»   » ಸುದೀಪ್ ಗೆ ಬಿಟ್ಟು ಬೇರೆ ಯಾರಿಗೂ ಈ ಸ್ಕ್ರಿಪ್ಟ್ ಮಾಡಲ್ಲವಂತೆ ರಕ್ಷಿತ್ ಶೆಟ್ಟಿ

ಸುದೀಪ್ ಗೆ ಬಿಟ್ಟು ಬೇರೆ ಯಾರಿಗೂ ಈ ಸ್ಕ್ರಿಪ್ಟ್ ಮಾಡಲ್ಲವಂತೆ ರಕ್ಷಿತ್ ಶೆಟ್ಟಿ

Posted By:
Subscribe to Filmibeat Kannada

ಕೆಲವೊಂದು ಸಿನಿಮಾಗಳು ಶುರುವಾಗುವುದಕ್ಕೂ ಮುಂಚೆಯೇ ದೊಡ್ಡ ಮಟ್ಟದ ಸುದ್ದಿ, ಚರ್ಚೆ ಮಾಡುತ್ತವೆ. ಅಂತಹ ಚಿತ್ರಗಳಲ್ಲಿ ರಕ್ಷಿತ್ ಶೆಟ್ಟಿ ನಿರ್ದೇಶನ ಮಾಡಲಿರುವ 'ಥಗ್ಸ್ ಆಫ್ ಮಾಲ್ಗುಡಿ' ಚಿತ್ರವೂ ಒಂದು. ರಕ್ಷಿತ್ ಶೆಟ್ಟಿ ಆಕ್ಷನ್ ಕಟ್ ಹೇಳಲಿರುವ ಈ ಚಿತ್ರದಲ್ಲಿ ಕಿಚ್ಚ ಸುದೀಪ್ ನಾಯಕನಾಗಿ ಅಭಿನಯಿಸುತ್ತಿದ್ದಾರೆ.

ಇಂತಹ ದೊಡ್ಡ ಪ್ರಾಜೆಕ್ಟ್ ಬಗ್ಗೆ ದಿನಕ್ಕೊಂದು ಸುದ್ದಿಗಳು ಕೇಳಿ ಬರುತ್ತಿದೆ. ಇದರಿಂದ ಈ ಸಿನಿಮಾ ಶುರುವಾಗಲ್ಲ, ಸೆಟ್ಟೇರುವುದೇ ಅನುಮಾನ ಎಂಬ ನಿರ್ಧಾರಕ್ಕೆ ಗಾಂಧಿನಗರ ಬಂದಿದೆ. ಆದ್ರೆ, ಈ ಚಿತ್ರದ ಬಗ್ಗೆ ನಟ-ನಿರ್ದೇಶಕ ರಕ್ಷಿತ್ ಶೆಟ್ಟಿ ಹೇಳೋದೆ ಬೇರೆ.

ಅಷ್ಟಕ್ಕೂ, 'ಥಗ್ಸ್ ಆಫ್ ಮಾಲ್ಗುಡಿ' ಚಿತ್ರದ ಬಗ್ಗೆ ಹೀಗೆಲ್ಲಾ ಸುದ್ದಿಗಳು ಹರಿದಾಡಲು ಕಾರಣವೇನು? ಈ ಬಗ್ಗೆ ರಕ್ಷಿತ್ ಶೆಟ್ಟಿ ಏನು ಹೇಳ್ತಾರೆ? ಮುಂದೆ ಓದಿ.....

'ಥಗ್ಸ್ ಆಫ್ ಮಾಲ್ಗುಡಿ' ನಿಂತೋಯ್ತಾ?

