twitter
    For Quick Alerts
    ALLOW NOTIFICATIONS  
    For Daily Alerts

    'ಕಿರಿಕ್ ಪಾರ್ಟಿ 2'ನಲ್ಲಿ ರಕ್ಷಿತ್ ಶೆಟ್ಟಿ ಇರ್ತಾರಾ ಇಲ್ವಾ? ಸಿಂಪಲ್ ಸ್ಟಾರ್ ಬಿಚ್ಚಿಟ್ಟ ಗುಟ್ಟೇನು?

    |

    ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಸಿನಿಮಾ ಮೇಲೆ ಎಲ್ಲರೂ ಕಣ್ಣಿಟ್ಟಿದ್ದಾರೆ. '777 ಚಾರ್ಲಿ' ಸಿನಿಮಾ ಅದ್ಭುತ ಸಕ್ಸಸ್ ಬಳಿಕ ರಕ್ಷಿತ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಹೀಗಾಗಿ ಮುಂದಿನ ಸಿನಿಮಾಗಳು ಯಾವುದು? ಯಾವುದು ಮೊದಲು ಸೆಟ್ಟೇರುತ್ತೆ? ಅನ್ನೋದನ್ನು ಕುತೂಹಲದಿಂದ ನೋಡುತ್ತಿದ್ದಾರೆ.

    ರಕ್ಷಿತ್ ಶೆಟ್ಟಿ ಹಾಗೂ ಹೇಮಂತ್ ಕುಮಾರ್ ಕಾಂಬಿನೇಷನ್‌ನಲ್ಲಿ ಗೆದ್ದಿದ್ದ ಸಿನಿಮಾ 'ಗೋಧಿಬಣ್ಣ ಸಾಧಾರಣ ಮೈಕಟ್ಟು'. ಇದೇ ಕಾಂಬಿನೇಷನ್‌ನಲ್ಲೀಗ 'ಸಪ್ತ ಸಾಗರದಾಚೆ ಎಲ್ಲೋ' ರಿಲೀಸ್‌ಗೆ ರೆಡಿಯಾಗುತ್ತಿದೆ.

    ವಿಜಯ್, ತ್ರಿಶಾ, ರಕ್ಷಿತ್ ಶೆಟ್ಟಿ, ಅರ್ಜುನ್ ಸರ್ಜಾ; ಹೀಗಿರಲಿದೆ 'ದಳಪತಿ 67' ಚಿತ್ರದ ತಾರಾಗಣ!ವಿಜಯ್, ತ್ರಿಶಾ, ರಕ್ಷಿತ್ ಶೆಟ್ಟಿ, ಅರ್ಜುನ್ ಸರ್ಜಾ; ಹೀಗಿರಲಿದೆ 'ದಳಪತಿ 67' ಚಿತ್ರದ ತಾರಾಗಣ!

    ಇತ್ತೀಚೆಗೆಗೆ ಕಿರಿಕ್ ಪಾರ್ಟಿ 6 ವರ್ಷಗಳನ್ನು ಪೂರೈಸಿತ್ತು. ಈ ಬೆನ್ನಲ್ಲೇ ಕಳೆದ ಕೆಲವು ದಿನಗಳಿಂದ ರಕ್ಷಿತ್ ಶೆಟ್ಟಿ ಹಾಗೂ ರಿಷಬ್ ಶೆಟ್ಟಿ ಕಾಂಬಿನೇಷನ್‌ನ'ಕಿರಿಕ್ ಪಾರ್ಟಿ 2' ಬಗ್ಗೆ ನೂರೆಂಟು ಸುದ್ದಿ ಓಡಾಡಿತ್ತು. ಆದ್ರೀಗ ರಕ್ಷಿತ್ ಶೆಟ್ಟಿ 'ಕಿರಿಕ್ ಪಾರ್ಟಿ 2' ಆಗುತ್ತಾ ಇಲ್ಲವಾ? ಅನ್ನೋದಕ್ಕೊಂದು ಸುಳಿವು ಕೊಟ್ಟಿದ್ದಾರೆ. ಅಷ್ಟಕ್ಕೂ ರಕ್ಷಿತ್ ಶೆಟ್ಟಿ ಮುಂದಿನ ನಡೆಯೇನು? ಅನ್ನೋದನ್ನು ತಿಳಿಯಲು ಮುಂದೆ ಓದಿ.

