ನೋ ಪಾರ್ಕಿಂಗ್ ನಲ್ಲಿ ಕಾರು ನಿಲ್ಲಿಸಿದ್ದಕ್ಕೆ ರಕ್ಷಿತ್ ಶೆಟ್ಟಿಗೆ ಟೆಕ್ಕಿಯಿಂದ ಪಾಠ
Recommended Video

ಸ್ಯಾಂಡಲ್ ವುಡ್ ನಟ ರಕ್ಷಿತ್ ಶೆಟ್ಟಿ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ. ಸಿನಿಮಾ ಮೂಲಕ ಸಾಮಾನ್ಯ ಜನರಿಗೆ ಒಳ್ಳೆ ಸಂದೇಶ ಸಾರುವ ಕಲಾವಿದರೇ ನಿಯಮಗಳನ್ನು ಪಾಲಿಸುವುದಿಲ್ಲ ಎಂದು ಸಾರ್ವಜನಿಕರೊಬ್ಬರು ರಕ್ಷಿತ್ ವಿರುದ್ಧ ಆರೋಪ ಮಾಡಿದ್ದಾರೆ.
ರಕ್ಷಿತ್ ಶೆಟ್ಟಿಗೆ ಸದ್ಯ ತೊಂದರೆ ಆಗುತ್ತಿರುವುದು ಅವರ ಸ್ವಂತ ಕಾರ್ ನಿಂದ ಎನ್ನುವುದು ಆಶ್ಚರ್ಯವಾದ ವಿಚಾರ. ಹೌದು ರಕ್ಷಿತ್ ಕಾರ್ ನಿಂದ ತೊಂದರೆ ಆಗುತ್ತಿದೆ ಎಂದು ಟೆಕ್ಕಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಕಿರಿಕ್ ಪಾರ್ಟಿ ನಾಯಕನಿಗೆ ಪಾಠ ಹೇಳಿದ್ದಾರೆ.
ಆದರೆ ರಕ್ಷಿತ್ ಮಾತ್ರ ಈ ಬಗ್ಗೆ ನನಗೆ ಮಾಹಿತಿ ಇಲ್ಲ. ನಮ್ಮಿಂದ ತಪ್ಪಾಗಿದ್ದರೆ ಕ್ಷಮೆ ಇರಲಿ ಮತ್ತೆ ಈ ರೀತಿ ತಪ್ಪು ಆಗುವುದಿಲ್ಲ ಎಂದು ಮನವಿ ಮಾಡಿದ್ದಾರೆ. ಸದ್ಯ ಟೆಕ್ಕಿ ರಕ್ಷಿತ್ ಬಗ್ಗೆ ಮಾಡಿರುವ ಫೋಸ್ಟ್ ವೈರಲ್ ಆಗಿದ್ದು ಜನರು ನಟರಿಗೆ ಒಂದು ನ್ಯಾಯ, ಸಾಮಾನ್ಯರಿಗೆ ಒಂದು ನ್ಯಾಯನಾ? ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಏನಿದು ಸುದ್ದಿ ಇಲ್ಲಿದೆ ಸಂಪೂರ್ಣ ಮಾಹಿತಿ ಮುಂದೆ ಓದಿ..

ರಕ್ಷಿತ್ ಕಾರ್ ನಿಂದ ಕಿರಿಕ್
ನಟ ರಕ್ಷಿತ್ ಶೆಟ್ಟಿ ಕಾರ್ ನೋ ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಲಾಗಿದೆ ಇದರಿಂದ ಸಾಮಾನ್ಯ ಜನರಿಗೆ ತೊಂದರೆ ಆಗುತ್ತಿದೆ. ಚಾಲಕನಿಗೆ ಹಲವು ಬಾರಿ ಹೇಳಿದ್ರು ನೋ ಪಾರ್ಕಿಂಗ್ ನಿಂದ ಕಾರು ತೆಗೆದಿಲ್ಲ ಎಂದು ಟೆಕ್ಕಿ ಧನಂಜಯ ಎಂಬುವರಿಂದ ಟ್ವೀಟ್ ಮಾಡಿದ್ದಾರೆ.

ರಿಷಬ್ ಶೆಟ್ಟಿ ಬಳಸುತ್ತಿರುವ ಕಾರ್
ನೋ ಪಾರ್ಕಿಂಗ್ ನಲ್ಲಿ ನಿಂತಿದ್ದ ಕಾರ್ ರಕ್ಷಿತ್ ಶೆಟ್ಟಿ ಹೆಸರಿನಲ್ಲಿದೆ. ಆದರೆ ಈ ಕಾರ್ ಅನ್ನು ನಾನು ಬಳಸುತ್ತಿಲ್ಲ ಎನ್ನುವುದಾಗಿ ರಕ್ಷಿತ್ ತಿಳಿಸಿದ್ದಾರೆ. 'ಕಿರಿಕ್ ಪಾರ್ಟಿ' ಸಿನಿಮಾ ಆದ ನಂತರ ರಕ್ಷಿತ್ ಕಾರನ್ನು ರಿಷಬ್ ಬಳಸುತ್ತಿದ್ದಾರೆ.

ಸಮಸ್ಯೆ ಮುಂದೆ ಆಗುವುದಿಲ್ಲ ಎಂದ ರಿಷಬ್
ಜೆ ಪಿ ನಗರದಲ್ಲಿ ರಿಷಬ್ ಶೆಟ್ಟಿ, ಅಜನೀಶ್ ಲೋಕನಾಥ್ ಅವರ ಸ್ಟುಡಿಯೋಗೆ ಭೇಟಿ ಕೊಟ್ಟಾಗ ಕಾರ್ ಅನ್ನು ನೋ ಪಾರ್ಕಿಂಗ್ ನಲ್ಲಿ ನಿಲ್ಲಿಸಿದ್ದಾರೆ. ಅಲ್ಲಿಯ ನಿವಾಸಿ ಆಗಿರುವ ಟೆಕ್ಕಿ ಧನಂಜಯ ಕಾರ್ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ರಿಷಬ್ ಶೆಟ್ಟಿ ಇನ್ನು ಮುಂದೆ ಈ ರೀತಿ ಆಗುವುದಿಲ್ಲ ಎನ್ನುವುದನ್ನು ತಿಳಿಸಿದ್ದಾರೆ.

ಸಾರ್ವಜನಿಕರಿಗೆ ತೊಂದರೆ ಆಗದಂತೆ ಕ್ರಮ
ಈ ಬಗ್ಗೆ ಗಮನ ನೀಡಿರುವ ಜಯನಗರದ ಸಂಚಾರಿ ಪೊಲೀಸರು ಮುಂದೆ ಈ ರೀತಿ ಆಗದಂತೆ ಎಚ್ಚರ ವಹಿಸುತ್ತೇವೆ. ರಿಷಬ್ ಅವರಿಗೂ ಈ ಬಗ್ಗೆ ತಿಳಿಸಿದ್ದೇವೆ ಎಂದಿದ್ದಾರೆ. ಒಟ್ಟಾರೆ ಈ ಮೂಲಕ ಸಾಮಾನ್ಯ ಜನರಿಗಿಂತ ಸದಾ ಎಚ್ಚರಿಕೆಯಿಂದ ಇರಬೇಕದವರು ಸ್ಟಾರ್ ಗಳು ಎನ್ನುವುದು ತಿಳಿಯುತ್ತೆ.


Click it and Unblock the Notifications











