ಕೊನೆಗೂ 'ಬ್ರೇಕ್ ಅಪ್' ಸುದ್ದಿ ಬಗ್ಗೆ ಮಾತನಾಡಿದ ನಟ ರಕ್ಷಿತ್ ಶೆಟ್ಟಿ!
ನಟ ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ಅವರ ಬ್ರೇಕ್ ಅಪ್ ಸುದ್ದಿ ಕಳೆದ ಮೂರ್ನಾಲ್ಕು ದಿನಗಳಿಂದ ಹರಿದಾಡುತ್ತಿದೆ. ಆದರೆ, ಈ ಬಗ್ಗೆ ಈ ವರೆಗೂ ಮೌನವಾಗಿದ್ದ ರಕ್ಷಿತ್ ಶೆಟ್ಟಿ ಮೊದಲ ಬಾರಿಗೆ ಮಾತನಾಡಿದ್ದಾರೆ.
ನಟಿ ರಶ್ಮಿಕಾ ಅವರ ತಾಯಿ ಸುಮನ್ ಮಂದಣ್ಣ ಕೂಡ ಈಗಾಗಲೇ ಬ್ರೇಕ್ ಅಪ್ ಸುದ್ದಿ ನಿಜ ಎಂದು ಹೇಳಿದ್ದರು. ಎರಡು ಕುಟುಂಬಗಳು ಚರ್ಚೆ ಮಾಡಿ ಈ ನಿರ್ಧಾರ ಮಾಡಿದ್ದೇವೆ ಎಂದು ಸ್ಪಷ್ಟನೆ ನೀಡಿದ್ದರು.
ರಶ್ಮಿಕಾ ತಾಯಿ ಅವರ ಬಳಿಕ ಈಗ ನಟ ರಕ್ಷಿತ್ ಶೆಟ್ಟಿ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬ್ರೇಕ್ ಅಪ್ ಬಗ್ಗೆ ಬರೆದುಕೊಂಡಿದ್ದಾರೆ. ಈ ಘಟನೆಯ ಬಗ್ಗೆ ರಕ್ಷಿತ್ ಶೆಟ್ಟಿ ನೀಡಿರುವ ಸ್ಪಷ್ಟನೆ ಮುಂದಿದೆ ಓದಿ...

ಕೆಲ ದಿನಗಳಿಂದ ನಡೆಯುತ್ತಿರುವ ಘಟನೆಗಳು
''ನಾನು ಕೆಲವು ಕಾರಣಗಳಿಂದ ಸಾಮಾಜಿಕ ಜಾಲತಾಣದಿಂದ ದೂರವಿರುತ್ತೇನೆಂದು ತಿಳಿಸಿದ್ದೆ. ಆದ್ರೆ, ಕೆಲವು ವಿಚಾರಗಳ ಬಗ್ಗೆ ಸ್ಪಷ್ಟನೆ ನೀಡುವುದಕ್ಕಾಗಿ ನಾನು ಈಗ ಮತ್ತೆ ಸೋಷಿಯಲ್ ಮೀಡಿಯಾಗೆ ಹಿಂತಿರುಗಿದ್ದೇನೆ. ಕೆಲ ದಿನಗಳಿಂದ ನಡೆಯುತ್ತಿರುವ ಘಟನೆಗಳು, ತುಂಬಾ ಪ್ರೀತಿಸುತ್ತಿದ್ದ ಮತ್ತು ಜೊತೆಗಿದ್ದಿದನ್ನು ಕಳೆದುಕೊಳ್ಳುವಂತೆ ಮಾಡುತ್ತಿದೆ.''

ನಾನು ಯಾರನ್ನು ದೂಷಿಸುವುದಿಲ್ಲ
''ನೀವೆಲ್ಲರೂ ರಶ್ಮಿಕಾ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನ ನೀಡಿದ್ದೀರಿ. ಈ ಘಟನೆಗಳು ಹೇಗೆ ಸಂಭವಿಸಿತು ಎಂಬುದರ ಬಗ್ಗೆ ನಾನು ಯಾರನ್ನು ದೂಷಿಸುವುದಿಲ್ಲ. ನಾವೆಲ್ಲರೂ ಏನನ್ನು ನೋಡುತ್ತೇವೆ ಮತ್ತು ಏನು ಹೇಳುತ್ತೇವೆ ಎಂಬುದನ್ನ ಮಾತ್ರ ನಂಬುತ್ತೇವೆ. ಆದ್ರೆ, ಅದು ನಿಜವಾಗಬೇಕು ಅಂತ ಏನಿಲ್ಲ.''

