For Quick Alerts
  ALLOW NOTIFICATIONS  
  For Daily Alerts

  ಅತ್ಯಂತ ಕೆಟ್ಟ ಚಿತ್ರದಲ್ಲಿ ನಟ ರಕ್ಷಿತ್ ಶೆಟ್ಟಿ ನಟಿಸುತ್ತಿಲ್ಲ

  |

  ಕನ್ನಡ ಚಿತ್ರರಂಗದಲ್ಲಿ ತಯಾರಾಗುತ್ತಿರುವ ಅತ್ಯಂತ ಕೆಟ್ಟ ಸಿನಿಮಾದಲ್ಲಿ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಟಿಸುತ್ತಿದ್ದಾರೆ ಎಂಬ ಅಂತೆ-ಕಂತೆ ಹಬ್ಬಿದ್ದರೆ ಅದು ಸುಳ್ಳು. ರಕ್ಷಿತ್ ಶೆಟ್ಟಿ ಅಂತಹ ಸಿನಿಮಾದಲ್ಲಿ ನಟಿಸುತ್ತಿಲ್ಲ. ಇದನ್ನು ಸ್ವತಃ ಚಿತ್ರತಂಡ ಸ್ಪಷ್ಟಪಡಿಸಿದೆ.

  ಇದೇನಿದು ಕರ್ಣನ ಹೊಸ ಅವತಾರ | Rakshith Shetty | Filmibeat Kannada

  ಯಾವುದಪ್ಪ ಅದು ಕೆಟ್ಟ ಸಿನಿಮಾ ಅಂತ ಅಚ್ಚರಿ ಆಗ್ಬೇಡಿ. ಪೂರ್ತಿ ಸ್ಟೋರಿ ಓದಿ ನಿಮಗೆ ತಿಳಿಯುತ್ತದೆ.

  ಹಾಸ್ಟೆಲ್ ಹುಡುಗರ ಬಿಲ್ಡಪ್ ನೋಡಿ ಸಿಟ್ಟಾದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ಹಾಸ್ಟೆಲ್ ಹುಡುಗರ ಬಿಲ್ಡಪ್ ನೋಡಿ ಸಿಟ್ಟಾದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್

  ಸ್ಯಾಂಡಲ್‌ವುಡ್‌ನಲ್ಲಿ ಪ್ರಚಾರದ ವಿಚಾರಕ್ಕೆ ಬಹಳ ವಿಶೇಷವಾಗಿ ಗಮನ ಸೆಳೆಯುತ್ತಿರುವ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಚಿತ್ರತಂಡ ಹೊಸ ವಿಡಿಯೋ ಮಾಡಿದ್ದು, ಈ ಸಲ ರಕ್ಷಿತ್ ಶೆಟ್ಟಿ ಪ್ರಮುಖ ಆಕರ್ಷಣೆಯಾಗಿದ್ದಾರೆ.

  ಇದಕ್ಕೂ ಮುಂಚೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ಕಿಚ್ಚ ಸುದೀಪ್ ಅವರನ್ನು ಒಳಗೊಂಡು ವಿಭಿನ್ನ ವಿಡಿಯೋಗಳನ್ನು ಮಾಡಿದ್ದರು. ಈಗ ರಕ್ಷಿತ್ ಶೆಟ್ಟಿ ಅವರ ''ಕಿರಿಕ್ ಪಾರ್ಟಿ''ಯ ಕರ್ಣನ ಪಾತ್ರದೊಂದಿಗೆ ಎಂಟ್ರಿಯಾಗಿದ್ದಾರೆ.

  'ಹಾಸ್ಟೆಲ್ ಹುಡುಗರ' ಪ್ರಮೋಷನ್‌ಗೆ ಕಿಚ್ಚ ಸುದೀಪ್ ಫಿದಾ'ಹಾಸ್ಟೆಲ್ ಹುಡುಗರ' ಪ್ರಮೋಷನ್‌ಗೆ ಕಿಚ್ಚ ಸುದೀಪ್ ಫಿದಾ

  ''ತುಂಟಾಟಿಕೆ, ಹುಡುಗಾಟ ಬುದ್ದಿ ಹಾಗೂ ಕಾಲೇಜಿನ ಪುಡಿ ರೌಡಿಗಳ ಸಹವಾಸ ಬಿಟ್ಟಿರುವ ಕರ್ಣ ಈಗ ಸಂಪೂರ್ಣವಾಗಿ ಬದಲಾಗಿದ್ದಾರೆ. ಬೆಳಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಯೋಗ ಅಭ್ಯಾಸ ಮಾಡ್ತಾರೆ. ಬಳಿಕ ಬೆಚ್ಚನೆ ಕಾಫಿ ಕುಡಿಯುತ್ತಾ ಸೂರ್ಯೋದಯ ಆನಂದಿಸುತ್ತಾರೆ. ಜೊತೆಗೆ ಪಕ್ಷಿ ವೀಕ್ಷಣೆ ಕೂಡ ಇವರ ಹೊಸ ಹವ್ಯಾಸವಾಗಿದೆ'' ಎಂದು ಬಿಲ್ಡಪ್ ಕೊಡುವ ಇಂಟ್ರೋ ನಂತರ ಬೇರೆಯದ್ದೇ ಟ್ವಿಸ್ಟ್ ಈ ವಿಡಿಯೋದಲ್ಲಿದೆ.

  ಒಟ್ನಲ್ಲಿ, ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರತಂಡದ ಹೊಸ ರೀತಿಯ ಪ್ರಚಾರ ಎಲ್ಲರಿಗೂ ಇಷ್ಟ ಆಗುತ್ತದೆ. ಪ್ರಮೋಷನ್‌ನಲ್ಲೇ ಈ ರೀತಿ ಮೋಡಿ ಮಾಡುತ್ತಿರುವ ಚಿತ್ರತಂಡ ಸಿನಿಮಾದಲ್ಲಿ ಯಾವ ರೀತಿ ಹಾವಳಿ ಮಾಡಿರಬೇಡ ಎಂಬ ಕುತೂಹಲ ಮೂಡಿದೆ.

  'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾಗೆ ನಿತಿನ್ ಕೃಷ್ಣಮೂರ್ತಿ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಗುಲ್‌ಮೊಹರ್‌ ಫಿಲ್ಮ್ಸ್‌ ಮತ್ತು ವರುಣ್‌ ಸ್ಟುಡಿಯೋಸ್‌ ಬ್ಯಾನರ್‌ನಲ್ಲಿ ತಯಾರಾಗಿದೆ.

  ಮೇ ತಿಂಗಳಲ್ಲಿ ತೆರೆಗೆ ಬರಲಿದ್ದೇವೆ ಎಂದು ಪ್ರಕಟಿಸಿದ್ದರು. ಸದ್ಯದ ಕೊರೊನಾ ವೈರಸ್ ಪರಿಸ್ಥಿತಿಯಲ್ಲಿ ಅದೇ ದಿನಕ್ಕೆ ಸಿನಿಮಾ ಬರುತ್ತಾ ಅಥವಾ ಬದಲಾವಣೆ ಏನಾದರೂ ಮಾಡಿಕೊಳ್ಳುತ್ತಾರಾ ಕಾದುನೋಡಬೇಕಿದೆ.

  English summary
  Hostel Hudugaru Bekagiddare film team shares New promotional video. they says Rakshit Shetty Not Starring In the The Worst Movie Ever Made.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X