»   » 'ಹೃದಯದ ಒಡತಿ' ರಶ್ಮಿಕಾಗೆ ರಕ್ಷಿತ್ ಶೆಟ್ಟಿ ಕೊಟ್ಟ 'ಒಲವಿನ ಉಡುಗೊರೆ' ಏನು.?

'ಹೃದಯದ ಒಡತಿ' ರಶ್ಮಿಕಾಗೆ ರಕ್ಷಿತ್ ಶೆಟ್ಟಿ ಕೊಟ್ಟ 'ಒಲವಿನ ಉಡುಗೊರೆ' ಏನು.?

Posted By:
Subscribe to Filmibeat Kannada

'ಸಿಂಪಲ್ ಸ್ಟಾರ್' ರಕ್ಷಿತ್ ಶೆಟ್ಟಿ ಹಾಗೂ ಮುದ್ದು ಮುಖದ ಚೆಲುವೆ ರಶ್ಮಿಕಾ ಮಂದಣ್ಣ ರೀಲ್ ಮೇಲೆ ಮಾತ್ರ ಅಲ್ಲ, ರಿಯಲ್ ಆಗಿಯೂ ಪ್ರೇಮ ಪಕ್ಷಿಗಳು ಎಂಬುದು ಇದೀಗ ಎಲ್ಲರಿಗೂ ಗೊತ್ತಿರುವ ವಿಷಯ. ಸದ್ಯದಲ್ಲಿಯೇ.. ಅಂದ್ರೆ ಜುಲೈ 3 ರಂದು ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ನಿಶ್ಚಿತಾರ್ಥ ನಡೆಯಲಿದೆ.

ರಕ್ಷಿತ್ ಶೆಟ್ಟಿ ಹುಟ್ಟುಹಬ್ಬದಂದು 'ನಮ್ಮ ಪುಟ್ಟ ಕುಟುಂಬಕ್ಕೆ ನಿಮಗೆ ಸ್ವಾಗತ' ಎಂದು ರಶ್ಮಿಕಾ ಮಂದಣ್ಣ ತಮ್ಮ ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿದ್ದು ನಿಮಗೆ ನೆನಪಿರಬಹುದು. ಅದರೊಂದಿಗೆ ತಮ್ಮ ತಂದೆ ರಕ್ಷಿತ್ ಶೆಟ್ಟಿಗೆ ಕಡಗ ತೊಡಿಸುತ್ತಿರುವ ಫೋಟೋವನ್ನೂ ರಶ್ಮಿಕಾ ಅಪ್ಲೋಡ್ ಮಾಡಿದ್ದರು.

ಭಾವಿ ಅಳಿಯ ರಕ್ಷಿತ್ ಶೆಟ್ಟಿಗೆ ರಶ್ಮಿಕಾ ತಂದೆ ಕೊಟ್ಟ ದುಬಾರಿ ಉಡುಗೊರೆ ಏನ್ಗೊತ್ತೇ.?

ಭಾವಿ ಅಳಿಯನಿಗೆ ರಶ್ಮಿಕಾ ತಂದೆ ದುಬಾರಿ ಉಡುಗೊರೆ ಕೊಟ್ಟಿದ್ದು ನಿಜ. ಆದ್ರೆ, ಭಾವಿ ಹೆಂಡತಿಗೆ ತಿಂಗಳುಗಳ ಹಿಂದೆ ರಕ್ಷಿತ್ ಕೊಟ್ಟಿದ್ದ ಗಿಫ್ಟ್ ಏನು ಎಂಬುದು ನಿಮಗೆ ಗೊತ್ತಾ.? ಗೊತ್ತಿಲ್ಲ ಅಂದ್ರೆ ಪೂರಾ ವರದಿ ಓದ್ಕೊಂಡ್ ಬನ್ನಿ...

ಕಳೆದ ವರ್ಷವೂ ಸರ್ ಪ್ರೈಸ್ ಕೊಟ್ಟಿದ್ದರಂತೆ ರಶ್ಮಿಕಾ.!

ಈ ವರ್ಷ ರಕ್ಷಿತ್ ಶೆಟ್ಟಿ ಹುಟ್ಟುಹಬ್ಬದಂದು (ಜೂನ್ 6) ನಟಿ ರಶ್ಮಿಕಾ ಮಂದಣ್ಣ ಬಿಗ್ ಸರ್ಪ್ರೈಸ್ ನೀಡಿದ್ದರು. ತಮ್ಮ ಹಾಗೂ ರಕ್ಷಿತ್ ಶೆಟ್ಟಿ ನಡುವಿನ 'ನಂಟ'ನ್ನು, ರಕ್ಷಿತ್ ಶೆಟ್ಟಿ ಜನ್ಮದಿನದಂದೇ ರಶ್ಮಿಕಾ ಜಗಜ್ಜಾಹೀರುಗೊಳಿಸಿದರು. ಅಲ್ಲಿಗೆ, ಈ ವರ್ಷದ ಹುಟ್ಟುಹಬ್ಬ ರಕ್ಷಿತ್ ಪಾಲಿಗೆ ತುಂಬಾ ಸ್ಪೆಷಲ್. ಹಾಗ್ನೋಡಿದ್ರೆ, ಈ ವರ್ಷಕ್ಕಿಂತ ಕಳೆದ ವರ್ಷದ ಬರ್ತಡೇ ರಕ್ಷಿತ್ ಶೆಟ್ಟಿಗೆ ಸಖತ್ ಸ್ಪೆಷಲ್. ಯಾಕಂದ್ರೆ, ಮೊಟ್ಟಮೊದಲು ರಕ್ಷಿತ್ ಶೆಟ್ಟಿಗೆ ರಶ್ಮಿಕಾ ಸರ್ ಪ್ರೈಸ್ ನೀಡಿದ್ದು ಅವತ್ತೇ.!

