ರಶ್ಮಿಕಾ ಅವರ 'ಚಮಕ್' ಹಾಡು ನೋಡಿ ರಕ್ಷಿತ್ ಮಾಡಿದ ಟ್ವೀಟ್ ಇದು
ನಟ ಗಣೇಶ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ 'ಚಮಕ್' ಚಿತ್ರದ ಒಂದು ವಿಡಿಯೋ ಸಾಂಗ್ ನಿನ್ನೆ ಬಿಡುಗಡೆಯಾಗಿದೆ. ಎಲ್ಲರೂ ಈ ಹಾಡು ನೋಡಿ ತುಂಬ ಇಷ್ಟ ಪಟ್ಟಿದ್ದಾರೆ. ಅದೇ ರೀತಿ ನಟ ರಕ್ಷಿತ್ ಶೆಟ್ಟಿ ಕೂಡ ಹಾಡಿನ ಬಗ್ಗೆ ಟ್ವೀಟ್ ಮಾಡಿದ್ದಾರೆ.
'ಚಮಕ್' ಚಿತ್ರದ ಹಾಡನ್ನು ರಕ್ಷಿತ್ ಶೆಟ್ಟಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಜೊತೆಗೆ 'ಶಿ ಲುಕ್ ಅಮೇಜಿಂಗ್ ಅಂತ ಹೇಳಿದ್ದಾರೆ. 'ಚಮಕ್' ಚಿತ್ರದ ಈ ಹಾಡಿನಲ್ಲಿ ರಶ್ಮಿಕಾ ಹೋಮ್ಲಿ ಲುಕ್ ನಲ್ಲಿ ಕಾಣಿಸಿಕೊಂಡಿದ್ದರು. ಹಾಡಿನಲ್ಲಿರುವ ಅವರ ಲುಕ್ ನೋಡಿ ರಕ್ಷಿತ್ ಮತ್ತೆ ಫಿದಾ ಆಗಿದ್ದಾರೆ.

ಅಂದಹಾಗೆ, 'ಖುಷ್ ಖುಷ್...' ಎಂಬ ಈ ಹಾಡನ್ನು ವಿಶ್ವ ವಿಜೇತ್ ಎಂಬುವವರು ಬರೆದಿದ್ದಾರೆ. ಜೂರ ಸ್ಯಾಂಡಿ ಮ್ಯೂಸಿಕ್ ನೀಡಿದ್ದು, 'ಸರಿಗಮಪ' ಖ್ಯಾತಿಯ ಸಂಚಿತ್ ಹೆಗ್ಡೆ ಈ ಹಾಡನ್ನು ಹಾಡಿದ್ದಾರೆ. ಸಿನಿಮಾ ಹಾಡು ಕೇಳುವುದಕ್ಕೆ ಸಖತ್ ಫ್ರೆಶ್ ಆಗಿದೆ. ಹಾಡಿನಲ್ಲಿ ಗಣೇಶ್ ಸಖತ್ ಸ್ಟೈಲಿಶ್ ಆಗಿ ಮಿಂಚಿದ್ದು, ರಶ್ಮಿಕಾ ಮಂದಣ್ಣ ಹೋಮ್ಲಿ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.
More from Filmibeat
English summary
Kannada actor Rakshit Shetty has taken his twitter account to praise Rashmika Mandanna starrer 'Chamak' kannada movie song.


Click it and Unblock the Notifications











