ಕೊಡಗಿಗಾಗಿ ರಕ್ಷಿತ್ ಶೆಟ್ಟಿ ಮಾಡಿದ ಒಳ್ಳೆಯ ಕೆಲಸ ಇದು

By Bharath Kumar

Recommended Video

Kannadada Kotyadipathi Season 3 : ದುಡ್ಡು ಗೆದ್ದು ರಕ್ಷಿತ್ ಶೆಟ್ಟಿ ಮಾಡಿದ ಕೆಲಸ ಗ್ರೇಟ್..!

ಕೊಡಗು ಜಿಲ್ಲೆಯಲ್ಲಿ ದೊಡ್ಡ ಮಟ್ಟದ ಭೂಕುಸಿತ ಉಂಟಾಗಿ ಅಲ್ಲಿನ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರಿಗಾಗಿ ಕನ್ನಡ ಚಿತ್ರರಂಗದ ಕೆಲವು ಸ್ಟಾರ್ ಗಳು ಹಾಗೂ ಅವರ ಅಭಿಮಾನಿಗಳು ನೆರವು ನೀಡಿದ್ದರು.

ಕೊಡಗು ಜನತೆಗೆ ನಟ ರಕ್ಷಿತ್ ಶೆಟ್ಟಿ ಯಾವ ರೀತಿ ಸಹಾಯ ಮಾಡಿದರು ಎಂಬುದು ಅನೇಕರಿಗೆ ಗೊತ್ತಿಲ್ಲ. ಈ ವಿಷ್ಯವನ್ನ ಖುದ್ದು ರಕ್ಷಿತ್ ಶೆಟ್ಟಿ ಅವರೇ 'ಕನ್ನಡದ ಕೋಟ್ಯಧಿಪತಿ' ಕಾರ್ಯಕ್ರಮದಲ್ಲಿ ಬಹಿರಂಗಪಡಿಸಿದ್ದಾರೆ.

ಮೂಲತಃ ಉಡುಪಿಯವರಾದ ರಕ್ಷಿತ್ ಶೆಟ್ಟಿ, ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಅವರ ಕೈಹಿಡಿಯಲಿದ್ದಾರೆ. ಈ ಮೂಲಕ ಕೊಡಗು ಜಿಲ್ಲೆಯ ಅಳಿಯನಾಗುತ್ತಿದ್ದಾರೆ. ಇತ್ತೀಚಿಗಷ್ಟೆ ನಟಿ ರಶ್ಮಿಕಾ ಮಂದಣ್ಣ ಅವರು ಕೊಡಗಿನ ಸಂತ್ರಸ್ಥರಿಗೆ ದೊಡ್ಡ ಮಟ್ಟದ ಸಹಾಯಹಸ್ತ ಚಾಚಿದ್ದರು. ಹಾಗಿದ್ರೆ, ಕೊಡಗು ಜನತೆಗಾಗಿ ರಕ್ಷಿತ್ ಶೆಟ್ಟಿ ಮಾಡಿದ ಒಳ್ಳೆಯ ಕೆಲಸವೇನು.? ಮುಂದೆ ಓದಿ....

ಕೋಟ್ಯಧಿಪತಿಯಲ್ಲಿ ಗೆದ್ದ ಹಣ ಕೊಡಗಿಗೆ.!

ಕೋಟ್ಯಧಿಪತಿಯಲ್ಲಿ ಗೆದ್ದ ಹಣ ಕೊಡಗಿಗೆ.!

ನಟ ರಕ್ಷಿತ್ ಶೆಟ್ಟಿ ಕನ್ನಡದ ಕೋಟ್ಯಧಿಪತಿಯಲ್ಲಿ ಭಾಗವಹಿಸಿದ್ದರು. ಇದರಿಂದ ಬರುವ ಹಣವನ್ನ ಕೊಡಗಿನ ಜನರಿಗೆ ಸಹಾಯ ಮಾಡಲು ಬಳಸುತ್ತೇನೆ. ಅದಕ್ಕಾಗಿಯೇ ಈ ಆಟವಾಡುತ್ತಿದ್ದೇನೆ ಎಂದು ರಕ್ಷಿತ್ ಶೆಟ್ಟಿ ತಿಳಿಸಿದರು.