ರಕ್ಷಿತ್ ಶೆಟ್ಟಿ ಹುಟ್ಟುಹಬ್ಬದಂದು ರಶ್ಮಿಕಾ ಬಾಯಿಂದ ಹೊರಬಂತು 'ದೊಡ್ಡ' ಸತ್ಯ.!

ಇಪ್ಪತ್ತು ಗಿಫ್ಟ್ ನೀಡಿದ್ದರಂತೆ ರಶ್ಮಿಕಾ.!

ಕಳೆದ ವರ್ಷ (ಜೂನ್ 6, 2016) ರಕ್ಷಿತ್ ಶೆಟ್ಟಿ ಹುಟ್ಟುಹಬ್ಬದಂದು, ಬರ್ತಡೇ ಬಾಯ್ ಗೆ ರಶ್ಮಿಕಾ ಬರೋಬ್ಬರಿ ಇಪ್ಪತ್ತು ಉಡುಗೊರೆಗಳನ್ನು ನೀಡಿ ಸರ್ ಪ್ರೈಸ್ ಕೊಟ್ಟಿದ್ರಂತೆ.

ಆಗಲೇ ನೋಡಿ, ಹೃದಯದಲ್ಲಿ ಗಿಟಾರ್ ಬಾರಿಸಲು ಆರಂಭವಾಗಿದ್ದು

ರಶ್ಮಿಕಾ ಕೊಟ್ಟ ಸರ್ ಪ್ರೈಸ್ ನಿಂದ ಫುಲ್ ಖುಷ್ ಆದ ರಕ್ಷಿತ್, ''ಮದುವೆ ಆದ್ರೆ ರಶ್ಮಿಕಾ ರನ್ನೇ ಆಗಬೇಕು'' ಎಂದು ಡಿಸೈಡ್ ಮಾಡಿದ್ರಂತೆ.

ರಶ್ಮಿಕಾ ಹುಟ್ಟುಹಬ್ಬ ಬಂತಲ್ಲ.!

ತಮಗೆ ಇಪ್ಪತ್ತು ಗಿಫ್ಟ್ ಗಳನ್ನು ಕೊಟ್ಟಿದ್ದ ರಶ್ಮಿಕಾಗೆ, ಆಕೆಯ ಹುಟ್ಟುಹಬ್ಬದಂದು (ಏಪ್ರಿಲ್ 5) ರಕ್ಷಿತ್ ಶೆಟ್ಟಿ ಉಂಗುರವನ್ನು 'ಒಲವಿನ ಉಡುಗೊರೆ'ಯಾಗಿ ನೀಡಿದ್ದರಂತೆ.

ಅಷ್ಟೊತ್ತಿಗೆ 'ಲವ್' ಕನ್ಫರ್ಮ್ ಆಗಿತ್ತು

ಅಷ್ಟೊತ್ತಿಗೆ ತಾವಿಬ್ಬರೂ ಒಬ್ಬರನ್ನೊಬ್ಬರು ಇಷ್ಟಪಡುತ್ತಿರುವುದು ಕನ್ಫರ್ಮ್ ಆಗಿದ್ದರಿಂದ, ಈ ವರ್ಷದ ರಶ್ಮಿಕಾ ಹುಟ್ಟುಹಬ್ಬದಂದು ರಕ್ಷಿತ್, ಪ್ರೀತಿಯ ಪ್ರತೀಕವಾಗಿ ಉಂಗುರವನ್ನು ಗಿಫ್ಟ್ ಆಗಿ ನೀಡಿದ್ದರಂತೆ.

ಮಾಧ್ಯಮಗಳಲ್ಲಿ ಸುದ್ದಿ ಶುರು ಆಯ್ತು

ಇಷ್ಟೆಲ್ಲ ನಡೆಯುವಾಗಲೇ, ಇಬ್ಬರ 'ಪ್ರೇಮ ಪರ್ವ' ಮಾಧ್ಯಮಗಳ ಕಿವಿಗೂ ಬಿದ್ದಿದೆ. ಬ್ರೇಕಿಂಗ್ ನ್ಯೂಸ್ ಆದ್ಮೇಲೆ, ಮನೆಯಲ್ಲಿ ಮಾತುಕತೆ ನಡೆದು ಇದೀಗ ಜೋಡಿ ಅಧಿಕೃತವಾಗಿ ರಿಂಗ್ ಎಕ್ಸ್ ಚೇಂಜ್ ಮಾಡಿಕೊಳ್ಳಲು ಮುಂದಾಗಿದೆ.

ಅಂತೂ 'ಸುಳ್ಳು' ನಿಜ ಆಯ್ತು: ಜುಲೈ 3 ರಂದು ರಕ್ಷಿತ್-ರಶ್ಮಿಕಾ ನಿಶ್ಚಿತಾರ್ಥ ನಿಕ್ಕಿ ಆಯ್ತು.!

English summary
Kannada Actor Rakshit Shetty had gifted Ring on Rashmika Mandanna's Birthday

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada