'ರಿಚ್ಚಿ'ಗಾಗಿ ಗೋವಾ ಸೇರಿದ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ

ಸ್ಯಾಂಡಲ್ ವುಡ್ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಸದ್ಯ ಗೋವಾದಲ್ಲಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇರುವ ರಕ್ಷಿತ್ ಈಗ 'ರಿಚ್ಚಿ'ಗಾಗಿ ಹುಡುಕಾಟ ಮಾಡುತ್ತ ಗೋವಾ ಕಡೆ ಹೊರಟಿದ್ದಾರೆ.

ಅಂದ್ಹಾಗೆ 'ರಿಚ್ಚಿ', ರಕ್ಷಿತ್ ಅಭಿನಯದ ಮುಂದಿನ ಸಿನಿಮಾ. ಈಗಾಗಲೇ ಸ್ಕ್ರಿಪ್ಟ್ ಕೆಲಸ ಪ್ರಾರಂಭಿಸಿರುವ ಸಿಂಪಲ್ ಸ್ಟಾರ್ ಗೋವಾ ಬ್ಯಾಕ್ ಡ್ರಾಪ್ ನ ಕಥೆಗಾಗಿ ಗೋವಾಗೆ ಹೊರಟಿದ್ದಾರೆ. ಗೋವಾದಲ್ಲಿ ಕುಳಿತು ಕಥೆ ಬರೆಯುತ್ತಿರುವ ರಕ್ಷಿತ್ ಸುಂದರ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಮುಂದೆ ಓದಿ...

'ಉಳಿದವರು ಕಂಡಂತೆ' ಸಿನಿಮಾದ ಮುಂದುವರೆದ ಭಾಗನಾ?

'ಉಳಿದವರು ಕಂಡಂತೆ' ಸಿನಿಮಾದ ಮುಂದುವರೆದ ಭಾಗನಾ?

ರಿಚ್ಚಿ ಅಂದಾಕ್ಷಣ 'ಉಳಿದವರು ಕಂಡಂತೆ' ಸಿನಿಮಾ ನೆನಪಾಗುತ್ತೆ. ರಿಚ್ಚಿ ಪಾತ್ರದ ಮೂಲಕ ಕನ್ನಡ ಅಭಿಮಾನಿಗಳ ಹೃದಯ ಗೆದಿದ್ದ ರಕ್ಷಿತ್ ಈಗ ಮತ್ತೆ ಆ ಪಾತ್ರಕ್ಕೆ ಜೀವ ತುಂಬಲು ಹೊರಟಿದ್ದಾರೆ. 'ರಿಚ್ಚಿ' ಯಾವ ರೀತಿಯ ಸಿನಿಮಾ ಎನ್ನುವುದನ್ನು ರಕ್ಷಿತ್ ಎಲ್ಲಿಯೂ ಬಹಿರಂಗಪಡಿಸಿಲ್ಲ. 'ಉಳಿದವರು ಕಂಡಂತೆ' ಸಿನಿಮಾದ ಮುಂದುವರೆದ ಭಾಗನಾ? ಎನ್ನುವ ಕುತೂಹಲ ಅನೇಕರಲ್ಲಿ ಮನೆ ಮಾಡಿದೆ.

ಕರಾವಳಿಯಲ್ಲಿ ಚಿತ್ರೀಕರಣ

ಕರಾವಳಿಯಲ್ಲಿ ಚಿತ್ರೀಕರಣ

ಅಂದ್ಹಾಗೆ 'ರಿಚ್ಚಿ' ಸಿನಿಮಾ ಕರಾವಳಿ ಭಾಗದಲ್ಲಿ ಚಿತ್ರೀಕರಣ ನಡೆಯಲಿದೆಯಂತೆ. ಮಂಗಳೂರು, ಉಡುಪಿಯಲ್ಲಿ ಚಿತ್ರದ ಬಹುತೇಕ ಭಾಗ ಚಿತ್ರೀಕರಣ ವಾಗಲಿದೆಯಂತೆ. ಆದರೆ ಚಿತ್ರದ ಕೆಲವು ದೃಶ್ಯಗಳನ್ನು ಗೋವಾದಲ್ಲಿಯೂ ಸೆರೆಹಿಡಿಯಬೇಕಂತೆ. ಮಂಗಳೂರು, ಉಡುಪಿ ಚಿರಪರಿಚಿತ ಆದರೆ ಗೋವಾದ ಬಗ್ಗೆ ಹೆಚ್ಚು ಗೊತ್ತಿಲ್ಲದ ಕಾರಣ ಅಲ್ಲಿಗೆ ಹೋಗಿ, ಸ್ಥಳವನ್ನು ನೋಡಿ, ಕಥೆ ಬರೆಯುತ್ತಿದ್ದಾರೆ ರಕ್ಷಿತ್.

ಅಕ್ಟೋಬರ್ ನಿಂದ ಚಿತ್ರೀಕರಣ ಪ್ರಾರಂಭ

ಅಕ್ಟೋಬರ್ ನಿಂದ ಚಿತ್ರೀಕರಣ ಪ್ರಾರಂಭ

'ರಿಚ್ಚಿ' ಚಿತ್ರಕ್ಕೆ 'ಉಳಿದವರು ಕಂಡಂತೆ' ಸಿನಿಮಾದಲ್ಲಿ ಅಸೋಸಿಯೇಟ್ ಆಗಿ ಕೆಲಸ ಮಾಡಿದ್ದ ರಾಹುಲ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈಗಾಗಲೇ ರಕ್ಷಿತ್ '777 ಚಾರ್ಲಿ' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಅಕ್ಟೋಬರ್ ನಿಂದ ಮತ್ತೆ ಚಿತ್ರೀಕರಣಕ್ಕೆ ಹೊರಲು ಸಿದ್ಧರಾಗಿದ್ದಾರೆ.

Recommended Video

RCB ಮೇಲೆ ಯಾಕಿಷ್ಟು ಕೋಪ ಗುರು | Filmibeat Kannada
'777 ಚಾರ್ಲಿ' ಬಳಿಕ ರಕ್ಷಿತ್ ಸಿನಿಮಾ ಯಾವುದು?

'777 ಚಾರ್ಲಿ' ಬಳಿಕ ರಕ್ಷಿತ್ ಸಿನಿಮಾ ಯಾವುದು?

'777 ಚಾರ್ಲಿ' ಸಿನಿಮಾದ ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದೆ. ಈ ಸಿನಿಮಾದ ಜೊತೆಗೆ 'ಸಪ್ತ ಸಾಗರದಾಚೆ' ಮತ್ತು 'ಪುಣ್ಯಕೋಟಿ' ಸಿನಿಮಾ ರಕ್ಷಿತ್ ಬಳಿ ಇದೆ. '777 ಚಾರ್ಲಿ' ಬಳಿಕ ಯಾವ ಸಿನಿಮಾ ಕೈಗೆತ್ತಿಕೊಳ್ಳಲಿದ್ದಾರೆ ಎಂದು ಕಾದು ನೋಡಬೇಕು.

More from Filmibeat

English summary
Actor Rakshit Shetty in Goa for work on his Ritchie Movie Script.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X