    'ಕಿರಿಕ್ ಪಾರ್ಟಿ'ಗೆ 6 ವರ್ಷಗಳ ಸಂಭ್ರಮ

    'ಕಿರಿಕ್ ಪಾರ್ಟಿ'ಗೆ 6 ವರ್ಷಗಳ ಸಂಭ್ರಮ

    ರಕ್ಷಿತ್ ಶೆಟ್ಟಿಯ 'ಕಿರಿಕ್ ಪಾರ್ಟಿ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿತ್ತು. ರಿಷಬ್ ಶೆಟ್ಟಿ ಆಕ್ಷನ್ ಕಟ್ ಹೇಳಿದ್ದರೆ, ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ಲೀಡ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾ ಯುವಕರಿಗೆ ತುಂಬಾನೇ ಇಷ್ಟ ಆಗಿತ್ತು. ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಸೂಪರ್‌ ಸಕ್ಸಸ್ ಕಂಡಿತ್ತು. ಈ ಸಿನಿಮಾ ತೆರೆಕಂಡು ಇತ್ತೀಚೆಗೆ 6 ವರ್ಷಗಳನ್ನು ಪೂರೈಸಿದೆ. ಈ ಬೆನ್ನಲ್ಲೇ ಮತ್ತೆ 'ಕಿರಿಕ್ ಪಾರ್ಟಿ 2' ಆರಂಭ ಆಗುತ್ತೆ ಅನ್ನೋ ಮಾತು ಸುದ್ದಿ ಓಡಾಡಿತ್ತು. ಅದಕ್ಕೀಗ ರಕ್ಷಿತ್ ಉತ್ತರ ಕೊಟ್ಟಿದ್ದಾರೆ.

    'ಕಿರಿಕ್ ಪಾರ್ಟಿ 2' ಸದ್ಯಕ್ಕಿಲ್ಲ

    'ಕಿರಿಕ್ ಪಾರ್ಟಿ 2' ಸದ್ಯಕ್ಕಿಲ್ಲ

    ಕಳೆದ ಕೆಲವು ದಿನಗಳಿಂದ 'ಕಿರಿಕ್ ಪಾರ್ಟಿ 2' ಬಗ್ಗೆನೇ ಹಲವು ಸುದ್ದಿಗಳು ಹರಿದಾಡುತ್ತಿತ್ತು. ಅದಕ್ಕೀಗ ರಕ್ಷಿತ್ ಶೆಟ್ಟಿ ಟ್ವೀಟ್ ಮೂಲಕ ಉತ್ತರ ಕೊಟ್ಟಿದ್ದಾರೆ. 'ಸಪ್ತ ಸಾಗರದಾಚೆ ಎಲ್ಲೋ' ಬಳಿಕ ತನ್ನ ಮುಂದೆ ಹಲವು ಸಿನಿಮಾಗಳಿವೆ. "ಕಿರಿಕ್ ಪಾರ್ಟಿ 2 ಬಗ್ಗೆ ನನ್ನ ಬಳಿ ಬೇರೆಯದ್ದೇ ಪ್ಲ್ಯಾನ್ ಇದೆ. ಅದನ್ನು ಮುಂದೆ ನೋಡೋಣ. ನೀವು ಓದುತ್ತಿರುವ ಸುದ್ದಿಗಳು ಸುಳ್ಳು. ಯಾವತ್ತೂ ಸತ್ಯವಾಗಿರಲಿಲ್ಲ" ಎಂದು ಟ್ವೀಟ್ ಮಾಡುವ ಮೂಲಕ ಸದ್ಯಕ್ಕಂತೂ 'ಕಿರಿಕ್ ಪಾರ್ಟಿ 2' ಸೆಟ್ಟೇರುವುದಿಲ್ಲ ಅನ್ನೋದನ್ನು ಪರೋಕ್ಷವಾಗಿ ಸ್ಪಷ್ಟಪಡಿಸಿದ್ದಾರೆ.

