For Quick Alerts
  ALLOW NOTIFICATIONS  
  For Daily Alerts

  '777 ಚಾರ್ಲಿ' ಸಿನಿಮಾ ನಾಯಕನ ಪಾತ್ರಕ್ಕೆ ರಕ್ಷಿತ್ ಮೊದಲ ಆಯ್ಕೆ ಆಗಿರ್ಲಿಲ್ಲ!

  |

  '777 ಚಾರ್ಲಿ' ಸಿನಿಮಾದ ಟೀಸರ್ ಈಗಾಗಲೇ ಬಿಡುಗಡೆ ಆಗಿದ್ದು ವೈರಲ್ ಆಗಿದೆ. ಸುದೀಪ್, ಪ್ರಕಾಶ್ ರೈ ಇನ್ನೂ ಕೆಲವು ಸೆಲೆಬ್ರಿಟಿಗಳು ಸಹ ಟೀಸರ್‌ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

  ರಕ್ಷಿತ್ ಶೆಟ್ಟಿ ನಟನೆಯ ಈ ಹಿಂದಿನ ಸಿನಿಮಾ 'ಅವನೇ ಶ್ರೀಮನ್ನಾರಾಯಣ' ನಿರೀಕ್ಷಿತ ಮಟ್ಟಕ್ಕೆ ಹಿಟ್ ಆಗಲಿಲ್ಲ. ಸಿನಿಮಾದ ಕತೆ ಹಾಗೂ ಮೇಕಿಂಗ್ ಬಗ್ಗೆ ಅಪಸ್ವರಗಳು ಕೇಳಿ ಬಂದಿತ್ತು. ಆದರೆ 'ಅವನೇ ಶ್ರೀಮನ್ನಾರಾಯಣ'ದಲ್ಲಿ ಕಳೆದುಕೊಂಡದ್ದನ್ನು ಈ ಸಿನಿಮಾ ಮೂಲಕ ಮತ್ತೆ ಗಳಿಸುವ ನಿರೀಕ್ಷೆಯಲ್ಲಿ ರಕ್ಷಿತ್ ಶೆಟ್ಟಿ ಇದ್ದಾರೆ.

  ಸರಿ ಸುಮಾರು ಎರಡು ವರ್ಷದಿಂದಲೂ '777 ಚಾರ್ಲಿ' ಸಿನಿಮಾ ಚಿತ್ರೀಕರಣ ನಡೆಯುತ್ತಿದ್ದು ಸಿನಿಮಾಕ್ಕಾಗಿ ಬಹಳ ಶ್ರಮ ಪಟ್ಟಿರುವುದಾಗಿ ರಕ್ಷಿತ್ ಶೆಟ್ಟಿ ಹೇಳಿದ್ದಾರೆ. ಸಿನಿಮಾದ ಬಗ್ಗೆ ದೊಡ್ಡ ನಿರೀಕ್ಷೆಯನ್ನು ರಕ್ಷಿತ್ ಶೆಟ್ಟಿ ಇಟ್ಟುಕೊಂಡಿದ್ದಾರೆ. ಆದರೆ ಈ ಸಿನಿಮಾದ ನಾಯಕನ ಪಾತ್ರಕ್ಕೆ ಮೊದಲ ಆಯ್ಕೆ ರಕ್ಷಿತ್ ಶೆಟ್ಟಿ ಆಗಿರಲಿಲ್ಲ ಬದಲಿಗೆ ಅವರ ಗೆಳೆಯ ನಾಯಕರಾಗಿ ಆಯ್ಕೆ ಆಗಿದ್ದರು.

  ಕಿರಿಕ್ ಪಾರ್ಟಿ ಸಿನಿಮಾ ಸಮಯದಲ್ಲಿ '777 ಚಾರ್ಲಿ' ಕತೆ

  ಕಿರಿಕ್ ಪಾರ್ಟಿ ಸಿನಿಮಾ ಸಮಯದಲ್ಲಿ '777 ಚಾರ್ಲಿ' ಕತೆ

  '777 ಚಾರ್ಲಿ' ಸಿನಿಮಾದ ನಿರ್ದೇಶಕ ಕಿರಣ್ ರಾಜ್ ಮಾಧ್ಯಮದಲ್ಲಿ ನೀಡಿರುವ ಸಂದರ್ಶನದಲ್ಲಿ ಮಾತನಾಡಿದ್ದು, 'ಕಿರಿಕ್ ಪಾರ್ಟಿ' ಸಿನಿಮಾದ ಸಂದರ್ಭದಲ್ಲಿಯೇ '777 ಚಾರ್ಲಿ' ಸಿನಿಮಾ ಕತೆಯನ್ನು ಬರೆದಿದ್ದರಂತೆ. ಆವಾಗಲೇ ನಟರೊಬ್ಬರಿಗೆ ಕತೆಯನ್ನೂ ಹೇಳಿ ಅವರು ಒಪ್ಪಿಕೊಂಡಿದ್ದರು ಸಹ. 'ಕಿರಿಕ್ ಪಾರ್ಟಿ' ಸಿನಿಮಾದಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು ಕಿರಣ್ ರಾಜ್.