ಅವಳ ಬಗ್ಗೆ ನನಗೆ ಜಾಸ್ತಿ ಗೊತ್ತಿದೆ
''ಕೆಲವೊಮ್ಮೆ ನಾವು ಮತ್ತೊಂದು ದೃಷ್ಠಿಕೋನದಿಂದ ಯೋಚನೆ ಮಾಡದೆ ಒಂದು ತೀರ್ಮಾನಕ್ಕೆ ಬಂದು ಬಿಡುತ್ತೇವೆ. ನನಗೆ ರಶ್ಮಿಕಾ ಕಳೆದ ಎರಡ್ಮೂರು ವರ್ಷಗಳಿಂದ ಪರಿಚಯ. ಅವಳ ಬಗ್ಗೆ ನಿಮೆಲ್ಲರಿಗಿಂತ ನನಗೆ ಜಾಸ್ತಿ ಗೊತ್ತಿದೆ. ಅವಳನ್ನ ತಾಳ್ಮೆಯಿಂದ ಇರಲು ಬಿಡಿ.''

ಅದಷ್ಟೂ ಬೇಗ ಎಲ್ಲವೂ ಬಗೆಹರಿಯುತ್ತೆ
''ಅದಷ್ಟೂ ಬೇಗ ಎಲ್ಲವೂ ಬಗೆಹರಿಯುತ್ತೆ ಎಂಬ ನಂಬಿಕೆ ಇದೆ. ನಿಮಗೂ ಕೂಡ ಸತ್ಯ ತಿಳಿಯಲಿದೆ. ದಯವಿಟ್ಟು ಯಾವುದೇ ಮಾಧ್ಯಮಗಳ ಸುದ್ದಿಯನ್ನ ನಂಬಬೇಡಿ. ನನ್ನ ಮತ್ತು ರಶ್ಮಿಕಾ ಕಡೆಯಿಂದ ಯಾವುದೇ ಮಾಹಿತಿ ಅವರ ಬಳಿ ಇಲ್ಲ. ಅವರ ಅವಶ್ಯಕತೆಗೆ ತಕ್ಕಂತೆ ಸುದ್ದಿಯನ್ನ ಬಿತ್ತರಿಸುತ್ತಿದ್ದಾರೆ. ಅವರ ಕಲ್ಪನೆ ನಿಜವಲ್ಲ.''

ಅಗತ್ಯವಿದ್ದಾಗ ನಾನು ಮತ್ತೆ ಬರ್ತಿನಿ
''ಈ ಮಾಹಿತಿ ಬಹುತೇಕರಿಗೆ ತಲುಪುವರೆಗೂ ನನ್ನ ಫೇಸ್ ಬುಕ್ ಇನ್ನಷ್ಟು ದಿನ ಚಾಲ್ತಿಯಲ್ಲಿರುತ್ತದೆ. ಅಗತ್ಯವಿದ್ದಾಗ ನಾನು ಮತ್ತೆ ಫೇಸ್ ಬುಕ್ ನಲ್ಲಿ ನಿಮ್ಮ ಮುಂದೆ ಬರ್ತೀನಿ.''

ಸುಮ್ಮನೆ ಯಾಕೆ ನೋವಿನಲ್ಲಿ ಬದುಕಬೇಕು
''ಅವರವರ ಬದುಕು ಅವರವರಿಗೆ ಸ್ವಂತ. ಎಲ್ಲರೂ ಖುಷಿಯಿಂದ ಇರಬೇಕು ಅಷ್ಟೇ. ಎಲ್ಲರೂ ಒಬ್ಬೊಬ್ಬರಿಗೆ ಡಿಸ್ಟರ್ಬ್ ಆಗಿ ಅವರವರ ಕೆಲಸಕ್ಕೆ ತೊಂದರೆ ಮಾಡಿಕೊಳ್ಳುವುದು ಯಾಕೆ. ಇದರಿಂದ ಮುಂದೆ ಏನಾಗಬೇಕು ಹೇಳಿ. ಸುಮ್ಮನೆ ಯಾಕೆ ನೋವಿನಲ್ಲಿ ಬದುಕಬೇಕು.'' ಎಂದು ಈಗಾಗಲೇ ರಶ್ಮಿಕಾ ತಾಯಿ ಸುಮನ್ ಮಂದಣ್ಣ ಸ್ಪಷ್ಟನೆ ನೀಡಿದ್ದಾರೆ.

ಅದಲು ಬದಲಾಯ್ತು ಉಂಗುರಗಳು
ಇನ್ನೊಂದು ಕಡೆ ಬ್ರೇಕ್ ಅಪ್ ಬಳಿಕ ರಕ್ಷಿತ್ ಮತ್ತು ರಶ್ಮಿಕಾ ಇಬ್ಬರು ಕುಟುಂಬದವರು ನಿಶ್ಚಿತಾರ್ಥಕ್ಕೆ ಹಾಕಿಕೊಂಡಿದ್ದ ಉಂಗುರಗಳನ್ನು ವಾಪಸ್ ಮಾಡಿದ್ದಾರಂತೆ. ಅದಷ್ಟೇ ಅಲ್ಲದೆ ನಿಶ್ಚಿತಾರ್ಥಕ್ಕೆ ಎರಡು ಕುಟುಂಬ ಸೇರಿ ಮಾಡಿದ್ದ ಖರ್ಚು ವೆಚ್ಚವನ್ನು ಲೆಕ್ಕ ಹಾಕಿದ್ದಾರೆ ಎನ್ನುತಿವೆ ಮೂಲಗಳು.


Click it and Unblock the Notifications











