For Quick Alerts
  ALLOW NOTIFICATIONS  
  For Daily Alerts

  ರಕ್ಷಿತ್ ಶೆಟ್ಟಿ ಎಂಬ ಬ್ಯುಸಿನೆಸ್ ಮ್ಯಾನ್: 5 ಸಿನಿಮಾ ಜೊತೆ ಸಿನಿಮಾ ನಿರ್ಮಾಣ, ವಿತರಣೆ ಮುಂದೇನು?

  |

  '777 ಚಾರ್ಲಿ' ಯಶಸ್ಸಿನ ಬಳಿಕ ರಕ್ಷಿತ್ ಶೆಟ್ಟಿ ಫುಲ್ ಬ್ಯುಸಿಯಾಗಿದ್ದಾರೆ. ಅಭಿನಯದ, ನಿರ್ದೇಶನದ ಜೊತೆ ಜೊತೆಗೆ ನಿರ್ಮಾಣಕ್ಕೂ ಇಳಿದಿದ್ದಾರೆ. '777 ಚಾರ್ಲಿ' ಗೆದ್ದ ಖುಷಿಯಲ್ಲಿರುವ ರಕ್ಷಿತ್ ಹೊಸ ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಸದ್ಯಕ್ಕೆ ಟೈಟಲ್ ಇಟ್ಟಿಲ್ಲ. ಸ್ಟಾರ್ ಕಾಸ್ಟ್ ಫೈನಲ್ ಮಾಡುತ್ತಿದ್ದಾರೆ.

  ತಮ್ಮ ಪರಂವಾ ಸ್ಟುಡಿಯೋ ಮೂಲಕ ರಕ್ಷಿತ್ ಶೆಟ್ಟಿ ಹೊಸಬರಿಗೆ ಅವಕಾಶ ನೀಡುತ್ತಿದ್ದಾರೆ. ಸಿನಿಮಾ ಗೆದ್ದಿರುವ ಜೋಷ್‌ನಲ್ಲಿಯೇ ಮತ್ತೊಂದು ಸಿನಿಮಾ ಸೆಟ್ಟೇರಿಸಲು ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ಕೇವಲ ನಿರ್ಮಾಪಕ ಅಷ್ಟೇ.

  ಮತ್ತೊಬ್ಬ ಹೊಸ ನಿರ್ದೇಶಕನ ಸಿನಿಮಾಕ್ಕೆ ರಕ್ಷಿತ್ ಶೆಟ್ಟಿ ಬಂಡವಾಳಮತ್ತೊಬ್ಬ ಹೊಸ ನಿರ್ದೇಶಕನ ಸಿನಿಮಾಕ್ಕೆ ರಕ್ಷಿತ್ ಶೆಟ್ಟಿ ಬಂಡವಾಳ

  '777 ಚಾರ್ಲಿಗೂ ಮುನ್ನವೇ ರಕ್ಷಿತ್ ಶೆಟ್ಟಿ 5 ಸಿನಿಮಾಗಳನ್ನು ಅನೌನ್ಸ್ ಮಾಡಿದ್ದರು. ಆ ಸಿನಿಮಾಗಳನ್ನು ಮುಗಿಸುವುದಕ್ಕೆ ಕಮ್ಮಿ ಅಂದರೂ ಐದಾರು ವರ್ಷ ಬೇಕಿದೆ. ಈ ಬೆನ್ನಲ್ಲೇ ನಿರ್ಮಾಣಕ್ಕೆ ಇಳಿದಿದ್ದಾರೆ. ಜೊತೆ ವಿತರಣೆಗೂ ಕೈ ಹಾಕಿದ್ದಾರೆ. ನಟನೆ ಜೊತೆ ಸಿನಿಮಾ ಹಲವು ಕ್ಷೇತ್ರಗಳಿಗೂ ರಕ್ಷಿತ್ ಶೆಟ್ಟಿ ಕೈ ಹಾಕಿದ್ದಾರೆ.

  '777 ಚಾರ್ಲಿ' ಕಾಣಲಿಲ್ಲವೇ? ಐಎಂಡಿಬಿಯಿಂದ ಮತ್ತೆ ದಕ್ಷಿಣ ಚಿತ್ರರಂಗ ನಿರ್ಲಕ್ಷ್ಯ'777 ಚಾರ್ಲಿ' ಕಾಣಲಿಲ್ಲವೇ? ಐಎಂಡಿಬಿಯಿಂದ ಮತ್ತೆ ದಕ್ಷಿಣ ಚಿತ್ರರಂಗ ನಿರ್ಲಕ್ಷ್ಯ

  ಪಂಚತಂತ್ರ ಹೀರೊ ಹೊಸ ಸಿನಿಮಾ

  ಪಂಚತಂತ್ರ ಹೀರೊ ಹೊಸ ಸಿನಿಮಾ

  ಯೋಗರಾಜ್‌ ಭಟ್ ನಿರ್ದೇಶಿಸಿದ್ದ 'ಪಂಚತಂತ್ರ' ಸಿನಿಮಾದ ಹೀರೊ ವಿಹಾನ್. ಈ ಸಿನಿಮಾ ಬಳಿಕ ಮತ್ತೆ ಕನ್ನಡ ಸಿನಿಮಾಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಈಗ ಮೂರು ವರ್ಷಗಳ ಬಳಿಕ ಮತ್ತೆ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆ ಸಿನಿಮಾಗೆ ರಕ್ಷಿತ್ ಶೆಟ್ಟಿನೇ ನಿರ್ಮಾಪಕ. ಈಗಾಗಲೇ ಸಿನಿಮಾದ ಫ್ರಿ- ಪ್ರೊಡಕ್ಷನ್ ಕೆಲಸ ಆರಂಭ ಆಗಿದ್ದರು ಸೆಪ್ಟೆಂಬರ್‌ನಲ್ಲಿ ಶೂಟಿಂಗ್ ಆರಂಭ ಆಗಲಿದೆ. 'ನಮ್ಮನೆ ಯುವರಾಣಿ' ಧಾರಾವಾಹಿ ಮೂಲಕ ಎಲ್ಲರ ಗಮನ ಸೆಳೆದಿದ್ದ ಅಂಕಿತಾ ಅಮರ್‌ ಈ ಚಿತ್ರಕ್ಕೆ ನಾಯಕಿ. ಈಗಾಗಲೇ ಚಿತ್ರತಂಡ ಈ ವಿಷಯವನ್ನು ಘೋಷಣೆ ಮಾಡಿದೆ. ಪರಂವಾ ಸ್ಟುಡಿಯೋಸ್‌ ತನ್ನ ಅಧಿಕೃತ ಸೋಶಿಯಲ್‌ ಮೀಡಿಯಾ ಖಾತೆಯಲ್ಲಿ ಈ ಸುಳಿವು ನೀಡಿತ್ತು. ಇದೀಗ ಅಂಕಿತಾ ಅಮರ್ ನಾಯಕಿ ಎಂದು ಹೇಳಿದೆ. ಆಗಸ್ಟ್‌ನಲ್ಲಿ ಟೈಟಲ್ ಅನೌನ್ಸ್ ಆಗಲಿದ್ದು, ಸೆಪ್ಟೆಂಬರ್‌ನಲ್ಲಿ ಸಿನಿಮಾ ಶೂಟಿಂಗ್ ಆರಂಭ ಆಗಲಿದೆ.

  5 ಸಿನಿಮಾಗಳಲ್ಲಿ ರಕ್ಷಿತ್ ಬ್ಯುಸಿ

  5 ಸಿನಿಮಾಗಳಲ್ಲಿ ರಕ್ಷಿತ್ ಬ್ಯುಸಿ

  '777 ಚಾರ್ಲಿ'ಗೂ ಮುನ್ನವೇ ರಕ್ಷಿತ್ ಶೆಟ್ಟಿ 5 ಸಿನಿಮಾಗಳನ್ನು ಘೋಷಣೆ ಮಾಡಿದ್ದಾರೆ. ಈ ಸಿನಿಮಾ ಮುಗಿಯುವವರೆಗೂ ಬೇರೊಂದು ಸಿನಿಮಾಗಳಲ್ಲಿ ನಟಿಸುವುದಿಲ್ಲ. ಈಗಾಗಲೇ 'ಸಪ್ತಸಾಗರದಾಚೆ ಎಲ್ಲೋ', 'ರಿಚರ್ಡ್ ಆಂಟೋನಿ','ಪುಣ್ಯ ಕೋಟಿ', 'ಕಿರಿಕ್ ಪಾರ್ಟಿ 2' ಈಗಾಗಲೇ ಕ್ಯೂನಲ್ಲಿವೆ. ಈ ಸಿನಿಮಾಗಳನ್ನು ಮುಗಿಸುವ ತರಾತುರಿಯಲ್ಲಿ ರಕ್ಷಿತ್ ಶೆಟ್ಟಿ ಇದ್ದಾರೆ. ಇದರೊಂದಿಗೆ ಹೊಸಬರ ಸಿನಿಮಾಗಳಿಗೆ ಸಹಾಯ ಹಸ್ತವನ್ನೂ ಚಾಚುತ್ತಿದ್ದಾರೆ.