ರಕ್ಷಿತ್ ಗೆದ್ದ ಹಣವೆಷ್ಟು.?

ರಕ್ಷಿತ್ ಗೆದ್ದ ಹಣವೆಷ್ಟು.?

ಕೊಡಗಿನ ಪ್ರವಾಹ ಪೀಡಿತರಿಗೆ ಸಹಾಯ ಮಾಡಲು ಕನ್ನಡದ ಕೋಟ್ಯಧಿಪತಿಯಲ್ಲಿ ಆಡವಾಡಿದ ರಕ್ಷಿತ್ ಶೆಟ್ಟಿ ಹನ್ನೊಂದು ಪ್ರಶ್ನೆಗಳಿಗೆ ಸರಿ ಉತ್ತರ ನೀಡುವ ಮೂಲಕ 6.40 ಲಕ್ಷ ಗೆದ್ದರು. ಈ ಹಣದಿಂದ ಕೊಡಗಿನ ಜನರಿಗೆ ಸಹಾಯ ಮಾಡುವುದಾಗಿ ಹೇಳಿದ್ದಾರೆ.

'ಚಾರ್ಲಿ-666' ಚಿತ್ರತಂಡದಿಂದ ನೆರವು

'ಚಾರ್ಲಿ-666' ಚಿತ್ರತಂಡದಿಂದ ನೆರವು

ನಿಧಾನವಾಗಿ ಕೊಡುಗೆ ಮೊದಲ ಸ್ಥಿತಿಯತ್ತ ಹೆಜ್ಜೆ ಇಟ್ಟಿದೆ. ಆರಂಭದಲ್ಲಿ ಎಲ್ಲರಂತೆ ರಕ್ಷಿತ್ ಶೆಟ್ಟಿ ಅಭಿನಯದ 'ಚಾರ್ಲಿ-666' ಚಿತ್ರತಂಡ ಅಲ್ಲಿನ ಜನರಿಗೆ ನೆರವು ನೀಡಿತ್ತಂತೆ. ಅಗತ್ಯ ವಸ್ತುಗಳನ್ನ ಸಂಗ್ರಹಿಸಿ ಅಲ್ಲಿನ ಜನರಿಗೆ ಪೂರೈಸುವ ಕೆಲಸ ಮಾಡಿದ್ದರಂತೆ.

ದೊಡ್ಡ ಸಹಾಯ ಮಾಡಿದ ರಶ್ಮಿಕಾ

ದೊಡ್ಡ ಸಹಾಯ ಮಾಡಿದ ರಶ್ಮಿಕಾ

ಇನ್ನು ನಟಿ ರಶ್ಮಿಕಾ ಮಂದಣ್ಣ ಅವರು ಪ್ರವಾಹ ಪೀಡಿತ ತವರು ಜಿಲ್ಲೆ ಕೊಡಗಿನ ಸಂಕಷ್ಟಕ್ಕೆ ಸ್ಪಂದಿಸಿದ್ದು, 31 ಸಂತ್ರಸ್ತ ಕುಟುಂಬಗಳಿಗೆ ತಲಾ 10 ಸಾವಿರ ರುಪಾಯಿ ನೆರವು ನೀಡಿದ್ದಾರೆ. ಅಲ್ಲದೆ ಮುಂದಿನ ದಿನಗಳಲ್ಲಿ ಮನೆ ನಿರ್ಮಾಣಕ್ಕೆ ನೆರವಾಗುವುದಾಗಿ ಹೇಳಿದ್ದಾರೆ.

More from Filmibeat

English summary
vaKannada actor Rakshit shetty donates to kodagu flood. and also rakshit donates huge amount which has he won in kannadada kotyadhipathi season 3.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X