    ರಕ್ಷಿತ್ ಶೆಟ್ಟಿಯ 4 ಸಿನಿಮಾಗಳ್ಯಾವುವು?

    'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾ ಬಳಿಕ ರಕ್ಷಿತ್ ನಾಲ್ಕು ಸಿನಿಮಾಗಳು ಕೈಯಲ್ಲಿವೆ. ಮೊದಲನೆಯದು 'ರಿಚರ್ಡ್ ಆಂಟೋನಿ' ಹೊಂಬಾಳೆ ಫಿಲ್ಮ್ಸ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. ರಕ್ಷಿತ್ ಶೆಟ್ಟಿನೇ ಈ ಸಿನಿಮಾವನ್ನು ನಿರ್ದೇಶನ ಕೂಡ ಮಾಡುತ್ತಿದ್ದಾರೆ. ಆ ಬಳಿಕ ಪುಣ್ಯಕೋಟಿ 1 & 2 ಸಿನಿಮಾವಿದೆ. ಆನಂತ್ರ 'ಮಿಡ್‌ನೈಟ್ ಟು ಮೋಕ್ಷ'. ಈ ಸಿನಿಮಾಗಳಿಗಾಗಿ ರಾತ್ರಿ ನಿದ್ದೆ ಮಾಡುತ್ತಿಲ್ಲ ಎಂದು ರಕ್ಷಿತ್ ಶೆಟ್ಟಿ ಹೇಳಿದ್ದಾರೆ.

    ಚಾರ್ಲಿ ಸಕ್ಸಸ್ ವೇಳೆ ಪ್ರಸ್ತಾಪ

    ಚಾರ್ಲಿ ಸಕ್ಸಸ್ ವೇಳೆ ಪ್ರಸ್ತಾಪ

    ರಕ್ಷಿತ್ ಶೆಟ್ಟಿ '777 ಚಾರ್ಲಿ' ಸಕ್ಸಸ್ ವೇಳೆನೇ ಈ ಮಾತನ್ನು ಹೇಳಿದ್ದರು. ಬೇರೆ ಬೇರೆ ಪ್ರೊಡಕ್ಷನ್ ಹೌಸ್‌ಗಳಿಂದ ಆಫರ್ ಬರುತ್ತಿದ್ದರೂ ತನಗೆ ಸಮಯವಿಲ್ಲ ಎಂದು ಹೇಳಿದ್ದರು. ಈಗಾಗಲೇ ಐದು ಸಿನಿಮಾಗಳಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದೇನೆ. ಆ ಸಿನಿಮಾಗಳು ಮುಗಿದ ಬಳಿಕವೇ ಹೊಸ ಸಿನಿಮಾಗಳ ಬಗ್ಗೆ ಆಲೋಚನೆ ಮಾಡುತ್ತೇವೆ ಎಂದು ಹೇಳಿದ್ದರು. ಇತ್ತ ರಿಷಬ್ ಶೆಟ್ಟಿ ಕೂಡ ಬ್ಯುಸಿಯಾಗಿದ್ದಾರೆ. ಹೀಗಾಗಿ ಇಬ್ಬರ ಕಾಂಬಿನೇಷನ್‌ನಲ್ಲೇ 'ಕಿರಿಕ್ ಪಾರ್ಟಿ 2' ಬರುತ್ತಾ? ಅನ್ನೋದು ರಕ್ಷಿತ್ ಶೆಟ್ಟಿ ಟ್ವೀಟ್ ಬಳಿಕ ದೊಡ್ಡ ಪ್ರಶ್ನೆಯಾಗಿದೆ.

    English summary
    Rakshit Shetty Cleares About Kirik Party 2 And Provided A List Of His Next Four Movies, Know More.
    Monday, January 30, 2023, 13:44
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X