ರಕ್ಷಿತ್ ಶೆಟ್ಟಿ ಮತ್ತು ಸುದೀಪ್ ಜೋಡಿಯ 'ಥಗ್ಸ್ ಆಫ್ ಮಾಲ್ಗುಡಿ' ಚಿತ್ರ ನಿಂತೋಯ್ತಾ? ಇಂತಹದೊಂದು ಸುದ್ದಿ ಸ್ಯಾಂಡಲ್ ವುಡ್ ನಲ್ಲಿ ಆಗಾಗ ಉದ್ಭವಿಸುತ್ತಿದೆ. ಇದಕ್ಕೆ ಕಾರಣ ಏನು ಎಂಬುದರ ಬಗ್ಗೆ ನಿಖರವಾದ ಮಾಹಿತಿ ಇಲ್ಲವಾದರೂ, ಇದನ್ನ ರಕ್ಷಿತ್ ಶೆಟ್ಟಿ ತಳ್ಳಿ ಹಾಕುತ್ತಾರೆ.

ರಕ್ಷಿತ್ ಶೆಟ್ಟಿ 'ಥಗ್ಸ್ ಆಫ್ ಮಾಲ್ಗುಡಿ' ಬಗ್ಗೆ ಸುದೀಪ್ ಬ್ರೇಕಿಂಗ್ ನ್ಯೂಸ್!

'ಥಗ್ಸ್ ಆಫ್ ಮಾಲ್ಗುಡಿ' ಆಗುತ್ತೆ

ರಕ್ಷಿತ್ ಶೆಟ್ಟಿ ನಿರ್ದೇಶನ ಮತ್ತು ಸುದೀಪ್ ನಾಯಕನಾಗಿರುವ 'ಥಗ್ಸ್ ಆಫ್ ಮಾಲ್ಗುಡಿ' ಸಿನಿಮಾ ಸೆಟ್ಟೇರುವುದು 100 ಪರ್ಸೆಂಟ್ ಪಕ್ಕಾ ಎನ್ನುತ್ತಾರೆ ರಕ್ಷಿತ್ ಶೆಟ್ಟಿ.

ಈ ಸ್ಕ್ರಿಪ್ಟ್ ಸುದೀಪ್ ಮೀಸಲು

''ಥಗ್ಸ್ ಆಫ್ ಮಾಲ್ಗುಡಿ' ಚಿತ್ರದ ಸ್ಕ್ರಿಪ್ಟ್ ಸುದೀಪ್ ಅವರಿಗೆ ಮೀಸಲು. ಅವರು ಮಾಡದಿದ್ದರೇ, ಈ ಸ್ಕ್ರಿಪ್ಟ್ ನ್ನ ಪಕ್ಕಕ್ಕೆ ಇಟ್ಟು, ಬೇರೆ ಸಿನಿಮಾಗಳಲ್ಲಿ ತೊಡಗಿಕೊಳ್ಳುತ್ತೇನೆ ಹೊರತು ಬೇರೆ ಯಾರಿಗೂ ಮಾಡಲ್ಲ'' - ರಕ್ಷಿತ್ ಶೆಟ್ಟಿ, ನಟ-ನಿರ್ದೇಶಕ

ಬೇರೆ ಚಿತ್ರಗಳಿಂದ 'ಥಗ್ಸ್' ವಿಳಂಬ ಆಗುತ್ತಿದೆ ಅಷ್ಟೆ

''ಕಿರಿಕ್ ಪಾರ್ಟಿ' ಚಿತ್ರದ ನಂತರ 'ಅವನೇ ಶ್ರೀಮನ್ನಾರಾಯಣ' ಚಿತ್ರದಲ್ಲಿ ನಾನು ತೊಡಗಿಕೊಂಡಿರುವುದರಿಂದ ''ಥಗ್ಸ್ ಆಫ್ ಮಾಲ್ಗುಡಿ' ಸ್ಕ್ರಿಪ್ಟ್ ಕೈಗೆತ್ತಿಕೊಂಡಿಲ್ಲ. ಈ ಚಿತ್ರದ ಮುಗಿದ ಮೇಲೆ ಸುದೀಪ್ ಸರ್ ಜೊತೆ ಕೆಲಸ ಮಾಡಲಿದ್ದೇನೆ. ಅದನ್ನ ಸುದೀಪ್ ಅವರು ಕೂಡ ಒಪ್ಪಿಕೊಂಡಿದ್ದಾರೆ'' - ರಕ್ಷಿತ್ ಶೆಟ್ಟಿ, ನಟ-ನಿರ್ದೇಶಕ

ಸುದೀಪ್ ಹೇಳಿದ್ದು ಕೂಡ ಅದೇ

'ಮಾಲ್ಗುಡಿ' ಕೆಲಸ ಪ್ರಾರಂಭಿಸಲು ಕೇವಲ ಮೂರು ವರ್ಷಗಳಷ್ಟೇ ಅಲ್ಲವೇ? ನೀವು ಖಂಡಿತವಾಗಿಯೂ ಈ ವರ್ಕ್ ಮಾಡುತ್ತಿರಾ ಎನ್ನುವ ನಂಬಿಕೆ ಇದೆ. 'ಬಾಹುಬಲಿ' ಸಿನಿಮಾ ಕಂಪ್ಲೀಟ್ ಆಗಲು 5 ವರ್ಷ ತೆಗೆದುಕೊಂಡಿತ್ತು. 'ಮಾಲ್ಗುಡಿ' ಪ್ರಾರಂಭಿಸಲು ಬೇಕಾದರೆ ನಾವು 5 ವರ್ಷ ತೆಗೆದುಕೊಳ್ಳೋಣ. ಅಲ್ಲಿಯವರೆಗೆ ನಾನು ನಿಮಗಾಗಿ ಕಾಯುತ್ತೇನೆ'' ಎಂದು ಸುದೀಪ್ ಕೂಡ ಸ್ಪಷ್ಟನೆ ಕೊಟ್ಟಿದ್ದರು.

'ಥಗ್ಸ್ ಆಫ್ ಮಾಲ್ಗುಡಿ' ಮುಂದೂಡಿದ್ಯಾಕೆ? ಕಾರಣ ಬಿಚ್ಚಿಟ್ಟ ರಕ್ಷಿತ್ ಶೆಟ್ಟಿ.!

ಈ ವದಂತಿಗಳು ಯಾಕೆ?

ರಕ್ಷಿತ್ ಶೆಟ್ಟಿ ಮತ್ತು ಸುದೀಪ್ ಇಬ್ಬರು ಕೂಡ 'ಥಗ್ಸ್ ಆಫ್ ಮಾಲ್ಗುಡಿ' ಚಿತ್ರದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಹೀಗಿದ್ದರೂ ಆಗಾಗ ಈ ಸಿನಿಮಾ ನಿಂತು ಹೋಗಿದೆ ಎಂಬ ವದಂತಿಗಳು ಯಾಕೆ ಹರಿದಾಡುತ್ತಿದೆ ಎಂಬುದು ಗೊತ್ತಿಲ್ಲ. ಬಟ್, ಒಂದಂತೂ ನಿಜಾ, ರಕ್ಷಿತ್ ಶೆಟ್ಟಿ ಮತ್ತು ಸುದೀಪ್ ಜೋಡಿಯಲ್ಲೇ 'ಥಗ್ಸ್ ಆಫ್ ಮಾಲ್ಗುಡಿ' ಸಿನಿಮಾ ಶುರುವಾಗಲಿದೆ.

ಖುಷಿ ಸಮಾಚಾರ ಕೇಳಿ 'ಕಿರಿಕ್' ಹುಡುಗರ ಬೆನ್ನುತಟ್ಟಿದ ಕಿಚ್ಚ ಸುದೀಪ್

English summary
Rakshit Shetty says, “Thugs of Malgudi is meant for Sudeep and nobody else. If he doesn’t do it, I will keep the script aside and move on to something else.”

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada