್ಮದಿನದ ಹಾರ್ದಿಕ ಶುಭಾಶಯಗಳು ಶಾನ್ವಿ' ಎಂದು ಬರೆದುಕೊಂಡಿದ್ದಾರೆ.

  ಜೋಡಿ ಮುದ್ದಾಗಿದೆ ಎನ್ನುತ್ತಿದ್ದಾರೆ ಅಭಿಮಾನಿಗಳು

  ಜೋಡಿ ಮುದ್ದಾಗಿದೆ ಎನ್ನುತ್ತಿದ್ದಾರೆ ಅಭಿಮಾನಿಗಳು

  ರಕ್ಷಿತ್ ಶೆಟ್ಟಿ ವಿಶ್ ಗೆ ನಟಿ ಶಾನ್ವಿ ಧನ್ಯವಾದ ತಿಳಿಸಿದ್ದಾರೆ. ರಕ್ಷಿತ್ ಶೆಟ್ಟಿ ವಿಶ್ ಮಾಡುತ್ತಿದ್ದಂತೆ ಅಭಿಮಾನಿಗಳು ಇಬ್ಬರ ಜೋಡಿ ಮುದ್ದಾಗಿದೆ, ಮದುವೆ ಆಗಿ ಎಂದು ಹೇಳುತ್ತಿದ್ದಾರೆ. ರಕ್ಷಿತ್ ಶೆಟ್ಟಿ ಮತ್ತು ಶಾನ್ವಿ ಇಬ್ಬರು ಅವನೇ ಶ್ರೀಮನ್ನಾರಾಯಣ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದಾರೆ.

  ವೈರಲ್ ಆಗಿತ್ತು ಇಬ್ಬರ ನಡುವಿನ ಪ್ರೀತಿ ವದಂತಿ

  ವೈರಲ್ ಆಗಿತ್ತು ಇಬ್ಬರ ನಡುವಿನ ಪ್ರೀತಿ ವದಂತಿ

  ಅವನೇ ಶ್ರೀಮನ್ನಾರಾಯಣ ಸಿನಿಮಾ ಬಳಿಕ ಇಬ್ಬರ ನಡುವೆ ಸ್ನೇಹಕ್ಕಿಂತ ಮಿಗಿಲಾದ ಸಂಬಂಧವಿದೆ ಎನ್ನುವ ಮಾತುಗಳು ಕೇಳಿಬರುತ್ತಿತ್ತು. ಅಲ್ಲದೆ ಅಭಿಮಾನಿಗಳು ಸಹ ಇಬ್ಬರ ಜೋಡಿ ಅದ್ಭುತವಾಗಿದೆ, ಮದುವೆ ಆಗಿ ಎಂದು ಕಾಮೆಂಟ್ಸ್ ಗಳ ಸುರಿಮಳೆ ಹರಿದುಬಂದಿತ್ತು.

  2014ರಲ್ಲಿ ಕನ್ನಡ ಸಿನಿಮಾರಂಗಕ್ಕೆ ಪ್ರವೇಶ

  2014ರಲ್ಲಿ ಕನ್ನಡ ಸಿನಿಮಾರಂಗಕ್ಕೆ ಪ್ರವೇಶ

  ನಟಿ ಶಾನ್ವಿ 'ಲವ್ಲಿ' ಸಿನಿಮಾ ಮೂಲಕ ತೆಲುಗು ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಬಳಿಕ 2014ರಲ್ಲಿ ಕನ್ನಡ ಸಿನಿಮಾರಂಗ ಪ್ರವೇಶ ಮಾಡಿದ ಶ್ರೀಮನ್ನಾರಾಯಣನ ರಾಣಿ, ಚಂದ್ರಮುಖಿ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಬಳಿಕ ಯಶ್ ಜೊತೆ ಮಾಸ್ಟರ್ ಪೀಸ್ ಸಿನಿಮಾದಲ್ಲಿ ನಾಯಕಿಯಾಗಿ ಮಿಂಚುವ ಮೂಲಕ ದೊಡ್ಡ ಮಟ್ಟಕ್ಕೆ ಖ್ಯಾತಿಗಳಿಸಿದ್ದಾರೆ.

  ಜೀವನದಲ್ಲಿ ಯಾವತ್ತು ಒಂದೇ ಗುರಿ ಇರ್ಬೇಕು | Shivraj K R Pete | Filmibeat Kannada
  ಶಾನ್ವಿ ಸಿನಿಮಾಗಳು

  ಶಾನ್ವಿ ಸಿನಿಮಾಗಳು

  ತಾರಕ್, ಮಫ್ತಿ, ಗೀತಾ ಸಿನಿಮಾಗಳು ಶಾನ್ವಿ ಸಿನಿಮಾ ಬದುಕನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದಿದೆ. ಸದ್ಯ ಶಾನ್ವಿ ಕಸ್ತೂರಿ ಮಹಲ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಚಿತ್ರೀಕರಣ ಮುಗಿಸಿರುವ ಶಾನ್ವಿ ಸಿನಿಮಾ ರಿಲೀಸ್ ಗೆ ಎದುರು ನೋಡುತ್ತಿದ್ದಾರೆ. ಈ ಸಿನಿಮಾ ಜೊತೆಗೆ ತ್ರಿಶೂಲಮ್ ಸಿನಿಮಾ ಸಹ ಶಾನ್ವಿ ಬಳಿ ಇದೆ.

  English summary
  Kannada Actor Rakshit Shetty Birthday wishes to Actress Shanvi Srivastava.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X