  ಹೊಸ ಸಿನಿಮಾಗಳಿಗೆ ಸಾಥ್

  ಹೊಸ ಸಿನಿಮಾಗಳಿಗೆ ಸಾಥ್

  ರಕ್ಷಿತ್ ಶೆಟ್ಟಿ ನಿರ್ಮಾಪಕರಾಗಿಯೂ ಯಶಸ್ಸು ಗಳಿಸಿದ್ದಾರೆ. 'ಕಿರಿಕ್ ಪಾರ್ಟಿ' ಹಾಗೂ '777 ಚಾರ್ಲಿ' ಸಿನಿಮಾಗಳು ಕೈ ತುಂಬಾ ಹಣ ತಂದುಕೊಟ್ಟಿದೆ. 'ಅವನೇ ಶ್ರೀಮನ್ನಾರಾಯಣ' ಚಿತ್ರದಲ್ಲಿ ಕಳೆದುಕೊಂಡ ಹಣ ವಾಪಾಸ್ ಬಂದಿದೆ. 'ಹಂಬರ್ ಪೊಲಿಟಿಷಿಯನ್ ನೊಗರಾಜ್', 'ಕಥೆಯೊಂದು ಶುರುವಾಗಿದೆ', 'ಭೀಮಸೇನ ನಳಮಹಾರಾಜ' ಸಿನಿಮಾಗೂ ಹಣ ಹಾಕಿದ್ದರು. ಈಗಾಗ 'ಗಾರ್ಗಿ' ಚಿತ್ರಕ್ಕೆ ಬೆಂಬಲವಾಗಿ ನಿಂತಿದ್ದಾರೆ.

  ಬಿಡುಗಡೆಯಾಗೋ ಸಿನಿಮಾಗಳು ಬಾಕಿ ಇವೆ

  ಬಿಡುಗಡೆಯಾಗೋ ಸಿನಿಮಾಗಳು ಬಾಕಿ ಇವೆ

  ರಕ್ಷಿತ್ ಶೆಟ್ಟಿ 'ಸಪ್ತಸಾಗರದಾಚೆ ಎಲ್ಲೋ' ಸಿನಿಮಾಗೂ ಹಣ ಹೂಡಿದ್ದಾರೆ. 'ಎಕಂ', 'ಅಬ್ರಕದಬ್ರಾ', 'ಸ್ಟ್ರಾಬೆರಿ' ಸಿನಿಮಾಗಳಿಗೆ ಹಣ ಹೂಡಿದ್ದಾರೆ. ಈ ಎಲ್ಲಾ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ರಕ್ಷಿತ್ ಶೆಟ್ಟಿ ಮೂರು ವರ್ಷಕ್ಕೊಂದು ಸಿನಿಮಾ ಮಾಡಿದ್ದರೂ, ಸಿನಿಮಾದ ವಿವಿಧ ಕ್ಷೇತ್ರದಲ್ಲಿ ಬ್ಯುಸಿಯಾಗಿದ್ದಾರೆ. ನಿರ್ಮಾಪಕನಾಗಿ ಸಾಕಷ್ಟು ಯಶಸ್ಸು ಗಳಿಸಿದ್ದಾರೆ. ಈ ಮೂಲಕ ರಕ್ಷಿತ್ ಶೆಟ್ಟಿ ಒಬ್ಬ ನಟನಷ್ಟೇ ಅಲ್ಲ ಸಿನಿಮಾ ಉದ್ಯಮಿ ಎಂದೂ ಹೇಳಬಹುದು.

  Recommended Video

  Petromax Kannada Movie Public Review | ಕಾಶಿನಾಥ್ ಟೈಮಿಂಗ್ಸ್ ಮ್ಯಾಚ್ ಮಾಡಿದ್ದಾರೆ ಸತೀಶ್ | Public Opinion
  English summary
  Rakshit Shetty Busy With Producing New Films: New Movie With Vihaan And Nammane Yuvarani Ankita Amar, Know More

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X