  ಅರವಿಂದ್ ಅಯ್ಯರ್ ನಾಯಕನಾಗಬೇಕಿತ್ತು

  ಅರವಿಂದ್ ಅಯ್ಯರ್ ನಾಯಕನಾಗಬೇಕಿತ್ತು

  'ಕಿರಿಕ್ ಪಾರ್ಟಿ' ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ಗೆಳೆಯನ ಪಾತ್ರದಲ್ಲಿ ನಟಿಸಿರುವ ಅರವಿಂದ್ ಅಯ್ಯರ್‌ಗೆ ಸಿನಿಮಾದ ಕತೆ ಹೇಳಿದ್ದರಂತೆ. ಅರವಿಂದ್‌ಗೆ ಕತೆ ಬಹಳ ಇಷ್ಟವಾಗಿ ಒಪ್ಪಿಕೊಂಡಿದ್ದರು ಸಹ. ಕೆಲವು ಪೋಸ್ಟರ್‌ಗಳನ್ನು ಸಹ ಆಗ ರೆಡಿ ಮಾಡಲಾಗಿತ್ತು. ಪಾತ್ರಕ್ಕಾಗಿ ತಯಾರಿ ಸಹ ಆರಂಭಿಸಿದ್ದರು ಅರವಿಂದ್ ಅಯ್ಯರ್.

  ಬೇರೆ ಸಿನಿಮಾಗಳಲ್ಲಿ ತೊಡಗಿಸಿಕೊಂಡ ಅರವಿಂದ್

  ಬೇರೆ ಸಿನಿಮಾಗಳಲ್ಲಿ ತೊಡಗಿಸಿಕೊಂಡ ಅರವಿಂದ್

  ಆದರೆ ಸಿನಿಮಾ ನಿರ್ಮಾಣ ಮಾಡಲು ಬಹಳ ಸಮಯ ಬೇಕಾಗುತ್ತದೆ ಎಂಬುದು ತಡವಾಗಿ ಗೊತ್ತಾಗಿ, ಅರವಿಂದ್ ಸಹ ಅದೇ ಸಮಯದಲ್ಲಿ ಬೇರೆ ಸಿನಿಮಾಗಳಲ್ಲಿ ಬ್ಯುಸಿಯಾದ ಬಳಿಕ. ಒಮ್ಮೆ ರಕ್ಷಿತ್ ಶೆಟ್ಟಿಗೆ ಅದೇ ಕತೆ ಹೇಳಿದ್ದಾರೆ ಕಿರಣ್ ರಾಜ್. ರಕ್ಷಿತ್‌ಗೆ ಕತೆ ಬಹಳ ಇಷ್ಟವಾಗಿ ತಾವೇ ನಟಿಸುವುದಾಗಿ ಕಿರಣ್ ರಾಜ್‌ ಅವರನ್ನು ಒಪ್ಪಿಸಿದ್ದಾರೆ.

  ತಮ್ಮ ಜಿಲ್ಲೆ‌ ಮಾತ್ರವಲ್ಲ ಉತ್ತರ ಕರ್ನಾಟಕದ ಬಡವರಿಗೂ ನೆರವಾದ ಭುವನ್& ಹರ್ಷಿಕಾ | Filmibeat Kannada
  ಸಾಕಷ್ಟು ಶ್ರಮ ಪಟ್ಟಿರುವ ರಕ್ಷಿತ್ ಶೆಟ್ಟಿ

  ಸಾಕಷ್ಟು ಶ್ರಮ ಪಟ್ಟಿರುವ ರಕ್ಷಿತ್ ಶೆಟ್ಟಿ

  ನಟ ರಕ್ಷಿತ್ ಶೆಟ್ಟಿ '777 ಚಾರ್ಲಿ' ಸಿನಿಮಾಕ್ಕಾಗಿ ಸಾಕಷ್ಟು ಶ್ರಮ ಪಟ್ಟಿದ್ದಾರೆ. ಸತತವಾಗಿ ಸುಮಾರು ಎರಡು ವರ್ಷ ಇದೊಂದೇ ಸಿನಿಮಾದ ಮೇಲೆ ಗಮನ ಕೇಂದ್ರೀಕರಿಸಿ ಬಹಳ ತಾಳ್ಮೆಯಿಂದ ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ. ನಾಯಿಯೊಂದಿಗೆ ಚಿತ್ರೀಕರಣದಲ್ಲಿ ತೊಡಗುವುದು ದೊಡ್ಡ ಮಟ್ಟದ ತಾಳ್ಮೆಯನ್ನೇ ಬೇಡುತ್ತದೆ. ಅದರ ಜೊತೆಗೆ ಲಾಕ್‌ಡೌನ್ ಕಾರಣದಿಂದ ಎರಡು ಬಾರಿ ಚಿತ್ರೀಕರಣಕ್ಕೆ ಅಡಚಣೆಯಾಗಿದೆ. ಸಿನಿಮಾವನ್ನು ಸೆಪ್ಟೆಂಬರ್ ಅಥವಾ ಅಕ್ಟೋಬರ್‌ನಲ್ಲಿ ಬಿಡುಗಡೆ ಮಾಡಲಾಗುತ್ತದೆ.

  English summary
  777 Chralie movie director Kiran Raj said Rakshit Shetty was not the first choice for 777 Charlie movie's hero character.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X