»   » 'ಕಿರಿಕ್ ಪಾರ್ಟಿ'ಯ ಸ್ನೇಹಿತನಿಗಾಗಿ ರಕ್ಷಿತ್ ಮತ್ತೊಂದು ಸಿನಿಮಾ ನಿರ್ಮಾಣ!

'ಕಿರಿಕ್ ಪಾರ್ಟಿ'ಯ ಸ್ನೇಹಿತನಿಗಾಗಿ ರಕ್ಷಿತ್ ಮತ್ತೊಂದು ಸಿನಿಮಾ ನಿರ್ಮಾಣ!

Posted By:
Subscribe to Filmibeat Kannada

'ಕಿರಿಕ್ ಪಾರ್ಟಿ' ಸಿನಿಮಾದಲ್ಲಿ ನಟಿಸಿರುವ ಸ್ಟಾರ್ ಗಳು ಒಂದಲ್ಲ ಒಂದು ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. 'ಕಿರಿಕ್ ಪಾರ್ಟಿ' ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಗೆಳೆಯರ ಪೈಕಿ ಒಬ್ಬರಾಗಿ ನಟಿಸಿದ್ದ ನಟ ಅರವಿಂದ್‌ ಅಯ್ಯರ್‌ ಈಗ ಹೀರೋ ಆಗಿ ಎರಡನೇ ಸಿನಿಮಾ ಮಾಡುತ್ತಿದ್ದಾರೆ.

ಒಂದು ಕಡೆ ಅರವಿಂದ್‌ ಅಯ್ಯರ್‌ಅವರ 'ಭೀಮಸೇನಾನಳಮಹಾರಾಜ' ಚಿತ್ರದ ಶೂಟಿಂಗ್ ನಡೆಯುತ್ತಿದೆ. ಇನ್ನೊಂದು ಕಡೆ ಅವರ ಹೊಸ ಸಿನಿಮಾ ಶುರುವಾಗಿದೆ. '777 ಚಾರ್ಲಿ' ಎಂಬ ಟೈಟಲ್ ನಲ್ಲಿ ಶುರುವಾಗಿರುವ ಈ ಚಿತ್ರವನ್ನು ನಟ ರಕ್ಷಿತ್ ಶೆಟ್ಟಿ ಅವರೇ ನಿರ್ಮಾಣ ಮಾಡುತ್ತಿದ್ದಾರೆ.

Rakshit Shetty new movie titled as '777 Charlie'

ಸದ್ಯ '777 ಚಾರ್ಲಿ' ಚಿತ್ರದ ಕೆಲ ಫೋಟೋಗಳು ಹೊರಬಂದಿವೆ. ನಿಜಕ್ಕೂ ಆ ಫೋಟೋಗಳನ್ನು ನೋಡುತ್ತಿದ್ದರೆ ಈ ಚಿತ್ರ ಕನ್ನಡದ ವಿಭಿನ್ನ ಸಿನಿಮಾಗಳ ಸಾಲಿನಲ್ಲಿ ನಿಲ್ಲುತ್ತದೆ ಎನಿಸುತ್ತದೆ. ಈ ಸಿನಿಮಾ ಶ್ವಾನ ಮತ್ತು ಮನುಷ್ಯನ ಬಾಂಡಿಂಗ್ ಹೇಳುವಂತಹ ಕಥೆಯನ್ನು ಹೊಂದಿದೆಯಂತೆ.

Rakshit Shetty new movie titled as '777 Charlie'

ಜೊತೆಗೆ ಚಿತ್ರದಲ್ಲಿ ಶ್ವಾನದ ಹೆಸರು ಚಾರ್ಲಿ ಆಗಿದ್ದು, ಶ್ವಾನದ ಲೈಸನ್ಸ್  ನಂಬರ್ 777 ಅಂತೆ. ಹೀಗಾಗಿ ಚಿತ್ರಕ್ಕೆ '777 ಚಾರ್ಲಿ' ಎಂಬ ಹೆಸರನ್ನು ಆಯ್ಕೆ ಮಾಡಿಕೊಂಡಿದ್ದಾರಂತೆ. ರಕ್ಷಿತ್ ಶೆಟ್ಟಿ ಜೊತೆ ಕೆಲಸ ಮಾಡಿರುವ ಕಿರಣ್ ರಾಜ್‌ ಎಂಬುವವರು ಈ ಚಿತ್ರದ ಮೂಲಕ ಸ್ಯಾಂಡಲ್ ವುಡ್‌ಗೆ ಪರಿಚಿತವಾಗುತ್ತಿದ್ದಾರೆ.

English summary
Rakshit Shetty new movie titled as '777 Charlie'. 'Kirik Party' fame Aravind Iyer will playing a lead role.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X