For Quick Alerts
  ALLOW NOTIFICATIONS  
  For Daily Alerts

  ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಹುಲಿ ಡಾನ್ಸ್ ಸಿಕ್ಕಾಪಟ್ಟೆ ವೈರಲ್

  By ಫಿಲ್ಮಿಬೀಟ್ ಡೆಸ್ಕ್
  |

  ಸ್ಯಾಂಡಲ್ ವುಡ್ ನಟ ರಕ್ಷಿತ್ ಶೆಟ್ಟಿ ಈ ಬಾರಿಯ ಶ್ರೀಕೃಷ್ಣಜನ್ಮಾಷ್ಟಮಿಯನ್ನು ಭರ್ಜರಿಯಾಗಿ ಆಚರಿಸಿದ್ದಾರೆ. ಕೃಷ್ಣಜನ್ಮಾಷ್ಟಮಿಯ ದಿನ ರಕ್ಷಿತ ಉಡುಪಿಯಲ್ಲಿ ಹುಲಿ ಡಾನ್ಸ್ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಸಿಂಪಲ್ ಸ್ಟಾರ್ ಭರ್ಜರಿಯಾಗಿ ಹುಲಿ ಡಾನ್ಸ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

  ರಕ್ಷಿತ್ ಶೆಟ್ಟಿ ಭಯಂಕರ ಡ್ಯಾನ್ಸ್ ನೋಡಿ ಅಭಿಮಾನಿಗಳು ಫಿದಾ

  ಕೊರೊನಾ ಕಾರಣದಿಂದ ಉಡುಪಿಯಲ್ಲಿ ಈ ಬಾರಿ ಸರಳ ಶ್ರೀಕೃಷ್ಣಜನ್ಮಾಷ್ಟಮಿ ಆಚರಿಸಲಾಗಿದೆ. ಉಡುಪಿಯ ಅಷ್ಟಮಿ ಅಂದರೆ ಹುಲಿವೇಷಗಳ ಕಲರವ ಇದ್ದೇ ಇರುತ್ತದೆ. ಆದರೆ ಈ ಬಾರಿ ವೇಷಗಳಿಗೆ ಜಿಲ್ಲಾಡಳಿತ ಅವಕಾಶ ಕೊಟ್ಟಿಲ್ಲ. ದೇವಸ್ಥಾನಗಳಿಂದ ಹೊರಡುವ ಹುಲಿವೇಷ ತಂಡಗಳು ಸಾಂಪ್ರದಾಯಿಕ ಲೋಬಾನ ಹಾಕುವ ಆಚರಣೆಯನ್ನು ಮಾತ್ರ ಮಾಡಿದೆ. ಬೈಲೂರು ನೀಲಕಂಠ ಮಹಾಬಬ್ಬುಸ್ವಾಮಿ ದೈವಸ್ಥಾನದಲ್ಲಿ ಜ್ಯೂನಿಯರ್ ಫ್ರೆಂಡ್ಸ್ ನ ಲೋಬಾನ ಹಾಕುವ ಸಂಪ್ರದಾಯದಲ್ಲಿ ರಕ್ಷಿತ್ ಶೆಟ್ಟಿ ಭಾಗವಹಿಸಿದ್ದರು.

  ರಕ್ಷಿತ್ ಶೆಟ್ಟಿ ಭರ್ಜರಿ ಡಾನ್ಸ್

  ರಕ್ಷಿತ್ ಶೆಟ್ಟಿ ಭರ್ಜರಿ ಡಾನ್ಸ್

  ದೈವಸ್ಥಾನದ ಹುಲಿವೇಷ ತಂಡದ ಯುವಕರ ಜೊತೆ ರಕ್ಷಿತ್ ಶೆಟ್ಟಿ ಭರ್ಜರಿಯಾಗಿ ಸ್ಟೆಪ್ ಹಾಕಿದ್ದಾರೆ. ಪಕ್ಕಾ ವೇಷಧಾರಿಗಳಂತೆ ರಕ್ಷಿತ್ ಕುಣಿದಿದ್ದು, ವಿಡಿಯೋ ವೈರಲ್​ ಆಗಿದೆ. ರಕ್ಷಿತ್​ ಶೆಟ್ಟಿಗೆ ಚಿತ್ರರಂಗದಲ್ಲಿ ಹೆಚ್ಚು ಜನಪ್ರಿಯತೆ ನೀಡಿದ ಸಿನಿಮಾ ‘ಉಳಿದವರು ಕಂಡಂತೆ'. ಆ ಚಿತ್ರ ಹಿಟ್​ ಆಗುವುದಕ್ಕೂ ಮೊದಲು ಇದೇ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿ ಇಲ್ಲಿನ ತಂಡವನ್ನು ರಕ್ಷಿತ್ ಚಿತ್ರೀಕರಣಕ್ಕೆ ಕರೆದೊಯ್ದಿದ್ದರು.

