ಅಜ್ಜಿಯನ್ನು ಕಳೆದುಕೊಂಡ ನೋವಿನಲ್ಲಿ ನಟ ರಕ್ಷಿತ್ ಶೆಟ್ಟಿ

By ಉಡುಪಿ ಪ್ರತಿನಿಧಿ

ನಟ, ನಿರ್ದೇಶಕ ರಕ್ಷಿತ್ ಶೆಟ್ಟಿ ಅವರ ಇಡೀ ಕುಟುಂಬ ದುಃಖದಲ್ಲಿ ಇದೆ. ಅಜ್ಜಿಯ ಸಾವಿನ ನೋವಿನಲ್ಲಿ ರಕ್ಷಿತ್ ಶೆಟ್ಟಿ ಇದ್ದಾರೆ.

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ರಕ್ಷಿತ್ ಶೆಟ್ಟಿ ಅಜ್ಜಿ ವನಜಾ ಶೆಟ್ಟಿ ವಾರದ ಹಿಂದೆ ನಿಧನ ಹೊಂದಿದ್ದರು. ಮೃತರ ಉತ್ತರ ಕ್ರಿಯೆಯಲ್ಲಿ ಇಂದು (ಅಕ್ಟೋಬರ್ 9) ನಡೆದಿದ್ದು, ರಕ್ಷಿತ್ ಇದರಲ್ಲಿ ಭಾಗಿಯಾಗಿದ್ದರು. ಸಿನಿಮಾದ ಕೆಲಸಗಳನ್ನು ಅಲ್ಲಿಯೇ ಬಿಟ್ಟು ಉಡುಪಿಗೆ ರಕ್ಷಿತ್ ಶೆಟ್ಟಿ ಬಂದಿದ್ದಾರೆ.

ವನಜಾ ಶೆಟ್ಟಿ ಬೈಕಾಡಿ ವಿಠಲ ಶೆಟ್ಟಿಯವರ ಧರ್ಮಪತ್ನಿ. ನಟ ರಕ್ಷಿತ್ ಶೆಟ್ಟಿ ತಂದೆಯ ಚಿಕ್ಕಮ್ಮ. ರಕ್ಷಿತ್ ಶೆಟ್ಟಿ ಬಾಲ್ಯದಿಂದ ಅಜ್ಜಿ ವನಜಾ ಶೆಟ್ಟಿ ಕಂಡರೆ ಬಹಳ ಪ್ರೀತಿ ಹೊಂದಿದ್ದರಂತೆ. ಸಿನಿಮಾ ಕೆಲಸಗಳ ನಡುವೆ ಉಡುಪಿಗೆ ಬಂದು ಅಜ್ಜಿಯನ್ನು ಆಗಾಗ ಮಾತಾಡಿಕೊಂಡು ಹೋಗುತ್ತಿದ್ದರು. ರಕ್ಷಿತ್ ಮತ್ತು ವನಜಾ ಶೆಟ್ಟಿ ಒಡನಾಟವನ್ನು ಸಂಬಂಧಿ ರಾಜೇಶ್ ಹೇಳಿದ್ದಾರೆ. ಮೃತರ ಉತ್ತರ ಕ್ರಿಯೆ ಅಲೆವೂರು ದೊಡ್ಡ ಮನೆ ಪ್ರಿಯಾ ನಿವಾಸದಲ್ಲಿ ಇಂದು ನಡೆದಿದೆ.

Rakshit Shetty Grand Mother Funeral Ceremony

ನಟ ರಕ್ಷಿತ್ ಶೆಟ್ಟಿ ಸದ್ಯ 'ಅವನೇ ಶ್ರೀಮನ್ನಾರಾಯಣ' ಸಿನಿಮಾದಲ್ಲಿ ಬ್ಯುಸಿ ಇದ್ದಾರೆ. ಈ ಸಿನಿಮಾ ಡಿಸೆಂಬರ್ ತಿಂಗಳಿನಲ್ಲಿ ಬಿಡುಗಡೆ ಆಗಲಿದೆ. ಮೂರು ವರ್ಷಗಳ ನಂತರ ಮತ್ತೆ ತೆರೆ ಮೇಲೆ ರಕ್ಷಿತ್ ಕಾಣಿಸುತ್ತಿದ್ದಾರೆ. ದೊಡ್ಡ ಬಜೆಟ್ ನಲ್ಲಿ ನಿರ್ಮಾಣ ಆಗುತ್ತಿರುವ ಈ ಸಿನಿಮಾ ಮೇಲೆ ದೊಡ್ಡ ನಿರೀಕ್ಷೆ ಇದೆ.

More from Filmibeat

English summary
Kannada actor Rakshit Shetty grand mother funeral ceremony.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X