  ಪ್ರತಿವರ್ಷ ವಿಶೇಷ ಪೂಜೆ ಸಲ್ಲಿಸುತ್ತಾರೆ ರಕ್ಷಿತ್

  ಪ್ರತಿವರ್ಷ ವಿಶೇಷ ಪೂಜೆ ಸಲ್ಲಿಸುತ್ತಾರೆ ರಕ್ಷಿತ್

  ಚಿತ್ರದ ಸಕ್ಸಸ್ ಹಿಂದೆ ಬಬ್ಬುಸ್ವಾಮಿ ಕೊರಗಜ್ಜ ದೈವದ ಆಶೀರ್ವಾದ ಕೂಡ ಇದೆ ಎಂದು ರಕ್ಷಿತ್ ಶೆಟ್ಟಿ ಬಲವಾಗಿ ನಂಬಿದ್ದಾರೆ. ಪ್ರತಿ ವರ್ಷ ಅಷ್ಟಮಿ ಸಂದರ್ಭದಲ್ಲಿ ದೈವಸ್ಥಾನಕ್ಕೆ ಭೇಟಿ ಕೊಟ್ಟು ವಿಶೇಷ ಪೂಜೆ ಸಲ್ಲಿಸುತ್ತಾರೆ. ಪ್ರತಿವರ್ಷ ಪ್ರಾಂಗಣದಲ್ಲಿ ಹುಲಿ ಕುಣಿಯುವ ಸಂಪ್ರದಾಯ ನಡೆಸಿಕೊಂಡು ಬರುತ್ತಿದ್ದಾರೆ.

  ರಕ್ಷಿತ್ ಶೆಟ್ಟಿ ಬಳಿ ಇರುವ ಸಿನಿಮಾಗಳು

  ರಕ್ಷಿತ್ ಶೆಟ್ಟಿ ಬಳಿ ಇರುವ ಸಿನಿಮಾಗಳು

  ರಕ್ಷಿತ್ ಶೆಟ್ಟಿ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕೊನೆಯದಾಗಿ ಸಿಂಪಲ್ ಸ್ಟಾರ್ ಅವನೇ ಶ್ರೀಮನ್ನಾರಾಯಣ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಇದೀಗ 777 ಚಾರ್ಲಿ ಮುಗಿಸಿರುವ ರಕ್ಷಿತ್ ಸದ್ಯ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾ ಜೊತೆಗೆ ರಕ್ಷಿತ್ ಇತ್ತೀಚಿಗಷ್ಟೆ ರಿಚರ್ಡ್ ಸಿನಿಮಾ ಘೋಷಣೆ ಮಾಡಿದ್ದಾರೆ. ಈ ಸಿನಿಮಾ ಹೊಂಬಾಳೆ ಫಿಲಂಸ್ ನಲ್ಲಿ ಮೂಡಿಬರುತ್ತಿದೆ. ರಿಚರ್ಡ್ ಸಿನಿಮಾದಲ್ಲಿ ರಕ್ಷಿತ್ ನಟನೆ ಜೊತೆಗೆ ನಿರ್ದೇಶನ ಕೂಡ ಮಾಡುತ್ತಿದ್ದಾರೆ. ಅನೇಕ ವರ್ಷಗಳ ಬಳಿಕ ರಕ್ಷಿತ್ ರಿಚರ್ಡ್ ಮೂಲಕ ನಿರ್ದೇಶನಕ್ಕೆ ಇಳಿದಿದ್ದಾರೆ.

  '777 ಚಾರ್ಲಿ'ಯಿಂದ ಸಿಕ್ತಿದೆ ಸಖತ್ ಗಿಫ್ಟ್

  '777 ಚಾರ್ಲಿ'ಯಿಂದ ಸಿಕ್ತಿದೆ ಸಖತ್ ಗಿಫ್ಟ್

  ಸದ್ಯ ರಕ್ಷಿತ್ 777 ಚಾರ್ಲಿ ಬಿಡುಗಡೆಯ ತಯಾರಿಯಲ್ಲಿದ್ದಾರೆ. ಈಗಾಗಲೇ ಟೀಸರ್ ಮತ್ತು ಪೋಸ್ಟರ್ ಮೂಲಕ ಸದ್ದು ಮಾಡುತ್ತಿರುವ ಚಾರ್ಲಿ ಸಿನಿಮಾದಿಂದ ಮೊದಲ ವಿಡಿಯೋ ಹಾಡನ್ನು ಬಿಡುಗಡೆ ಮಾಡಲು ಸಿನಿಮಾತಂಡ ಸಿದ್ಧವಾಗಿದೆ. 777ಚಾರ್ಲಿ ಸಿನಿಮಾದ ಮೊದಲ ವಿಡಿಯೋ ಹಾಡು 'ಟಾರ್ಚರ್' ಸಾಂಗ್ ಸೆಪ್ಟಂಬರ್ 9ಕ್ಕೆ ಬಿಡುಗಡೆಯಾಗುತ್ತಿದೆ. ಗೌರಿ-ಗಣೇಶ ಹಬ್ಬಕ್ಕೂ ಮುಂಚಿತವಾಗಿ ಹಾಡನ್ನು ಬಿಡುಗಡೆ ಮಾಡುವ ಮೂಲಕ ಅಭಿಮಾನಿಗಳಿಗೆ ಹಬ್ಬದ ವಿಶೇಷವಾಗಿ ಈ ಹಾಡನ್ನು ಬಿಡುಗಡೆ ಮಾಡಲಾಗುತ್ತಿದೆ. ಅಂದಹಾಗೆ ಈ ಹಾಡು ಕನ್ನಡದ ಜೊತೆಗೆ ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿಯಲ್ಲಿ ತೆರೆಗೆ ಬರುತ್ತಿದೆ.

  English summary
  Kannada Actor Rakshit Shetty huli vesha dance in Krishna Janmashtami, video viral on social media.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X